23/12/2024

Law Guide Kannada

Online Guide

ಭಾರತೀಯ ನ್ಯಾಯ ಸಂಹಿತೆ: ಆರೋಪಿಯನ್ನ ವಿಚಾರಣೆ ಕರೆಯುವ ವೇಳೆ ಪೊಲೀಸರು ಚೆಕ್ ಲಿಸ್ಪ್ ಒದಗಿಸಿವುದು ಕಡ್ಡಾಯ

ಬೆಂಗಳೂರು: ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 35ರ ಪ್ರಕಾರ ದಾಖಲಾದ ಯಾವುದೇ ಆರೋಪದ ಕುರಿತಾಗಿ ಆರೋಪಿಯನ್ನು ವಿಚಾರಣೆಗೆ ಕರೆಯುವಾಗ ಪೊಲೀಸರು ನೋಟಿಸಿನಲ್ಲಿ ವಿಚಾರಣೆ ಮಾಡಲಿರುವ ಪ್ರಕರಣದ ಅಪರಾಧದ ಸಂಖೆ, ಪ್ರಥಮ ಮಾಹಿತಿ ವರದಿಯ ಪ್ರತಿ, ಅಪರಾಧದ ಬಗ್ಗೆ ಮಾಹಿತಿ ಮತ್ತು ದೂರಿನ ಸಂಕ್ಷಿಪ್ತ ರೂಪವನ್ನು ಒಳಗೊಂಡಿರುವ ಚೆಕ್ ಲಿಸ್ಪ್ ಒದಗಿಸಿವುದು ಕಡ್ಡಾಯವಾಗಿದೆ.

ಹೌದು, ಭಾರತೀಯ ನ್ಯಾಯ ಸಂಹಿತೆ (BNS) ಯಡಿ ಎಫ್ಐಆರ್ ದಾಖಲಿಸುವುದು ಮತ್ತು ವಿಚಾರಣೆ ನಡೆಸುವ ವಿಚಾರದಲ್ಲಿ ಪಾಲಿಸಬೇಕಾದ ನಿಯಮ ಮತ್ತು ನಿಬಂಧನೆಗಳಲ್ಲಿ ಹಲವು ಬದಲಾವಣೆಗಳನ್ನು, ಮಾಡಲಾಗಿದೆ. ಈ ಸಂಬಂಧ 19-07-2024ರ0ದು ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪಿನಲ್ಲಿ ಈ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗಿದ್ದು, ಈ ಅಗತ್ಯ ಮಾಹಿತಿಗಳನ್ನು ನೀಡಬೇಕೆಂದು ಪೊಲೀಸರಿಗೆ ನಿರ್ದೇಶನವನ್ನೂ ನೀಡಲಾಗಿದೆ.

ಟಿ.ಆರ್. ಶಿವಪ್ರಸಾದ್ ಗಿs ಕರ್ನಾಟಕ ಸರ್ಕಾರ ಮತ್ತಿತರರು ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ನ್ಯಾ. ಎ0. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಹಾಗೂ ನಿರ್ದೇಶನವನ್ನು ನೀಡಿದೆ.

ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 35ರ ಪ್ರಕಾರ ದಾಖಲಾದ ಯಾವುದೇ ಆರೋಪದ ಕುರಿತಾಗಿ ಪೊಲೀಸರು ಆರೋಪಿಯನ್ನು ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆಸಿಕೊಳ್ಳಬಹುದಾಗಿದೆ. ಹಾಗೆ, ಕರೆಸಿಕೊಳ್ಳಲು ಅವರು ಸೆಕ್ಷನ್ 35ರ ಅಡಿಯಲ್ಲಿ ನೋಟೀಸ್ ನೀಡಲೇಬೇಕು. ಮತ್ತು ಈ ನೋಟಿಸ್ ನಲ್ಲಿ ವಿಚಾರಣೆ ಮಾಡಲಿರುವ ಪ್ರಕರಣದ ಅಪರಾಧದ ಸಂಖೆ, ಪ್ರಥಮ ಮಾಹಿತಿ ವರದಿಯ ಪ್ರತಿ, ಅಪರಾಧದ ಬಗ್ಗೆ ಮಾಹಿತಿ ಮತ್ತು ದೂರಿನ ಸಂಕ್ಷಿಪ್ತ ರೂಪವನ್ನು ಒಳಗೊಂಡಿರುವ ಚೆಕ್ ಲಿಸ್ಪ್ ಅನ್ನು ಕಡ್ಡಾಯವಾಗಿ ಒದಗಿಸಬೇಕು.

ಒ0ದು ವೇಳೆ, ಈ ಎಲ್ಲ ಅಗತ್ಯ ಮಾಹಿತಿ ಇರುವ ಚೆಕ್ ಲಿಸ್ಟ್ ಇಲ್ಲದೇ ಇದ್ದರೆ, ಅದು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 35ರ ಪ್ರಕಾರ ನೋಟೀಸ್ ಎಂದು ಹೇಳಲು ಬರುವುದಿಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ರಾಜ್ಯ ಗೃಹ ಕಾರ್ಯದರ್ಶಿ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸೂಕ್ತ ಮಾರ್ಗಸೂಚಿ ಹೊರಡಿಸಬೇಕು ಎ0ದು ನಿರ್ದೇಶಿಸಲಾಗಿದೆ.

ಒ0ದು ವೇಳೆ, ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 35ರ ಪೊಲೀಸರು ನೀಡುವ ನೋಟೀಸ್ ನಲ್ಲಿ ಅಗತ್ಯ ಚೆಕ್ ಲಿಸ್ಟ್ ಒದಗಿಸದಿದ್ದರೆ ಅಂತಹ ಆರೋಪಿಯು ಠಾಣಾಧಿಕಾರಿ ಮು0ದೆ ಹಾಜರಾಗುವ ಅವಶ್ಯಕತೆ ಇಲ್ಲ. ಹಾಗೆಯೇ, ಆರೋಪಿ ವಿರುದ್ದ ಪೊಲೀಸರು ಬಲವ0ತದ ಕ್ರಮ ಕೈಗೊಳ್ಳುವ0ತಿಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.