ಚೆಕ್ ಅಮಾನ್ಯ ಪ್ರಕರಣದಲ್ಲಿ ಕೇಸ್ ದಾಖಲಿಸಬೇಕೆ..? ಹಾಗಾದ್ರೆ ತಿಳಿದುಕೊಂಡಿರಬೇಕಾದ ಅಂಶಗಳೇನು…?
ಬೆಂಗಳೂರು: ಹಣಕಾಸಿನ ವಹಿವಾಟುಗಳಲ್ಲಿ, ಚೆಕ್ ಗಳು ದೀರ್ಘಕಾಲದವರೆಗೆ ಜನಪ್ರಿಯ ಮತ್ತು ವ್ಯಾಪಕವಾಗಿ ಬಳಸಲಾಗುವ ಪಾವತಿ ವಿಧಾನವಾಗಿದೆ. ಸಾಕಷ್ಟು ಹಣ ಅಥವಾ ಇತರ ಕಾರಣಗಳಿಂದಾಗಿ ಚೆಕ್ ಅನ್ನು ಅವಮಾನಿಸಿದಾಗ, ಅದು ನೀಡುವವರು ಮತ್ತು ಸ್ವೀಕರಿಸುವವರಿಬ್ಬರಿಗೂ ಪರಿಣಾಮಗಳ ಸರಣಿಗೆ ಕಾರಣವಾಗಬಹುದು. ಚೆಕ್ ಬೌನ್ಸ್ ಆದಲ್ಲಿ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.
ಚೆಕ್ ಅಮಾನ್ಯ ಪ್ರಕರಣ ಇತ್ತೀಚಿಗೆ ಸಾಮಾನ್ಯವಾಗುತ್ತಿದ್ದು ಆದರೆ, ಚೆಕ್ ಬೌನ್ಸ್ ಪ್ರಕರಣದಲ್ಲಿ ಹೆಚ್ಚಿನ ಪ್ರಕರಣಗಳಲ್ಲಿ ದೂರುದಾರನಿಗೆ ಗೆಲುವಾಗುತ್ತದೆ. ಹಾಗಾಗಿ, ಬ್ಯಾಂಕ್‌ನ ಚೆಕ್ ನೀಡುವಾಗ ಜಾಗ್ರತೆ ವಹಿಸಿ, ಅದು ಬೌನ್ಸ್ ಆಗದಂತೆ ನೋಡಿಕೊಳ್ಳುವುದು ಅಗತ್ಯ.
The Negotiable Instrument Act 1881, section 138 ಪ್ರಕಾರ ಅಮಾನ್ಯಗೊಂಡ ಚೆಕ್ ಬಗ್ಗೆ ಕೇಸು ದಾಖಲಿಸಬಹುದು. ಚೆಕ್ ನೀಡಿದವರ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದೆ ಅಥವಾ ಅನ್ಯ ಕಾರಣಗಳಿಂದ ಅಮಾನ್ಯವಾದರೆ ಅದು ಈ ಕಾಯ್ದೆ ಪ್ರಕಾರ ದಂಡನಾರ್ಹ ಅಪರಾಧವಾಗುತ್ತದೆ. ಈ ಅಪರಾಧಕ್ಕೆ ಒಂದು ವರ್ಷಕ್ಕೆ ಮೀರದ ಜೈಲು ಅಥವಾ ಚಕ್ಕಿನ ಮೊತ್ತದ ದುಪ್ಪಟ್ಟಿಗೆ ಹೆಚ್ಚಾಗದ ದಂಡ ಅಥವಾ ಇವುಗಳೆರಡರಿಂದಲೂ ಶಿಕ್ಷಿಸಬಹುದಾಗಿದೆ. ಚೆಕ್ ಅಮಾನ್ಯವಾದಾಗ ಸಿವಿಲ್ ವ್ಯಾಜ್ಯವನ್ನೂ ದಾಖಲಿಸಬಹುದಾಗಿದೆ. ಕ್ರಿಮಿನಲ್ ಕೇಸ್ ಕೂಡ ಹಾಕಬಹುದು. ಸಿವಿಲ್ ವ್ಯಾಜ್ಯ ದಾಖಲಿಸಬೇಕಾದರೆ ನ್ಯಾಯಾಲಯ ಶುಲ್ಕ ಅಂದರೆ ಕೋರ್ಟ್ ಫೀ ಪಾವತಿ ಮಾಡಬೇಕು. ಸಿವಿಲ್ ವ್ಯಾಜ್ಯದಲ್ಲಿ ಸಾಲಗಾರ ಎದುರುದಾರ/Defendent ಆಗಿರುತ್ತಾನೆ, ಕ್ರಿಮಿನಲ್ ಕೇಸಿನಲ್ಲಿ ಅವನು ಆರೋಪಿ/ಂಛಿಛಿuseಜ ಆಗಿರುತ್ತಾನೆ, ಅವನನ್ನು ಆರೋಪಿ ಕಟ್ಟೆಯಲ್ಲಿ ನಿಲ್ಲಿಸಲಾಗುವುದು.
ಸಿವಿಲ್ ವ್ಯಾಜ್ಯದಲ್ಲಿ ಕಾನೂನುರೀತ್ಯಾ ಬರಬೇಕಾದ ಹಣದ ಜೊತೆಗೆ ನೀವು ಬಡ್ಡಿಗೆ ಬೇಡಿಕೆಯನ್ನೂ ಸಲ್ಲಿಸಬಹುದು. ಇಲ್ಲಿ ವಾದ-ಪ್ರತಿವಾದ ಹಾಗೂ ಹಾಜರುಪಡಿಸಿದ ದಾಖಲೆಯನ್ನು ಪರಿಗಣಿಸಿ ನ್ಯಾಯಾಲಯ ಡಿಕ್ರಿ ಮಾಡಿದರೆ ಆ ಹಣವನ್ನು ವಸೂಲು ಮಾಡಲು ಮತ್ತೊಂದು ಪ್ರಕರಣವನ್ನು ದಾಖಲಿಸಬೇಕು. ಆದರೆ ಕ್ರಿಮಿನಲ್ ಕೇಸಿನಲ್ಲಿ ನಿಮ್ಮ ಹಣ ವಸೂಲು ಮಾಡಲು ಅವಕಾಶ ಇದೆ. ಅದರ ಜೊತೆಗೆ ಸಾಲಗಾರನನ್ನು ಜೈಲು ಶಿಕ್ಷೆಗೂ ಗುರಿಪಡಿಸಬಹುದು. ಸಿವಿಲ್ ನ್ಯಾಯಾಲಯ ತೀರ್ಪು ನೀಡಲು ಸ್ವಲ್ಪ ಹೆಚ್ಚಿನ ಸಮಯ ಬೇಕಾಗಬಹುದು. ಚೆಕ್ ಅಮಾನ್ಯ ಆಗುವುದನ್ನು ಒಂದು ತಾಂತ್ರಿಕ ಅಪರಾಧ ಎಂದು ಪರಿಗಣಿಸಲಾಗಿದೆ. ಆದುದರಿಂದ ಕಾನೂನು ಕ್ರಮಗಳನ್ನು ಕೈಗೊಳ್ಳುವಾಗ ಕೆಲವು ನಿಯಮಗಳನ್ನು ಜಾಗ್ರತೆಯಿಂದ ಪಾಲಿಸಬೇಕಾಗುತ್ತದೆ, ಇಲ್ಲವಾದಲ್ಲಿ ಇದು ಅರೋಪಿಗೆ ಗುಣವಾಗಬಹುದು. ಕಾನೂನಿನ ಅಜ್ಞಾನಕ್ಕೆ ಕ್ಷಮೆ ಇಲ್ಲ. ಇಲ್ಲಿನ ಮಹತ್ವದವಾಗಿ ಗಮನಿಸಬೇಕಾದ ಅಂಶಗಳೆಂದರೆ,
1. ಚೆಕ್ ನ ಮುಖದಲ್ಲಿ ನಮೂದು ಮಾಡಿದ ದಿನದಿಂದ ಮೂರು ತಿಂಗಳವರೆಗೆ ಮಾತ್ರ ಅದು ಚಾಲ್ತಿಯಲ್ಲಿ ಇರುತ್ತದೆ. ಮೂರು ತಿಂಗಳ ಬಳಿಕ ಚೆಕ್‌ಗೆ ಯಾವುದೇ ಬೆಲೆ ಇರುವುದಿಲ್ಲ. ಅಂತಹ ಚೆಕ್ ಬೌನ್ಸ್ ಆದರೆ ಪ್ರಕರಣ ದಾಖಲಿಸಲಾಗದು. ಆದರೆ, ಮೂರು ತಿಂಗಳೊಳಗೆ ಎಷ್ಟು ಸಲ ಬೇಕಾದರೂ ನಗದೀಕರಣಕ್ಕೆ ಹಾಕಬಹುದು.
2. ಚೆಕ್ ನೀಡಿದವರ ಖಾತೆಯಲ್ಲಿ ಸಾಕಷ್ಟು ಹಣವಿಲ್ಲವೆಂಬ ಬ್ಯಾಂಕ್ ಹಿಂಬರಹ ನೀಡಿದ ಒಂದು ತಿಂಗಳ ಒಳಗೆ ಕಾನೂನುರೀತ್ಯಾ ಡಿಮ್ಯಾಂಡ್ ನೋಟೀಸ್ ಜಾರಿಗೊಳಿಸಬೇಕು. ಒಂದು ತಿಂಗಳ ನಂತರ ಡಿಮ್ಯಾಂಡ್ ನೋಟೀಸ್ ಕಳಿಸಿದರೆ ಅಂತಹ ಪ್ರಕರಣವನ್ನು Negotiable Instrument Act ನಡಿ ದಾಖಲಿಸಲು ಬರುವುದಿಲ್ಲ.
3. ಹಾಗೆ ಕಳಿಸಿದ ನೋಟಿಸನ್ನು ಚೆಕ್ ನೀಡಿದಾತ ಸ್ವೀಕರಿಸಿದ ಅಥವಾ ಪೋಸ್ಟಲ್ ಸೂಚನೆಯನ್ನು ಸ್ವೀಕರಿಸಿದ 15 ದಿನಗಳೊಳಗೆ ಚೆಕ್ಕಿನ ಹಣವನ್ನು ಪಾವತಿ ಮಾಡದಿದ್ದರೆ ಅಂದಿನಿಂದ ಒಂದು ತಿಂಗಳೊಳಗೆ ನ್ಯಾಯವ್ಯಾಪ್ತಿಗೆ ಒಳಪಟ್ಟ ಸಂಬಂಧಪಟ್ಟ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು ಮಾಡಬೇಕು.
ಈ ನಿಯಮಗಳನ್ನು ಎಚ್ಚರಿಕೆಯಿಂದ ಹಾಗೂ ಸಾಕಷ್ಟು ಜಾಗರೂಕತೆಯಿಂದ ವಕೀಲರ ಮೂ ಪಾಲಿಸಬೇಕು.
ಫಿರ್ಯಾದಿ ಖಾಸಗಿ ದೂರು ದಾಖಲು ಮಾಡುವಾಗ ಬೌನ್ಸ್ ಆದ ಚೆಕ್, ಬ್ಯಾಂಕಿನ ಹಿಂಬರಹ, ಚೆಕ್ಕಿನ ಹಣ ನೀಡಬೇಕೆಂದು ನೀವು ನೀಡಿದ ಡಿಮ್ಯಾಂಡ್ ನೋಟಿಸಿನ ಕಚೇರಿ ಪ್ರತಿ ಮತ್ತು ಆ ನೋಟಿಸು ಸಾಲಗಾರನಿಗೆ ಜಾರಿಯಾದ ಬಗ್ಗೆ ರಶೀದಿ / acknowledgment ಇತ್ಯಾದಿ ದಾಖಲೆಗಳನ್ನು ಹಾಜರುಪಡಿಸಬೇಕು.
ನ್ಯಾಯಾಲಯ ದೂರನ್ನು ಪರಿಗಣಿಸಿ ಸಂಜ್ಞೆಯತೆ ಪಡೆದುಕೊಂಡ ನಂತರ ಆರೋಪಿ ಯಾ ಚೆಕ್ ನೀಡಿದವರಿಗೆ ಸಮನ್ಸ್ ಕಳುಹಿಸುತ್ತದೆ. ಆದುದರಿಂದ ಚೆಕ್ ಕೊಟ್ಟ ಮೇಲೆ ಚೆಕ್ ಸಕಾಲದಲ್ಲಿ ನಗದೀಕರಿಸುವಂತೆ ನೋಡಿಕೊಳ್ಳಿ ಶಿಕ್ಷೆಯಿಂದ ಪಾರಾಗಬಹುದು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ