23/12/2024

Law Guide Kannada

Online Guide

Rural Medical Service Compulsory for MBBS Graduates in Govt Quota – High Court

ಸರ್ಕಾರಿ ಕೋಟಾದಲ್ಲಿ MBBS ಪದವಿ ಪಡೆದರೇ ಗ್ರಾಮೀಣ ವೈದ್ಯಕೀಯ ಸೇವೆ ಕಡ್ಡಾಯ – ಹೈಕೋರ್ಟ್

ಬೆಂಗಳೂರು: ಸರ್ಕಾರಿ ಕೋಟಾದಡಿ MBBS ವ್ಯಾಸಂಗ ಮಾಡಿದವರಿಗೆ ಗ್ರಾಮೀಣ ಸೇವೆ ಕಡ್ಡಾಯ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸರ್ಕಾರಿ ಕೋಟಾದಲ್ಲಿ ಫಲಾನುಭವಿಯಾಗಿ ವೈದ್ಯಕೀಯ ಶಿಕ್ಷಣ ಪಡೆದು ಎಂಬಿಬಿಎಸ್ ಪದವಿ ಪಡೆದರೆ, ಪದವಿ ಪಡೆದ ಬಳಿಕ ಕಡ್ಡಾಯವಾಗಿ ಗ್ರಾಮೀಣ ವೈದ್ಯಕೀಯ ಸೇವೆ ಮಾಡಲೇಬೇಕು ಎಂದು ಕರ್ನಾಟಕ ಹೈಕೋರ್ಟ್ನ ನ್ಯಾ. ಎ0. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶ ಮಾಡಿದೆ.
ಕೇರಳ, ಗುಜರಾತ್, ಉತ್ತರ ಪ್ರದೇಶ, ರಾಜಸ್ತಾನ, ಹರಿಯಾಣ, ಪಶ್ಚಿಮ ಬ0ಗಾಳ ಮತ್ತು ತಮಿಳುನಾಡು ಸಹಿತ ವಿವಿಧ ಭಾಗಗಳ 447 ವೈದ್ಯರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆ ನಡೆಸಿ ನ್ಯಾಯಪೀಠ ಈ ತೀರ್ಪನ್ನಿತ್ತಿದೆ.

ಸರ್ಕಾರಿ ಕೋಟಾದಡಿ ಖಾಸಗಿ ಹಾಗೂ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು, ನಿಯಮಾವಳಿಗಳಂತೆ ಕೋರ್ಸ್ ಮುಗಿದ ಬಳಿಕ ಕನಿಷ್ಠ ಒಂದು ವರ್ಷದವರೆಗೆ ಗ್ರಾಮೀಣ ಪ್ರದೇಶದ ಯಾವುದೇ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಸರ್ಕಾರಿ ಪ್ರಾಥಮಿಕ ಆರೋಗ್ಯ ಘಟಕದಲ್ಲಿ ಸೇವೆ ಸಲ್ಲಿಸಬೇಕು. ಇದನ್ನು ಉಲ್ಲಂಘಿಸಿದರೆ ಬಾಂಡ್ ಅನ್ವಯ ದಂಡ ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್ ತಿಳಿಸಿದೆ. ಗ್ರಾಮೀಣ ವೈದ್ಯಕೀಯ ಸೇವೆ ಮಾಡುವುದರಿಂದ ಮತ್ತು ಗ್ರಾಮೀಣ ಸೇವೆಗೆ ಒಪ್ಪಿ ನೀಡಿರುವ ಬಾ0ಡ್ ಗಳಿ0ದ ತಪ್ಪಿಸಿಕೊಳ್ಳಲಾಗದು ಎ0ದು ನ್ಯಾಯಪೀಠ ತಾಕೀತು ಮಾಡಿದೆ.
ಗ್ರಾಮೀಣ ವೈದ್ಯಕೀಯ ಸೇವೆ ಕಡ್ಡಾಯಗೊಳಿಸುವ ಹಿ0ದೆ ಸರ್ಕಾರದ ಉತ್ತಮ ಉದ್ದೇಶ ಅಡಗಿದೆ. ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ಉದಾತ್ತವಾದ ಉದ್ದೇಶವಿದೆ. ಇಂತಹ. ಪ್ರದೇಶಗಳ ಜನರಿಗೆ ಅಗತ್ಯ ಬಿದ್ದಾಗ ತಕ್ಷಣವೇ ವೈದ್ಯರನ್ನು ಸಂಪರ್ಕಿಸಲು ಈ ಉದ್ದೇಶ ಕಾರ್ಯಸಾಫಲ್ಯವಾಗಲಿದೆ. ವೈದ್ಯಕೀಯ ವಿದ್ಯಾರ್ಥಿಗಳು ಈ ಮಹಾನ್ ಸದಾಶಯದ ಭಾಗವಾಗಬೇಕು ಎ0ದು ನ್ಯಾಯಪೀಠ ಹೇಳಿದೆ.
ಗ್ರಾಮೀಣ ಪ್ರದೇಶದ ಜನರೂ ಉತ್ತಮವಾದ ಆರೋಗ್ಯ ಪಡೆಯಲು ಹಕ್ಕುಳ್ಳವರಾಗಿದ್ದಾರೆ. ಅವರಿಗೆ ಸೂಕ್ತ ಆರೋಗ್ಯ ವ್ಯವಸ್ಥೆ ಒದಗಿಸುವುದು ಪ್ರಭುತ್ವದ ಕರ್ತವ್ಯ. ಹಾಗಾಗಿ, ವೈದ್ಯಕೀಯ ವಿದ್ಯಾರ್ಥಿಗಳ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಲು ರಾಜ್ಯ ಸರ್ಕಾರ ಈ ಬಗ್ಗೆ ಕಾನೂನು ಜಾರಿಗೆ ತರಲು ಈ ಆದೇಶ ಸ್ವಾತಂತ್ಯವನ್ನು ನೀಡುತ್ತದೆ ಎ0ಬುದನ್ನು ಆದೇಶದಲ್ಲಿ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.