ಅಂತಿಮ ತೀರ್ಪು ಪ್ರಕಟ ಬಳಿಕ 5 ದಿನದಲ್ಲಿ ಕಾರಣ ಬಹಿರಂಗಪಡಿಸಿ – ಸುಪ್ರೀಂಕೋರ್ಟ್
ನವದೆಹಲಿ: ಯಾವುದೇ ಪ್ರಕರಣದಲ್ಲಿ ಆದೇಶವನ್ನು ತಡವಾಗಿ ಪ್ರಕಟಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಗಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ ಯಾವುದೇ ಪ್ರಕರಣಗಳಲ್ಲಾಗಲಿ ಅಂತಿಮ ತೀರ್ಪು ಪ್ರಕಟಿಸಿದ ನಂತರ 5 ದಿನದೊಳಗೆ ಕಾರಣವನ್ನು ಬಹಿರಂಗಗೊಳಿಸಬೇಕು ಎಂದು ಹೈಕೋರ್ಟ್ಗಳಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಏ.30ರಂದು ಗುಜರಾತ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಆದೇಶವನ್ನು ತಡವಾಗಿ ಪ್ರಕಟಿಸುವ ಮೂಲಕ ನ್ಯಾಯದ ಹೋರಾಟದಲ್ಲಿ ಸೋತ ವ್ಯಕ್ತಿಯ ಮನದಲ್ಲಿ ಅನುಮಾನ ಮೂಡುತ್ತದೆ. ಕೋರ್ಟ್ ಗಳು ನೀಡುವ ಆದೇಶಗಳು ಸಮಾಜದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದನ್ನು ನ್ಯಾಯಾಧೀಶರು ಅರ್ಥ ಮಾಡಿಕೊಳ್ಳಬೇಕು. ತೀರ್ಪುಗಳು ಪ್ರಾಮಾಣಿಕ, ದೋಷಾರೋಪಣೆ ಮಾಡಲಾಗದ ರೀತಿ, ಸಮಗ್ರತೆ ಮತ್ತು ಅಚಲ ತತ್ವಗಳಿಂದ ಕೂಡಿರಬೇಕು. ಸಮಾಜ ಕೂಡ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಇದನ್ನೇ ನಿರೀಕ್ಷಿಸುತ್ತದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ