ಸ್ಟ್ಯಾಂಪ್ ಡ್ಯೂಟಿ ಪಾವತಿ: ನ್ಯಾಯಾಲಯದ ಪಾವತಿ ವಿಧಾನ ಬದಲಾವಣೆ : ಹೈಕೋರ್ಟ್ ಆದೇಶ
ಬೆಂಗಳೂರು: ಸ್ಟ್ಯಾಂಪ್ ಡ್ಯೂಟಿ ಪಾವತಿ, ನ್ಯಾಯಾಲಯದ ಪಾವತಿ ವಿಧಾನದಲ್ಲಿ ಬದಲಾವಣೆಯಾಗಿದ್ದು ಈ ಸಂಬಂಧ ಎಲ್ಲಾ ನ್ಯಾಯಾಲಯಗಳಿಗೆ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ.
ಕರ್ನಾಟಕ ಮುದ್ರಾ೦ಕ ಶುಲ್ಕ ಕಾಯ್ದೆಯಡಿ ನ್ಯಾಯಾಲಯವು ಪಾವತಿಸಲು ಆದೇಶಿಸಿದ ಸ್ಟ್ಯಾಂಪ್ ಡ್ಯೂಟಿ ಅಂಡ್ ಪೆನಾಲ್ಟಿ, ಹಾಗೂ ಆರ್ಬಿಟೀಶನ್ ಅವಾರ್ಡ್, ಸೇಲ್ ಸರ್ಟಿಫಿಕೇಟ್, ನ್ಯಾಯಾಲಯದ ವಿಭಾಗ ಪತ್ರ ಮು೦ತಾದ ದಾಖಲೆಗಳ ಮೇಲೆ ಪಾವತಿಸಬೇಕಾದ ನಾನ್ ಜುಡಿಷಿಯಲ್ ಸ್ಟ್ಯಾಂಪ್ ಶುಲ್ಕವನ್ನುK2 ಚಲನ್ ಮೂಲಕ ಇದುವರೆಗೂ ಸ೦ಬ೦ಧಪಟ್ಟ ನ್ಯಾಯಾಲಯದ ಡಿಡಿಒ ಕೋಡ್ ಮೂಲಕ 0030-02-102-0-01 ಲೆಕ್ಕ ಶೀರ್ಷಿಕೆಗೆ ಪಾವತಿಸಲಾಗುತ್ತಿತ್ತು.
ಇದೀಗ ಸ್ಟ್ಯಾಂಪ್ ಡ್ಯೂಟಿ ಪಾವತಿಯಲ್ಲಿ ಬದಲಾವಣೆ ತರಲಾಗಿದ್ದು, ಹೈಕೋರ್ಟ್ ನ ಮಹಾ ವಿಲೇಖನಾಧಿಕಾರಿಗಳು ತಮ್ಮ ಪತ್ರ ಸ೦ಖ್ಯೆ HCB 81/RECON-MISC/2020 ಪ್ರಕಾರ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರಧಾನ ಜಿಲ್ಲಾ ನ್ಯಾಯಾಧೀಶರಿಗೆ, ಬೆ೦ಗಳೂರಿನ ಪ್ರಧಾನ ಸಿಟಿ ಸಿವಿಲ್ ಸೆಷನ್ಸ್ ನ್ಯಾಯಾಧೀಶರಿಗೆ, ಕೌಟುಂಬಿಕ ನ್ಯಾಯಾಲಯ, ಕಾರ್ಮಿಕ ನ್ಯಾಯಾಲಯ, ಕೈಗಾರಿಕಾ ನ್ಯಾಯ ಮ೦ಡಳಿಯ ಪೀಠಾಸೀನಾಧಿಕಾರಿಗಳಿಗೆ ಮತ್ತು ಬೆ೦ಗಳೂರಿನ ಲಘು ವ್ಯವಹಾರಗಳ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಸೂಚನೆ ನೀಡಿದ್ದು ಈ ಕೆಳಗಿನಂತಿದೆ.
ನ್ಯಾಯಾಲಯದಲ್ಲಿ ಸ್ವೀಕೃತವಾದ ನಾನ್ ಜುಡಿಶಿಯಲ್ ಸ್ಟ್ಯಾ೦ಪ್ ಬಾಬ್ತು ಮೊಬಲಗನ್ನು 0030-02-102-0-01 ಈ ಲೆಕ್ಕ ಶೀರ್ಷಿಕೆಗೆ K2 ಚಲನ್ ನಲ್ಲಿ Department of stamps and Registration ಅನ್ನು ಹಾಗೂ ಸಂಬಂಧಪಟ್ಟ ಡಿಡಿಒ ಆಯೆ, ಮಾಡಿ ಪಾವತಿಸತಕ್ಕದ್ದು. ಏಕೆ೦ದರೆ ಸಂಗ್ರಹವಾದ ಮೊಬಲಗು ನೋಂದಣಿ ಮತ್ತು ಮದ್ರಾ೦ಕ ಇಲಾಖೆಗೆ ಸ೦ಬ೦ಧ ಪಟ್ಟಿದ್ದಾಗಿರುತ್ತದೆ.
ಈ ಹಿಂದೆ ನ್ಯಾಯಾ೦ಗ ಇಲಾಖೆಯ ಹೆಸರಿನಲ್ಲಿ K2 ಚಲನ್ ಮೂಲಕ ಪಾವತಿಸಲು ಅವಕಾಶವಿತ್ತು. ಈಗ ನೋಂದಣಿ ಇಲಾಖೆಯ ಹೆಸರಿನಲ್ಲಿ K2 ಚಲನ್ ಮೂಲಕ ಪಾವತಿ ಮಾಡತಕ್ಕದ್ದಾಗಿದೆ. ಈ ಮಾಹಿತಿಯನ್ನು ತಮ್ಮ ಅಧೀನದಲ್ಲಿರುವ ಎಲ್ಲಾ ನ್ಯಾಯಾಲಯಗಳ ಡಿಡಿಒ ಅವರ ಅವಗಾಹನೆಗೆ ತರಲು ನ್ಯಾಯಾ೦ಗ ಇಲಾಖೆಯ ಎಲ್ಲಾ ಘಟಕದ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ಬದಲಾದ ಪಾವತಿ ವಿಧಾನ ಈ ಕೆಳಗಿನ ಉಪ ಉದ್ದೇಶಗಳಿಗೆ ಸ೦ಬ೦ಧಪಟ್ನಿK2 ಚಲನ್ ಪಾವತಿಗಳಿಗೆ ಸಂಬ೦ಧಪಟ್ಟಿದ್ದಾಗಿದೆ.
1. Court order-Duty/stamp duty/Duty and penalty.
2. Court-order-Deficit stamp duty.
3. Court order-Revenue stamp fee
4. Court order-Receipt on non judicial stamp
5. Court order-others
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ