23/12/2024

Law Guide Kannada

Online Guide

ಬಂಜೆತನ – ಕೋರ್ಟ್ ಮಹತ್ವದ ತೀರ್ಪು

ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ಪಡೆಯಲು ಬಂಜೆತನ ಸಕಾರಣವಾಗದು ಎಂದು ಪಟ್ನಾ ಹೈಕೋರ್ಟ್ ಹೇಳಿದೆ. ಮಗುವಿಗೆ ಜನ್ಮ ನೀಡುವ ಸಾಮರ್ಥ್ಯ ಹೊಂದದಿರುವುದು ವೈವಾಹಿಕ ಜೀವನದ ಸಮಸ್ಯೆಯ ಒಂದು ಅಂಶ ಮಾತ್ರ. ಹೀಗಾಗಿ, ದತ್ತು ತೆಗೆದುಕೊಳ್ಳುವುದು ಅಥವಾ ಮಕ್ಕಳನ್ನು ಪಡೆಯಲು ಪರ್ಯಾಯ ಆಯ್ಕೆಗಳ ಕುರಿತು ದಂಪತಿ ಆಲೋಚಿಸಬೇಕು ಎಂದು ನ್ಯಾಯಮೂರ್ತಿಗಳಾದ ಜಿತೇಂದ್ರಕುಮಾರ್ ಹಾಗೂ ಪಿ.ಬಿ. ಭಜಂತ್ರಿ ಅವರಿದ್ದ ನ್ಯಾಯಪೀಠ ಹೇಳಿದೆ. ನ್ಯಾಯಪೀಠವು ಸೋನುಕುಮಾರ್ ವಿರುದ್ಧ ರೀನಾ ದೇವಿ ಪ್ರಕರಣದ ವಿಚಾರಣೆ ನಡೆಸಿತು. ಮಗುವನ್ನು ಹೊಂದುವ ಸಾಮರ್ಥ್ಯ ಇಲ್ಲದಿರುವುದು ಮದುವೆಯನ್ನು ರದ್ದುಗೊಳಿಸಲು ಆಧಾರವಾಗದು. ದಂಪತಿ ಪೈಕಿ ಯಾರಲ್ಲಿಯೂ ಸಮಸ್ಯೆ ಕಂಡುಬರಬಹುದು. ಇಂತಹ ಸಂದರ್ಭಗಳಲ್ಲಿ ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ನೀಡಲು ಆಗದು’ ಎಂದು ನ್ಯಾಯಪೀಠ ಹೇಳಿದೆ. ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ದೇಶವನ್ನು ಪ್ರಶ್ನಿಸಿ ಸೋನುಕುಮಾರ್ ಸಲ್ಲಿಸಿದ್ದ ಮರುಪರಿಶೀಲನಾ ಮೇಲ್ಮನವಿಯನ್ನು ನ್ಯಾಯಪೀಠ ವಜಾಗೊಳಿಸಿದೆ.

ಲಾ ಗೈಡ್ ವರದಿ

ಲಾಗೈಡ್ ನ್ಯೂಸ್
ಸಾರ್ವಜನಿಕ ಹಿತಾದೃಷ್ಟಿಯಿಂದ ಹೈಕೋರ್ಟ್ ಜಿಲ್ಲೆಯ ನ್ಯಾಯಾಧೀಶರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ

Infertility

Copyright © All rights reserved. | Newsphere by AF themes.