Right on the property is available only if the allotted site is registered – Karnataka High Court announced a landmark judgement.
ಹಂಚಿಕೆಯಾದ ಸೈಟ್ ನೋಂದಣಿಯಾಗಿದ್ದರೇ ಮಾತ್ರ ಆ ಆಸ್ತಿ ಮೇಲೆ ಹಕ್ಕು ಲಭ್ಯ- ಮಹತ್ವದ ತೀರ್ಪು ಪ್ರಕಟಿಸಿದ ಹೈಕೋರ್ಟ್.
ಬೆಂಗಳೂರು: ನಿವೇಶನ(ಸೈಟ್) ಹಂಚಿಕೆ ಮತ್ತು ನೋಂದಣಿ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪೊಂದನ್ನ ನೀಡಿದೆ.
ಸರ್ಕಾರ, ಯಾವುದೇ ಪ್ರಾಧಿಕಾರ ಸ೦ಘ ಸ೦ಸ್ಥೆ ಅಥವಾ ಇತರ ಮೂಲದಿಂದ ಸೈಟ್ ಹ೦ಚಿಕೆಯಾಗಿದ್ದರೂ ಅದು ನೋ೦ದಣಿಯಾಗಿದ್ದರೆ ಮಾತ್ರ ಮಾನ್ಯವಾಗುತ್ತದೆ. ಆ ಆಸ್ತಿ ಮೇಲೆ ಹಕ್ಕು ಲಭ್ಯವಾಗುತ್ತದೆ ಎಂದು ಹೈಕೋರ್ಟ್ನ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಹತ್ವದ ತೀರ್ಪು ನೀಡಿದೆ.
ಆದಿಲಕ್ಷ್ಮಮ್ಮ ಮತ್ತು ಮತ್ತಿತರರು ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಏಕಸದಸ್ಯ ನ್ಯಾಯಪೀಠ, ನಿವೇಶನದ ಹ೦ಚಿಕೆಯು ಆ ನಿವೇಶನದ ಮೇಲೆ ಹಕ್ಕು ನೀಡುವುದಿಲ್ಲ. ನಿವೇಶನ ಹಂಚಿಕೆಯಾಗಿದ್ದರೂ ಅದು ನೋಂದಣಿಯಾಗಿದ್ದರೇ ಮಾತ್ರ ಆ ನಿವೇಶನದ ಮೇಲೆ ಹಕ್ಕು ಸಿಗುತ್ತದೆ ಎಂದು ಹೇಳಿದೆ.
1976-77ರಲ್ಲಿ ಕೆ. ತಿಪ್ಪಣ್ಣ ಎ೦ಬವರಿಗೆ ಬಿಡಿಎ ನಿವೇಶನ ಹ೦ಚಿಕೆ ಮಾಡಿತ್ತು. ಆದರೆ, ಆ ನಿವೇಶನದ ನೋಂ೦ದಣಿಗೂ ಮುನ್ನ ತಿಪ್ಪಣ್ಣ ಸಾವನ್ನಪ್ಪಿದ್ದರು. ಬಳಿಕ ಪ್ರಾಧಿಕಾರಕ್ಕೆ ಹಣ ಪಾವತಿಸಿದ ನಂತರ ಮೂಲ ಹಂಚಿಕೆದಾರರ ಪತ್ನಿ ಲಕ್ಷ್ಮಮ್ಮ ಹೆಸರಿಗೆ ಬಿಡಿಎ ನಿವೇಶನ ನೋ೦ದಣಿ ಮಾಡಿತ್ತು.
ಹಿಂದೂ ಉತ್ತರಾಧಿಕಾರತ್ವದ ಕಾಯ್ದೆ ಸೆಕ್ಷನ್ 8ರ ಪ್ರಕಾರ ಸದರಿ ನಿವೇಶನದ ಮೂಲ ಮಾಲೀಕರು ಲಕ್ಷ್ಮಮ್ಮ ಅವರಾಗಿದ್ದು ಆದರೆ ,ಕೆ. ತಿಪ್ಪಣ್ಣ ಅವರಿಗೆ ನಿವೇಶನ ಹ೦ಚಿಕೆ ಮಾಡಲಾಗಿದ್ದರೂ ಅದು ನೋಂದಣಿ ಆಗಿಲ್ಲದ ಕಾರಣ ತಿಪ್ಪಣ್ಣ ಅವರಿಗೆ ಆಸ್ತಿ ಮೇಲೆ ಯಾವುದೇ ಹಕ್ಕು ಲಭಿಸುವುದಿಲ್ಲ ಎ೦ದು ಹೈಕೋರ್ಟ್ ನ್ಯಾಯಪೀಠ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ