Registration of Apartment Associations under Ownership Act – Karnataka High Court Clarification
ಓನರ್ ಶಿಪ್ ಕಾಯ್ದೆ ಅಡಿಯಲ್ಲೇ ಅಪಾರ್ಟ್ ಮೆಂಟ್ ಸಂಘಗಳ ನೋಂದಣಿ- ಹೈಕೋರ್ಟ್ ಸ್ಪಷ್ಟನೆ
ಬೆಂಗಳೂರು: ಅಪಾರ್ಟ್ ಮೆಂಟ್ ಸಂಘಗಳ ನೋಂದಣಿಯನ್ನು ಯಾವ ಕಾಯ್ದೆಯಡಿ ನೋಂದಣಿ ಮಾಡಬೇಕು ಎಂಬ ವಿಚಾರದ ಬಗ್ಗೆ ಕರ್ನಾಟಕ ಹೈಕೋರ್ಟ್ ಸ್ಪಷ್ಟನೆ ನೀಡಿದ್ದು, ಓನರ್ ಶಿಪ್ ಕಾಯ್ದೆ ಅಡಿಯಲ್ಲಿ ಅಪಾರ್ಟ್ ಮೆಂಟ್ ನೋಂದಣಿ ಮಾಡಬೇಕು ಎ0ದು ಹೇಳಿದೆ.
ಕೆ0ಗೇರಿ ಬಳಿಯ ಡಿಎಸ್ ಮ್ಯಾಕ್ಸ್ ಸ್ಟಾರ್ ಮಾಲೀಕರಾದ ಅರುಣ್ ಕುಮಾರ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಅನ0ತ್ ರಾಮನಾಥ ಹೆಗಡೆ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಕೇವಲ ವಸತಿ ಫ್ಲಾಟ್ ಗಳಷ್ಟೇ ಇರುವ ನಿರ್ವಹಣೆಯನ್ನು ನೋಡಿಕೊಳ್ಳಲು ಮಾಲೀಕರು ಕರ್ನಾಟಕ ಅಪಾರ್ಟ್ ಮೆ0ಟ್ ಓನರ್ ಶಿಪ್ ಕಾಯ್ದೆ 1972 ಬದಲಾಗಿ ಕರ್ನಾಟಕ ಸಹಕಾರ ಸ0ಘಗಳ ಕಾಯ್ದೆ 1959 ಅಡಿಯಲ್ಲಿ ಅಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಸೊಸೈಟಿ ಕಾಯ್ದೆ ಅಡಿ ಸಂಘದ ನೋಂದಣಿಗೆ ಸಹಕಾರ ಸ0ಘಗಳ ರಿಜಿಸ್ಟರ್ ನೀಡಿದ ಅನುಮತಿಯನ್ನು ರದ್ದುಗೊಳಿಸಿದ ನ್ಯಾಯಪೀಠ, ಅರ್ಜಿದಾರರಿಗೆ ಸಂಘ ನೋ0ದಾವಣೆ ಮಾಡಿಕೊಳ್ಳಲು ಪ್ರತಿವಾದಿ ಬಿಲ್ಡರ್ ಹಾಗೂ ಇನ್ನಿತರರು ಸಹಕಾರ ನೀಡಬೇಕು ಎ0ದು ಸೂಚಿಸಿದೆ.
ಅರ್ಜಿದಾರರು ಹೇಳಿರುವಂತೆ ಇದು ವಸತಿ ಸಂಕೀರ್ಣದ ಯೋಜನೆಯಾಗಿದ್ದು ಇದರಲ್ಲಿ ಯಾವುದೇ ವಾಣಿಜ್ಯ ಉದ್ದೇಶದ ಜಾಗವಿಲ್ಲ ಖರೀದಿದಾರರ ಪರವಾಗಿ ನೀಡಲಾಗಿರುವ ಕ್ರಯ ಪತ್ರ ಸೇಲ್ ಡಿಡಿಗಳಲ್ಲೂ ಅವುಗಳು ಕರ್ನಾಟಕ ಅಪಾರ್ಟ್ಮೆಂಟ್ ಓನರ್ ಶಿಪ್ ಕಾಯ್ದೆ 1972 ನೋ0ದಣಿ ಮಾಡಿಕೊಳ್ಳಲಾಗಿದೆ.
ಹೀಗಾಗಿ ಫ್ಲ್ಯಾಟ್ ಗಳ ನಿರ್ವಹಣೆ ಕೈಗೊಳ್ಳಲು ಅರ್ಜಿದಾರರು ಹಾಗೂ ಉದ್ದೇಶಿತ ಸಂಘದ ಸದಸ್ಯರು ಅಸೋಸಿಯೇಷನ್ ಅನ್ನು ಕರ್ನಾಟಕ ಅಪಾರ್ಟ್ ಮೆಂಟ್ ಓನರ್ ಶಿಪ್ ಆಕ್ಟ್ ಪ್ರಕಾರವೇ ನೊ0ದಣಿ ಮಾಡಿಸಬೇಕಾಗುತ್ತದೆ. ಈ ಪ್ರಕರಣದಲ್ಲಿ ವಾಣಿಜ್ಯ ಉದ್ದೇಶದ ಜಾಗವಿಲ್ಲ ಎಲ್ಲಾ ವಸತಿ ಫ್ಲ್ಯಾಟ್ ಗಳೇ ಇರುವುದರಿ0ದ ಸೊಸೈಟಿ ಕಾಯಿದೆ ಅನ್ವಯಿಸುವುದಿಲ್ಲ ಎ0ದು ನ್ಯಾಯಪೀಠ ಎಂದು ಆದೇಶದಲ್ಲಿ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ