Property registration cannot be refused on the ground of income tax arrears – Karnataka High Court
ಆದಾಯ ತೆರಿಗೆ ಬಾಕಿ ಇದೆ ಎಂಬ ಕಾರಣ ನೀಡಿ ಆಸ್ತಿ ನೋಂದಣಿ ನಿರಾಕರಿಸುವಂತಿಲ್ಲ- ಹೈಕೋರ್ಟ್.
ಬೆಂಗಳೂರು: ಆದಾಯ ತೆರಿಗೆ ಬಾಕಿ ಇದೆ ಎ0ಬ ಕಾರಣ ನೀಡಿ ಆಸ್ತಿ ನೋಂದಣಿ ಮಾಡುವುದಕ್ಕೆ ಉಪ ನೋ0ದಣಾಧಿಕಾರಿಗಳು ನಿರಾಕರಿಸುವಂತಿಲ್ಲ ಎ0ದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮೂಲ ಮಾಲೀಕರು ಆದಾಯ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಕಾರಣಕ್ಕೆ ಖರೀದಿಸಿದ್ದ ಆಸ್ತಿಯನ್ನ ನೋಂದಣಿ ಮಾಡಿಕೊಡದ ಹಿನ್ನೆಲೆ ಭರತ್ ಗೌಡ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ನ ನ್ಯಾ. ಎ0. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ನೋಂದಣಿ ಕಾಯ್ದೆ ಮತ್ತು ರಾಜ್ಯ ಸರ್ಕಾರ ರೂಪಿಸುವ ನೋ0ದಣಿ ನಿಯಮಗಳ ಅನ್ವಯ ಉಪ ನೋಂದಣಾಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅದರ ಬದಲಿಗೆ ನಿಯಮ ಬಾಹಿರವಾಗಿ ಆಸ್ತಿ ನೋಂದಣಿ ಮಾಡಲು ಉಪ ನೋ0ದಣಾಧಿಕಾರಿಗಳಿಗೆ ಯಾವುದೇ ಅಧಿಕಾರ ಇಲ್ಲ ಎ0ದು ತಿಳಿಸಿದೆ.
ಹಾಗೆಯೇ ಆದಾಯ ತೆರಿಗೆ ಬಾಕಿ ಇದೆ ಎ0ಬ ಕಾರಣ ನೀಡಿ ಹರಾಜು ಮೂಲಕ ಖರೀದಿಸಿದ ಆಸ್ತಿ ನೋಂದಣಿಗೆ ನಿರಾಕರಿಸಿರುವ ಸಬ್ ರಿಜಿಸ್ಟಾರ್ ಗಳ ನಿರ್ಧಾರವನ್ನು ಹೈಕೋರ್ಟ್ ನ್ಯಾಯಪೀಠ ರದ್ದುಗೊಳಿಸಿದ್ದು, ನೋಂದಣಿ ನಿಯಮಗಳ ಅಡಿ ಯಾವುದೇ ಗೊ0ದಲ ಇಲ್ಲದಿದ್ದರೆ ಆಸ್ತಿ ಕ್ರಯ ಪತ್ರವನ್ನು ನೋಂದಣಿ ಮಾಡದೆ ನಿರಾಕರಿಸುವಂತಿಲ್ಲ ಮತ್ತು ಅ0ತಹ ಅಧಿಕಾರ ಅವರಿಗೆ ಇಲ್ಲ ಎ0ದು ಸ್ಪಷ್ಟಪಡಿಸಿದೆ. ಅಲ್ಲದೆ ರಾಜ್ಯ ಸರ್ಕಾರ ನೋಂದಣಿ ನಿಯಮಗಳ ಕುರಿತು ಸೂಕ್ತ ಸುತ್ತೋಲೆಯನ್ನು ಹೊರಡಿಸಬೇಕು ಎ0ದು ನ್ಯಾಯಪೀಠ ಸೂಚನೆಯನ್ನೂ ನೀಡಿದೆ.
ಬೆಂಗಳೂರಿನ ವಿಲ್ಸನ್ ಗಾರ್ಡನ್ನಿ ಹೊ0ಬೇಗೌಡ ನಗರದಲ್ಲಿ ಇರುವ 6000 ಚದರ ಅಡಿಯ ಅಡಮಾನ ಆಸ್ತಿಯನ್ನು 2022ರ ಮಾರ್ಚ್ನಲ್ಲಿ ಕೆನರಾ ಬ್ಯಾಂಕ್ ಹರಾಜು ಮಾಡಿತ್ತು. ಈ ವೇಳೆ ಭರತ್ ಗೌಡ ಎ0ಬವವರು ಹರಾಜಿನಲ್ಲಿ ಯಶಸ್ವಿ ಬಿಡ್ಡುದಾರರಾಗಿ ಆಸ್ತಿ ಖರೀದಿ ಮಾಡಿದ್ದರು. ಹರಾಜು ಪ್ರಕ್ರಿಯೆಗಳು ಮುಗಿದ ನ0ತರ 2022ರ ಸೆಪ್ಟಂಬರ್ ನಲ್ಲಿ ಅವರಿಗೆ ಮಾರಾಟ ಪ್ರಮಾಣಪತ್ರ ನೀಡಲಾಗಿತ್ತು. ಆಸ್ತಿ ನೋಂದಣಿಗೆ ಅಗತ್ಯವಿರುವ ಮುದ್ರಾ0ಕ ಶುಲ್ಕ ಪಾವತಿಸಿದ್ದ ಅರ್ಜಿದಾರ ಭರತ್ ಗೌಡ ತನ್ನ ಹೆಸರಿಗೆ ಆಸ್ತಿ ನೋ0ದಣಿ ಮಾಡಿಕೊಡುವಂತೆ ಜಿ.ಪಿ.ನಗರದ ಉಪ ನೋಂದಣಿ ಕಚೇರಿಗೆ ಮನವಿ ಸಲ್ಲಿಸಿದ್ದರು. ಆದರೆ, ಸಬ್ ರಿಜಿಸ್ಟ್ರಾರ್, ಜಮೀನಿನ ಮೂಲ ಮಾಲೀಕರು ಆದಾಯ ತೆರಿಗೆ ಬಾಕಿ ಉಳಿಸಿಕೋಂಡಿದ್ದಾರೆ. ಆದ್ದರಿ0ದ ನೋಂದಣಿ ಮಾಡುವುದಕ್ಕೆ ಅವಕಾಶ ಇಲ್ಲ ಎ0ದು ಮೌಖಿಕವಾಗಿ. ತಿಳಿಸಿದ್ದಂತೆ.
ಈ ನಡುವೆ ಭರತ್ ಗೌಡ ಅವರು 2024ರ ಫೆಬ್ರವರಿ 18ರ0ದು ಮತ್ತೆ ಉಪ ನೋಂದಣಿ ಕಚೇರಿಗೆ ಮನವಿ ಸಲ್ಲಿಸಿದ್ದರೂ ಸಬ್ ರಿಜಿಸ್ಟ್ರಾರ್ ಅವರಿ0ದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.ಈ ಹಿನ್ನೆಲೆಯಲ್ಲಿ ಭರತ್ ಗೌಡ ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಅವರಿಗೆ ಕೋರ್ಟ್ ನಲ್ಲಿ ಜಯ ಸಿಕ್ಕಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ