SC, ST ಒಳ ಮೀಸಲಾತಿಗೆ ಸುಪ್ರೀಂಕೋರ್ಟ್ ಅಸ್ತು: ಮಹತ್ವ ತೀರ್ಪು ಪ್ರಕಟಿಸಿದ ನ್ಯಾಯಪೀಠ
ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಒಳ ಮೀಸಲಾತಿಯಿಂದ ಸಮಾನತೆಗೆ ಧಕ್ಕೆಯಾಗಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತರ್ಪು ನೀಡಿದೆ.
ಏಳು ನ್ಯಾಯಾಧೀಶರ ಪೀಠದಲ್ಲಿ 6:1 ಬಹುಮತದಿಂದ ಎಸ್.ಸಿ, ಎಸ್ ಟಿ ಒಳ ಮೀಸಲಾತಿಗೆ ಒಪ್ಪಿಗೆ ನೀಡಲಾಗಿದೆ. ಒಳ ಮೀಸಲಾತಿ ಸಂಬಂಧ ಪಂಜಾಬ್-ಹರಿಯಾಣ ಹೈಕೋರ್ಟ್ 2010 ರಲ್ಲಿ ನೀಡಿದ್ದ ತರ್ಪಿನ ವಿರುದ್ಧ ಪಂಜಾಬ್ ರ್ಕಾರ ಸೇರಿದಂತೆ ರ್ಜಿಗಳು ಸುಪ್ರೀಂ ಕರ್ಟ್ಗೆ ಸಲ್ಲಿಕೆಯಾಗಿದ್ದವು. ಸಿಜೆಐ ಚಂದ್ರಚೂಡ್ ನೇತೃತ್ವದ ನ್ಯಾಯಮರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ.ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಮಿಶ್ರಾ ಅವರನ್ನೊಳಗೊಂಡ ಪೀಠವು ರ್ಜಿ ವಿಚಾರಣೆ ನಡೆಸಿ ಈ ತರ್ಪು ನೀಡಿದೆ.
7 ನ್ಯಾಯಮರ್ತಿಗಳ ಪೈಕಿ ನ್ಯಾ. ಬೇಲಾ ತ್ರಿವೇದಿ ಅವರು ಮಾತ್ರ ಒಳ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿದ್ದು , ಉಳಿದ 6 ನ್ಯಾಯಮರ್ತಿಗಳು ಒಳ ಮೀಸಲಾತಿ ಪರ ತರ್ಪು ನೀಡಿದ್ದಾರೆ. ತರ್ಪು ಪ್ರಕಟಿಸಿದ ಸಿಜೆಐ ಡಿ.ವೈ. ಚಂದ್ರಚೂಡ್, ಎಸ್ಸಿ, ಎಸ್ಟಿಗಳ ಯಾವುದೇ ಉಪ ರ್ಗೀಕರಣವು ಸಂವಿಧಾನದ 14ನೇ ವಿಧಿಯನ್ನು (ಸಮಾನತೆಯ ಹಕ್ಕು) ಉಲ್ಲಂಘಿಸುತ್ತದೆ ಎಂಬ ಇ.ವಿ. ಚಿನ್ನಯ್ಯ ಪ್ರಕರಣದ 2004ರ ತರ್ಪನ್ನು ತಳ್ಳಿಹಾಕಿದ್ದೇವೆ ಎಂದು ಹೇಳಿದರು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪ ರ್ಗೀಕರಣಕ್ಕೆ ಅವಕಾಶವಿದೆ. ಒಳ ಮೀಸಲಾತಿಯಿಂದ ಸಮಾನತೆಯ ನಿಯಮ ಉಲ್ಲಂಘನೆಯಾಗಲ್ಲ. ಎಸ್ ಸಿ ಎಸ್ ಟಿ ಒಳ ಮೀಸಲಾತಿಯಿಂದ ಸಮಾನತೆಗೆ ಧಕ್ಕೆ ಇಲ್ಲ. ಉಪ ಪಂಗಡಗಳ ಮೀಸಲಾತಿಯಿಂದ ಸಮಾನತೆಗೆ ಸಮಸ್ಯೆ ಇಲ್ಲ. ಒಳ ಮೀಸಲಾತಿ ಕಾನೂನು ಬದ್ಧ ಎಂದು ಸುಪ್ರೀಂಕರ್ಟ್ ನ್ಯಾಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ