ಪತಿಯ ಬಗ್ಗೆ ಆಧಾರರಹಿತ ಆರೋಪ : ಮಾನಸಿಕ ಕ್ರೌರ್ಯ-ದೆಹಲಿ ಹೈಕೋರ್ಟ್
ನವದೆಹಲಿ: ಪತಿಯ ಬಗ್ಗೆ ಪತ್ನಿ ಮಾಡುವ ಆಧಾರರಹಿತ ಆರೋಪಗಳು ಪತ್ನಿ ನಡೆಸುವ ಮಾನಸಿಕ ಕ್ರೌರ್ಯವಾಗಿದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಪತಿಯ ವಿರುದ್ಧ ವರದಕ್ಷಿಣೆ ಆರೋಪ, ಪರ ಸ್ತ್ರೀಯೊಂದಿಗೆ ಅಕ್ರಮ ಸಂಬಂಧದ ಆರೋಪ, ನಪುಂಸಕ ಎಂದು ಕರೆಯುವುದು, ಪುರುಷ ಪರೀಕ್ಷೆಗೆ ಆಗ್ರಹಪಡಿಸುವುದು ಪತಿಯನ್ನು ಮಾನಸಿಕ ಯಾತನೆಗೆ ದೂಡುತ್ತದೆ.
ಪತಿಗೆ ಕಿರುಕುಳ ನೀಡುವುದು, ಆಧಾರರಹಿತ ಆರೋಪಗಳನ್ನು ಮಾಡುವುದು ಕ್ರೌರ್ಯಕ್ಕೆ ಸಮನಾಗಿದೆ ಎಂದು ದೆಹಲಿ ಹೈಕೋರ್ಟ್ ಪ್ರಕರಣವೊಂದರ ತೀರ್ಪಿನಲ್ಲಿ ಹೇಳಿದೆ.
ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠವು ನೀಡಿರುವ ಈ ತೀರ್ಪಿನಲ್ಲಿ ಪರಸ್ಪರ ನಂಬಿಕೆ, ವಿಶ್ವಾಸವೇ ದಾಂಪತ್ಯಕ್ಕೆ ಬಹಳ ಮುಖ್ಯವಾದುದು. ಸಂಗಾತಿಯ ಬಗ್ಗೆ ಗೌರವ ಬಹಳ ಮುಖ್ಯ ಎಂದು ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ