09/01/2025

Law Guide Kannada

Online Guide

‘ದರ್ಪ, ಅಹಂಕಾರ ಬಿಟ್ಟು ನ್ಯಾಯಯುತ ತನಿಖೆ ನಡೆಸಿ’- ಇಆ ಅಧಿಕಾರಿಗಳ ಕಿವಿ ಹಿಂಡಿದ ಸುಪ್ರೀಂ ಕೋರ್ಟ್

ನವದೆಹಲಿ: ಹರಿಯಾಣದ ಮಾಜಿ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವರ್ ಅವರನ್ನು ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿ, ಸತತ 14 ತಾಸು ವಿಚಾರಣೆಗೆ ಒಳಪಡಿಸಿದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಸುಪ್ರೀಂಕೋರ್ಟ್, ಇಡಿ ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ.

ಇಡಿ ತನಿಖೆ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್ ನ್ಯಾ. ಅಭಯ್ ಶ್ರೀನಿವಾಸ್ ಓಕ ಹಾಗು ನ್ಯಾ. ಅಗಸ್ಟಿನ್ ಜಾರ್ಜ್ ಅವರಿದ್ದ ಪೀಠವು, ನಿಮ್ಮ ತನಿಖಾ ವೈಖರಿಯೇ ಕ್ರಮಬದ್ಧವಾಗಿಲ್ಲ, ‘ದರ್ಪ, ಅಹಂಕಾರ ಬಿಟ್ಟು ನ್ಯಾಯಯುತ ತನಿಖೆ ನಡೆಸಿ’ ಅಮಾನವೀಯ ರೀತಿಯಲ್ಲಿ ತನಿಖೆ ಮಾಡುವುದನ್ನು ಬಿಟ್ಟು, ನ್ಯಾಯಯುತ ತನಿಖೆ ನಡೆಸಿ ಎಂದು ಜಾರಿ ನಿರ್ದೇಶನಾಲಯಕ್ಕೆ ತಾಕೀತು ಮಾಡಿದೆ.

ನೀವು ನಡೆಸುವ ವಿಚಾರಣಾ ಶೈಲಿಯೇ ಕ್ರಮಬದ್ಧವಾಗಿಲ್ಲ. ಅಮಾನವೀಯ ರೀತಿಯಲ್ಲಿ ವಿಚಾರಣೆ ನಡೆಸುತ್ತಿದ್ದೀರಿ. ನಿಮ್ಮ ವಿಚಾರಣೆಯ ಶೈಲಿ ಶಾಕ್ ತರುವಂತಿದೆ ಎಂದು ಇಡಿ ಅಧಿಕಾರಿಗಳ ಕಿವಿ ಹಿಂಡಿದ ನ್ಯಾಯಪೀಠವು, ದರ್ಪ ಅಹಂಕಾರವನ್ನು ಬಿಟ್ಟು ನ್ಯಾಯಯುತ ತನಿಖೆ ನಡೆಸಿ ಎಂದು ತರಾಟೆ ತೆಗೆದುಕೊಂಡಿತು.

ಏನಿದು ಪ್ರಕರಣ…?
ಕಳೆದ ಜುಲೈನಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಾಂಗ್ರೆಸ್ ನ ಮಾಜಿ ಶಾಸಕ ಸುರೇಂದರ್ ಪನ್ವರ್ ಅವರನ್ನುಇಡಿ ಅಧಿಕಾರಿಗಳು ಬಂಧಿಸಿ ಸತತ 14 ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದ್ದರು.

ತಮ್ಮ ಬಂಧನ ಕಾನೂನು ಬಾಹಿರವೆಂದು ಆರೋಪಿಸಿ ಶಾಸಕ ಪನ್ವರ್ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಆರೋಪಿಯ ಬಂಧನ ನಿಯಮಾನುಸಾರ ಇಲ್ಲ ಎಂದು ಜಾಮೀನು ನೀಡಿತ್ತು.

ಹೈಕೋರ್ಟ್ ಅದೇಶ ಪ್ರಶ್ನಿಸಿ ಇಡಿ ಅಧಿಕಾರಿಗಳು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಇಡಿ ಪರ ವಕೀಲರು ಆರೋಪಿತ ಶಾಸಕರನ್ನು ನಿರಂತರ 14 ಗಂಟೆ ವಿಚಾರಣೆ ನಡೆಸಿರಲಿಲ್ಲ. ಉಟಕ್ಕೆ ಅವಕಾಶ ನೀಡಲಾಗಿತ್ತು. ತುರ್ತು ವಿಚಾರಣೆ ಅಗತ್ಯವಿದ್ದುದರಿಂದ ತಡರಾತ್ರಿವರೆಗೂ ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ವಾದಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.