23/12/2024

Law Guide Kannada

Online Guide

ಕಾನೂನು ಹೋರಾಟದಿಂದ ಕೇವಲ ವಕೀಲರಿಗೆ ಮಾತ್ರ ಲಾಭ: ಒಮ್ಮತ ನಿರ್ಧಾರಕ್ಕೆ ಬನ್ನಿ- ಮಹಿಳೆಗೆ ಸುಪ್ರೀಂ ನ್ಯಾಯಮೂರ್ತಿಗಳ ಕಿವಿಮಾತು  

ನವದೆಹಲಿ: ನಿಮಗೆ ಒಟ್ಟಿಗೆ ಬಾಳಲು ಇಷ್ಟವಿಲ್ಲದಿದ್ದರೇ ಒಮ್ಮತ ನಿರ್ಧಾರಕ್ಕೆ ಬಂದು ಬೇರೆಯಾಗಿ. ನಿರಂತರ ಕಾನೂನು ಹೋರಾಟದಿಂದ ಕೇವಲ ವಕೀಲರಿಗೆ ಮಾತ್ರ ಲಾಭ. ಹೀಗಾಗಿ ನೀವು ಒಬ್ಬರಿಗೊಬ್ಬರು ಒಮ್ಮತದಿಂದ ವಿಚ್ಛೇದನಕ್ಕೆ ಮುಂದಾದರೇ ಒಳ್ಳೆಯದು ಎಂದು ವಿಚ್ಚೇದನ ಪ್ರಕರಣವೊಂದರ ಮಹಿಳೆಗೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ಅವರು ಕಿವಿಮಾತು ಹೇಳಿದ್ದಾರೆ.  

ಮ್ಯಾಟ್ರಿಮೋನಿಯ ಮೂಕದ್ದಮೆ ವಿಚಾರಣೆ ವೇಳೆ ಸುಪ್ರೀಂಕೋರ್ಟ್  ಸಿಜೆಐ ಡಿ ವೈ ಚಂದ್ರಚೂಡ ಅವರು ಮಹಿಳೆಯ ವಿದ್ಯಾಭ್ಯಾಸದ ಬಗ್ಗೆ ವಿಚಾರಿಸಿದ್ದು.  ನನ್ನದು M.Tech ಆಗಿದ್ದು ಯುಎಸ್ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಮಾಡಿದ್ದೇನೆ ಎಂದು ಮಹಿಳೆ ತಿಳಿಸಿದ್ದಾರೆ. ಎಲ್ಲಿ ಕೆಲಸ ಮಾಡುತ್ತಿದ್ದೀರಾ ಎಂದು ಕೇಳಿದಾಗ ಮಹಿಳೆ ಎಲ್ಲಿಯೂ ಇಲ್ಲ ಎಂದಿದ್ದಾರೆ. ಅದಕ್ಕೆ ಮುಖ್ಯನ್ಯಾಯಮೂರ್ತಿಗಳು ಮೊದಲು ನೀವು ಒಂದು ಕೆಲಸಕ್ಕೆ ಸೇರಿಕೊಳ್ಳಿ. ನೀವು ಶಿಕ್ಷಿತರು ಆದರೂ ಕೂಡ ನೀವು ಕೆಲಸದಲ್ಲಿಲ್ಲ. ಮೊದಲು ನೀವು ಒಂದು ಕೆಲಸ ಹುಡುಕಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. 

ನೀವು ಮತ್ತೆ ಒಂದಾಗಲು ಈಗ ಸಾಧ್ಯವಿಲ್ಲ ಎಂಬುದು ನಿಮಗೆ ಗೊತ್ತಿದೆ. ನೀವು ಅನಕ್ಷರಸ್ಥರಾಗಿದ್ದರೆ ಅದೊಂದು ಮಾತು ಬೇರೆ ಇತ್ತು. ಆದರೆ ನೀವು ಒಳ್ಳೆಯ ಶೈಕ್ಷಣಿಕ ಹಿನ್ನೆಲೆ ಇದ್ದವರು. ಹೀಗಾಗಿ ಮೊದಲು ನಿಮಗಾಗಿ ಒಂದು ಕೆಲಸ ಹುಡುಕಿಕೊಳ್ಳಿ ಎಂದು ಮುಖ್ಯ ನ್ಯಾಯಮೂರ್ತಿಗಳಾದ ಚಂದ್ರಚೂಡ್ ಅವರು ತಿಳಿಸಿದ್ದಾರೆ. 

ಹಾಗೆಯೇ  ಈ ಪ್ರಕರಣದಲ್ಲಿ ನೀವು ಈಗಾಗಲೇ ಹತ್ತು ವರ್ಷ ಕಳೆದಿದ್ದೀರಾ, ಇದು ಇನ್ನೂ 10 ವರ್ಷ ತಳ್ಳಿಕೊಂಡು ಹೋಗಬಹುದು ಇದರಿಂದ ವಕೀಲರುಗಳಿಗೆ ಲಾಭವೇ ಹೊರತು ನಿಮ್ಮ ಬದುಕಿನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಇದರಿಂದ ನಿಮ್ಮ ಬದುಕು ಸರಿಯಾಗುವುದಿಲ್ಲ. ಯಾಕೆ ನೀವು ಒಬ್ಬರಿಗೊಬ್ಬರು ಒಮ್ಮತದಿಂದ ವಿಚ್ಛೇದನಕ್ಕೆ ಮುಂದಾಗಬಾರದು ಒಮ್ಮೆ ಯೋಚಿಸಿ ನೋಡಿ ಮುಖ್ಯನ್ಯಾಯಮೂರ್ತಿಗಳಿ ತಿಳಿಸಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.