23/12/2024

Law Guide Kannada

Online Guide

Selling breast milk – The State High Court has now directed to conduct a study and provide information on whether there is such a law

ಎದೆ ಹಾಲು ಮಾರಾಟ – ಹೈಕೋರ್ಟ್ ತಾಕೀತು

ಬೆಂಗಳೂರು:  ದೇಶದಲ್ಲಿ ತಾಯಿ ಎದೆಹಾಲು ಸಂಗ್ರಹ ಹಾಗೂ ಮಾರಾಟವನ್ನು ನಿಷೇಧಿಸುವ ಯಾವುದಾದರೂ ಕಾನೂನು ಇದೆಯೇ?

ಇಂತಹ ಕಾನೂನು ಇದೆಯೇ ಎಂಬ ಬಗ್ಗೆ ಅಧ್ಯಯನ ನಡೆಸಿ ಮಾಹಿತಿ ನೀಡುವಂತೆ ರಾಜ್ಯ ಹೈಕೋರ್ಟ್ ಈಗ ಸೂಚಿಸಿದೆ.

ದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಎದೆಹಾಲು ಮಾರಾಟ ಮಾಡುವ ಜಾಲವನ್ನು ವಿಸ್ತರಿಸುವುದನ್ನು ಬೆಂಗಳೂರಿನ ಮುನೇಗೌಡ ಎಂಬುವರು ಆಕ್ಷೇಪಿಸಿ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದಾರೆ. ನ್ಯಾಯಾಲಯ ಈ ದಾವೆಯ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ದೇಶದಲ್ಲಿ ತಾಯಿ ಎದೆ ಹಾಲು ಸಂಗ್ರಹ ಹಾಗೂ ಮಾರಾಟವನ್ನು ನಿಷೇಧಿಸುವ ಯಾವುದಾದರೂ ಕಾನೂನು ಇದ್ದರೆ ಅಧ್ಯಯನ ಮಾಡುವಂತೆ ಅರ್ಜಿದಾರರ ಪರ ವಕೀಲರಿಗೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಮತ್ತು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸೂಚಿಸಿತು. ವಿಚಾರಣೆಯನ್ನು ಜೂನ್ 10ಕ್ಕೆ ಮುಂದೂಡಿತು.

ಅರ್ಜಿದಾರರ ಪರ ವಕೀಲ ಬಿ.ವಿಶ್ವೇಶ್ವರಯ್ಯ ಅವರು ವಾದ ಮಂಡಿಸಿ ಕೆಲವು ಬಹುರಾಷ್ಟ್ರೀಯ ಕಂಪನಿಗಳು ತಾಯಿ ಎದೆ ಹಾಲನ್ನು ವಾಣಿಜ್ಯೀಕರಣಗೊಳಿಸುತ್ತಿದೆ. ಇದು ಅನೈತಿಕವಾದುದು. ಇದನ್ನು ತಡೆಯಬೇಕು. ಈ ಕುರಿತು ನಿರ್ದಿಷ್ಟ ಕಾನೂನು ರಚಿಸಲು ಸರಕಾರಕ್ಕೆ ನಿರ್ದೇಶಿಸಬೇಕೆಂದು ಮನವಿ ಮಾಡಿದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.