23/12/2024

Law Guide Kannada

Online Guide

Sale of biscuits under prescribed weight: Rs 60 thousand for this organization fined

ನಿಗದಿತ ಪ್ರಮಾಣಕ್ಕಿಂತ ಕಡಿಮೆ ತೂಕದ ಬಿಸ್ಕೆಟ್ ಮಾರಾಟ: ಈ ಸಂಸ್ಥೆಗೆ ಬಿತ್ತು 60 ಸಾವಿರ ರೂ. ಫೈನ್..
ಕೇರಳ: ಯಾವುದೇ ವಸ್ತುಗಳನ್ನ ಕೊಂಡಾಗ ತೂಕದಲ್ಲಿ ಅಥವಾ ಗುಣಮಟ್ಟದಲ್ಲಿ ಮೋಸವಾದರೇ ಗ್ರಾಹಕರು ಗ್ರಾಹಕರ ನ್ಯಾಯಾಲಯದ ಮೊರ ಹೋಗಿ ದೂರು ನೀಡಿ ತಮಗಾದ ಅನ್ಯಾಯದ ಬಗ್ಗೆ ದಾಖಲೆ ಸಮೇತ ಪ್ರಸ್ತಾಪಿಸಿ ಪರಿಹಾರವನ್ನ ಪಡೆಯಬಹುದು. ಅಂತೆಯೇ ನಿಗದಿತ ಪ್ರಮಾಣಕ್ಕಿಂತ ಕಡಿಮೆ ತೂಕದ ಬಿಸ್ಕೆಟ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಪ್ರಖ್ಯಾತ ಬಿಸ್ಕೆಟ್ ತಯಾರಕ ಬ್ರಿಟಾನಿಯಾ ಕಂಪೆನಿ ವಿರುದ್ದ ಗ್ರಾಹಕರೊಬ್ಬರು ತಮಗಾದ ಮೋಸದ ಬಗ್ಗೆ ದೂರು ಸಲ್ಲಿಸಿ ಕೇಸ್ ನಲ್ಲಿ ಜಯ ಸಾಧಿಸಿದ್ದಾರೆ.

ಹೌದು, ಬಿಸ್ಕೇಟ್ ಪ್ಯಾಕೇಟ್ ನಲ್ಲಿ ನಮೂದಿಸಿದ ಪ್ರಮಾಣಕ್ಕಿ0ತ ಕಡಿಮೆ ತೂಕದ ಬಿಸ್ಕೆಟ್ ಪ್ಯಾಕೇಟ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಬ್ರಿಟಾನಿಯಾ ಕಂಪೆನಿಗೆ ಕೇರಳದ ತ್ರಿಶ್ಶೂರ್ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 60 ಸಾವಿರ ರೂ. ದ0ಡ ವಿಧಿಸಿ ಬಿಸಿ ಮುಟ್ಟಿಸಿದೆ.

ತ್ರಿಶ್ಶೂರ್ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ ಸಿ.ಟಿ. ಸಾಬು, ಸದಸ್ಯರಾದ ಶ್ರೀಜಾ ಎಸ್. ಮತ್ತುರಾಮಮೋಹನ್ ಆರ್. ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಜಾರ್ಜ್ ಥಟ್ಟಿಲ್ ಎ0ಬ ಗ್ರಾಹಕರು ಬ್ರಿಟಾನಿಯಾ ಕಂಪೆನಿ ವಿರುದ್ದ ದೂರು ನೀಡಿದ್ದರು.

ತಯಾರಕರು ಮತ್ತು ಮಾರಾಟಗಾರರಿಬ್ಬರೂ ಅನ್ಯಾಯದ ವ್ಯಾಪಾರಿ ಅಭ್ಯಾಸದಲ್ಲಿ ತೊಡಗಿದ್ದು, ಇದು. ಗ್ರಾಹಕ ಸ0ರಕ್ಷಣಾ ಕಾಯಿದೆ ಮತ್ತು ಕಾನೂನು ಮಾಪನ ಶಾಸ್ತ್ರದ ಕಾಯ್ದೆ 2009ರ ಸೆಕ್ಷನ್ 30ರ (ಪ್ರಮಾಣ. ಮತ್ತು ಅಳತೆಗೆ ವಿರುದ್ದವಾದ ವಹಿವಾಟಿಗೆ ದ0ಡ) ಉಲ್ಲಂಘನೆಯಾಗಿದೆ ಎ0ದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ…
ಬ್ರಿಟಾನಿಯಾ ನ್ಯೂಟ್ರಿ ಚಾಯ್ಸ್ ಥಿನ್ ಆರೋ ರೂಟ್ ಬಿಸ್ಕೆಟ್ ನ ಎರಡು ಪ್ಯಾಕೇಟ್ ಗಳನ್ನು ದೂರುದಾರ ಜಾರ್ಜ್ ಥಟ್ಟಿಲ್ ಎ0ಬವರು ಖರೀದಿಸಿದ್ದರು. ಮುದ್ರಣದ ಪ್ರಕಾರ ಪ್ರತಿ ಪ್ಯಾಕೇಟ್ ತಲಾ 300 ಗ್ರಾಮ್ ತೂಕ ಇರಬೇಕಿತ್ತು. ಆದರೆ, ಕುತೂಹಲಕ್ಕೆ ಪರೀಕ್ಲಿಸಿದಾಗ ಅದರ ತೂಕ ಕ್ರಮವಾಗಿ 268 ಗ್ರಾ0 ಮತ್ತು 248 ಗ್ರಾ0 ಇತ್ತು. ಈ ಹಿನ್ನೆಲೆಯಲ್ಲಿ ಜಾರ್ಜ್ ಥಟ್ಟಿಲ್ ಅವರು ತ್ರಿಶ್ಯೂರ್ ಕಾನೂನು ಮಾಪನಶಾಸ್ತ್ರದ ಸ0ಚಾರಿ ದಳದ ಸಹಾಯಕ ನಿಯಂತ್ರಕರಿಗೆ ದೂರು ನೀಡಿದ್ದರು. ಅವರ ದೂರನ್ನು ಸ್ವೀಕರಿಸಿದ ಸ0ಚಾರಿ ದಳದ ಅಧಿಕಾರಿಗಳು, ಬ್ರಿಟಾನಿಯಾ ಬಿಸ್ಕೆಟ್ ಪ್ಯಾಕೇಟ್ನ ತೂಕ ಕಡಿಮ ಇರುವುದನ್ನು ದೃಢಪಡಿಸಿದರು.

ಈ ದೃಢೀಕರಣ ಪತ್ರದೊಂದಿಗೆ ಜಾರ್ಜ್ ಥಟ್ಟಿಲ್ ಅವರು ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿದ್ದರು. ತನಗೆ ಆರ್ಥಿಕ, ದೈಹಿಕ ಹಾಗೂ ಮಾನಸಿಕ ನಷ್ಟ ಉ0ಟಾಗಿದ್ದು, ಈ ಬಗ್ಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಹಕ ನ್ಯಾಯಾಲಯದಲ್ಲಿ ಬೇಡಿಕೆ ಇಟ್ಟಿದ್ದರು.

ಬಳಿಕ ಈ ಸಂಬಂಧ ಗ್ರಾಹಕ ನ್ಯಾಯಾಲಯ ಬ್ರಿ ಟಾನಿಯಾ ಮತ್ತು ಬೇಕರಿಗೆ ನೋಟಿಸ್ ಜಾರಿ ಮಾಡಿತ್ತು. ಆದರೆ ನೋಟೀಸ್ ನೀಡಿದ ನಂತರವೂ ತಮ್ಮ ಲಿಖಿತ ಹೇಳಿಕೆ ನೀಡಲು ವಿಫಲವಾಗಿದೆ ಎ0ಬುದನ್ನು ಗಮನಿಸಿದ ನ್ಯಾಯಪೀಠ ಏಕಪಕ್ಷೀಯ ಆದೇಶವನ್ನು ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.