ರಕ್ತ ಸ೦ಬಂಧಿಗಳ ಪರ GPA ಆಸ್ತಿ ವರ್ಗಾವಣೆ ದಸ್ತಾವೇಜಿಗೆ ಮುದ್ರಾ೦ಕ ಶುಲ್ಕ ಅನ್ವಯವಾಗಲ್ಲ – ಹೈಕೋರ್ಟ್
ಕರ್ನಾಟಕ ಮುದ್ರಾ0ಕ ಶುಲ್ಕ ಕಾಯ್ದೆಯಡಿ ಹೆಸರಿಸಲಾದ ರಕ್ತ ಸ0ಬಂಧಿಗಳ ಪರವಾಗಿ ಬರೆದುಕೊಟ್ಟ ಜನರಲ್ ಪವರ್ ಆಫ್ ಅಟಾರ್ನಿ (ಜಿಪಿಎ) ಆಸ್ತಿ ವರ್ಗಾವಣೆಯ ದಸ್ತಾವೇಜಿಗೆ ಪಾವತಿಸಬೇಕಾದ ಮುದ್ರಾ0ಕ ಶುಲ್ಕ ಅನ್ವಯವಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ಪ್ರಕಟಿಸಿದೆ.
ಎಸ್.ಕೆ. ಉದಯಶ0ಕರ್ vs ಬಿ.ಎಸ್. ನಾಗೇಂದ್ರ ಪ್ರಕರಣದಲ್ಲಿ ಹೈಕೋರ್ಟ್ ಈ ಆದೇಶ ಹೊರಡಿಸಿದೆ. ಕರ್ನಾಟಕ ಮುದ್ರಾ0ಕ ಕಾಯ್ದೆ (Karnataka stamp act) ಸೆಕ್ಷನ್ 41 (eb)ರ ಪ್ರಕಾರ, ರಕ್ತ ಸ೦ಬ೦ಧಿಗಳನ್ನೇ ಅಟಾರ್ನಿಯನ್ನಾಗಿ ನೇಮಿಸಿದರೆ, ಆ GPA ಮೂಲಕ ಮಾಡುವ ಹಕ್ಕು ವರ್ಗಾವಣೆಗೆ ಹೆಚ್ಚುವರಿ ಮುದ್ರಾ0ಕ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎ0ದು ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಭಾರತೀಯ ಒಪ್ಪಂದ ಕಾಯ್ದೆ ಹಾಗೂ ಪವರ್ಸ್ ಆಫ್ ಅಟಾರ್ನಿ ಕಾಯ್ದೆ 1882ರ ನಿಯಮಗಳ ಪ್ರಕಾರ ಪವರ್ ಆಫ್ ಅಟಾರ್ನಿಯನ್ನು ಜಾರಿಗೊಳಿಸಬಹುದು ಮತ್ತು ಅದಕ್ಕೆ ಕಾನೂನಿನ ಸಿಂಧುತ್ವ ದೊರೆಯುತ್ತದೆ. ಅಧಿಕಾರ ಪತ್ರ ಅಟಾರ್ನಿ ಹೊಂದಿರುವವರು GPA ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸುವ ಮೂಲಕ ಸ್ಥಿರ ಆಸ್ತಿಯ ಕ್ರಯ ಪತ್ರ ಹಕ್ಕು ವರ್ಗಾವಣೆ ಪತ್ರವನ್ನು, ಕಾರ್ಯಗತಗೊಳಿಸಬಹುದು ಮತ್ತು ಹಕ್ಕುಗಳ ವರ್ಗಾವಣೆಯನ್ನು ಪಡೆಯುವವರ ಪರವಾಗಿ ಟೈಟಲ್ ಹಕ್ಕನ್ನು ವರ್ಗಾಯಿಸಬಹುದು ಎ0ದು ನ್ಯಾಯಪೀಠ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ