23/12/2024

Law Guide Kannada

Online Guide

ಅಪಾರ್ಟ್ಮೆಂಟ್ ಗಳ ಈಜುಕೊಳದಲ್ಲಿ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ್ರೆ ಅದಕ್ಕೆ ಕ್ಷೇಮಾಭಿವೃದ್ಧಿ ಸಂಘವೇ ಹೊಣೆ – ಹೈಕೋರ್ಟ್ ತೀರ್ಪು

ಬೆಂಗಳೂರು: ವಸತಿ ಸಮುಚ್ಚಯ ಅಪಾರ್ಟ್ ಮೆಂಟ್ ಗಳಲ್ಲಿ ನಿರ್ಮಾಣಗೊಂಡಿರುವ ಈಜುಕೊಳದ ಜವಾಬ್ದಾರಿಯನ್ನ ಆ ಅಪಾರ್ಟ್ ಮೆಂಟ್ ನ ಕ್ಷೇಮಾಭಿವೃದ್ಧಿ ಸಂಘವೇ ಹೊರಬೇಕು. ಒಂದು ವೇಳೆ ಈಜುಕೊಳಗಳಲ್ಲಿ ನಿರ್ಲಕ್ಷದಿಂದ ಸಾವು ಸಂಭವಿಸಿದರೆ ಅದಕ್ಕೆ ಆ ಸಂಘವೇ ಹೊಣೆಯಾಗಲಿದೆ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಬೆಂಗಳೂರಿನ ಪ್ರೆಸ್ಟೀಜ್ ಲೇಕ್ ಸೈಡ್ ಹ್ಯಾಬಿಟ್ಯಾಟ್ ಹೋಂ ಓನರ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ವಜಾ ಮಾಡಬೇಕು ಎಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರು ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿದ ಕರ್ನಾಟಕ ಹೈಕೋರ್ಟ್ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಅರ್ಜಿಯನ್ನು ಭಾಗಶಃ ಪುರಸ್ಕರಿಸಿ ಈ ತೀರ್ಪು ನೀಡಿದೆ.

ಅಪಾರ್ಟ್ಮೆಂಟ್ ಗಳಲ್ಲಿ ನಿರ್ಮಿಸುವ ಈಜುಕೊಳಗಳಲ್ಲಿ ಸಂಭವಿಸುವ ಸಾವು ಅಥವಾ ಅವಘಡಗಳನ್ನು ತಪ್ಪಿಸಲು ಜೀವ ರಕ್ಷಕರ ನೇಮಕ ಮತ್ತು ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳದಿದ್ದರೆ ಆ ಅಪಾರ್ಟ್ ಮೆಂಟಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘವೇ ಹೊಣೆಯಾಗಿದೆ. ಆ ಸಂಘದ ಪದಾಧಿಕಾರಿಗಳ ವಿರುದ್ಧ ಕ್ರಿಮಿನಲ್ ನಿರ್ಲಕ್ಷದ ಆರೋಪಕ್ಕೆ ಗುರಿಪಡಿಸಬಹುದಾಗಿದೆ ಎಂದು ನ್ಯಾಯಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.