23/12/2024

Law Guide Kannada

Online Guide

ವಕೀಲನಿಂದ ವೇಶ್ಯಾವಾಟಿಕೆ: ಆಘಾತ ವ್ಯಕ್ತಪಡಿಸಿ, ದಂಡ ವಿಧಿಸಿ ಛೀಮಾರಿ ಹಾಕಿದ ಹೈಕರ‍್ಟ್

ಚೆನ್ನೈ: ವಕೀಲ ವೃತ್ತಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಗೌರವ. ಕಾನೂನು ಕಾಪಾಡುವ, ಅನ್ಯಾಯಕ್ಕೊಳಗಾದವರಿಗೆ, ನೊಂದವರಿಗೆ ಸೂಕ್ತ ನ್ಯಾಯ ಕೊಡಿಸುವ ಮಹತ್ತರ ಜವಾಬ್ದಾರಿ ವಕೀಲಿಕೆ ವೃತ್ತಿಯದ್ದಾಗಿರುತ್ತದೆ. ಆದರೆ ಇನ್ನೊಬ್ಬ ವಕೀಲರು ಇಂತಹ ಪವಿತ್ರ ವೃತ್ತಿಗೆ ಕಳಂಕವೆಂಬಂತೆ ವೇಶ್ಯಾವಾಟಿಕೆ ನಡೆಸುತ್ತಿದ್ದು ಈ ಘಟನೆಗೆ ಮದ್ರಾಸ್ ಹೈಕರ‍್ಟ್ ಆಘಾತ ವ್ಯಕ್ತಪಡಿಸಿದೆ.

ಹೌದು, ವಕೀಲ ರಾಜಾ ಮುರುಗನ್ ಎಂಬುವವರು ವೇಶ್ಯಾವಾಟಿಕೆ ಅಡ್ಡೆಯನ್ನು ನಡೆಸುತ್ತಿದ್ದು, ಅದಕ್ಕೆ ಪೊಲೀಸರಿ೦ದ ರಕ್ಷಣೆ ಕೋರಿ ರ‍್ಜಿ ಸಲ್ಲಿಸಿರುವ ಘಟನೆ ಮದ್ರಾಸ್ ಹೈಕರ‍್ಟ್ನಲ್ಲಿ ನಡೆದಿದೆ. ಈ ಫಟನೆ ಬಗ್ಗೆ ಸ್ವತಃ ಮದ್ರಾಸ್ ಹೈಕರ‍್ಟ್ ಕಳವಳ ವ್ಯಕ್ತಪಡಿಸಿದೆ.

ಅಲ್ಲದೆ ವೇಶ್ಯಾಗೃಹ ಕಾನೂನುಬದ್ಧವಲ್ಲ ಎಂದು ಹೇಳಿರುವ ಮದ್ರಾಸ್ ಹೈಕರ‍್ಟ್, ಸ್ವತಃ ವೇಶ್ಯಾವಾಟಿಕೆ ನಡೆಸುತ್ತಿದ್ದ ವಕೀಲನಿಗೆ ದ೦ಡದ ಸಹಿತ ಛೀಮಾರಿ ಹಾಕಿ ಈತ ವಕೀಲ ಸಮುದಾಯಕ್ಕೆ ಕಳ೦ಕ ಎ೦ದು ಕಿಡಿಕಾರಿದೆ. ಮಾತ್ರವಲ್ಲ, ರ‍್ಜಿ ಸಲ್ಲಿಸಿದ ವಕೀಲ ನಿಜವಾಗಿಯೂ ನೋಂ೦ದಾಯಿತ ವಕೀಲನೇ ಎನ್ನುವ ಬಗ್ಗೆ ಆತನ ನೋಂದಣಿ ಪತ್ರದ ನೈಜತೆ ಪರಿಶೀಲಿಸುವಂತೆ ತಮಿಳುನಾಡು ಮತ್ತು ಪುಚುಚೇರಿ ವಕೀಲರ ಪರಿಷತ್ತಿಗೆ ನರ‍್ದೇಶನ ನೀಡಿದೆ.

ವಕೀಲ ಸಲ್ಲಿಸಿದ್ದ ರ‍್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕರ‍್ಟ್ನ ನ್ಯಾ. ಬಿ. ಪುಗುಳೇಂದಿ ಅವರಿದ್ದ ಏಕಸದಸ್ಯ ನ್ಯಾಯಪೀಠ, ರ‍್ಜಿದಾರ ವಕೀಲರಿಗೆ ರೂ. 10,900/- ದ೦ಡ ವಿಧಿಸಿದೆ. ಈತ ವಕೀಲ ಸಮುದಾಯದ ಖ್ಯಾತಿಗೆ ಮಸಿ ಬಳೆಯುತ್ತಿದ್ದಾನೆ. ಈತನ ಬಗ್ಗೆ ಗಮನಹರಿಸಲು ವಕೀಲರ ಪರಿಷತ್ತಿಗೆ ಇದು ಸಕಾಲ ಎ೦ದು ಹೇಳಿರುವ ನ್ಯಾಯಪೀಠ, ಅಧಿಕೃತ ಕಾಲೇಜುಗಳಿಂದ ಶಿಕ್ಷಣ ಮುಗಿಸಿದ ಪದವೀಧರರನ್ನು ಮಾತ್ರ ನೋ೦ದಣಿ ಮಾಡಿಕೊಳ್ಳಬೇಕು ಎ೦ದು ನ್ಯಾಯಪೀಠ ಸಲಹೆ ನೀಡಿದೆ.

ತಾನು ಫ್ರೆಂಡ್ಸ್ ಫಾರ್ ಎವರ್ ಎ೦ಬ ಟ್ರಸ್ಟ್ ಸ್ಥಾಪಿಸಿದ್ದೇನೆ. ಈ ಟ್ರಸ್ಟ್ ನ ಮುಖ್ಯ ಉದ್ದೇಶ ತನ್ನ ಸದಸ್ಯರು ಮತ್ತು ಗ್ರಾಹಕರಿಗೆ ತೈಲ ಅಭ್ಯ೦ಜನ ಮತ್ತು ಇತರ ಲೈಂಗಿಕ ಸೇವೆಯ೦ತ ವಯಸ್ಕರ ಮನರ೦ಜನೆ ಚಟುವಟಿಕೆಗಳನ್ನು ನಡೆಸುವುದಾಗಿದೆ ಎಂದು ರ‍್ಜಿದಾರ ವಕೀಲ ರಾಜಾ ಮುರುಗನ್ ಹೇಳಿಕೊಂಡಿದ್ದ.

ಸ್ಥಳೀಯ ಪೊಲೀಸರು ತಮ್ಮ ಟ್ರಸ್ಟ್ ಮೇಲೆ ದಾಳಿ ನಡೆಸುತ್ತಿದ್ದಾರೆ. ತಮಿಳುನಾಡಿನಲ್ಲಿ ಲೈಂಗಿಕ. ಚಟುವಟಿಕೆ ಅನೈತಿಕ ಮಾನವ ಕಳ್ಳ ಸಾಗಾಟ ತಡೆ ಕಾಯ್ದೆ ಕಾನೂನು ಬಾಹಿರ ಎ೦ದು ಘೋಷಿಸಿಲ್ಲ ಎ೦ದು ವಾದಿಸಿದ್ದ ವಕೀಲ ರಾಜಾ ಮುರುಗನ್, ಬುದ್ಧದೇವ್ ರ‍್ಮಾಸ್ಕರ್ vs ಪಶ್ಚಿಮ ಬ೦ಗಾಳ ರ‍್ಕಾರ ಪ್ರಕರಣವನ್ನು, ಉಲ್ಲೇಖಿಸಿದ್ದ.

ಆದರೆ, ರ‍್ಜಿದಾರ ಈ ತರ‍್ಪನ್ನು ತಪ್ಪಾಗಿ ರ‍್ಥೈಸಿಕೊ೦ಡಿದ್ದಾರೆ ಎ೦ದು ಹೇಳಿರುವ ನ್ಯಾಯಪೀಠ, ಸುಪ್ರೀಂಕರ‍್ಟ್ನ ಈ ತರ‍್ಪು ಲೈಂಗಿಕ ಕರ‍್ಯರ‍್ತರನ್ನು ರಕ್ಷಿಸುವ ಮತ್ತು ಪುರ‍್ವಸತಿ ಕಲ್ಪಿಸುವ ಉದ್ದೇಶ ಹೊ೦ದಿದೆ ಎ೦ದು ಸ್ಪಷ್ಟಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.