23/12/2024

Law Guide Kannada

Online Guide

ಸಿವಿಲ್ ನ್ಯಾಯಾಲಯಗಳಿಗೆ ಮಾತ್ರ ಜಾತಿ ದಾಖಲೆ ತಪ್ಪು ತಿದ್ದುವ ಅಧಿಕಾರ- ಹೈಕೋರ್ಟ್ ತೀರ್ಪು

ಬೆಂಗಳೂರು: ಶಾಲಾ ಕಾಲೇಜುಗಳ ದಾಖಲೆಗಳಲ್ಲಿ ಹೆಸರು, ಹುಟ್ಟಿದ ದಿನಾಂಕ, ಜಾತಿ ಮುಂತಾದ ವಿಷಯಗಳಲ್ಲಿ ತಪ್ಪುಗಳಾಗುವುದು ಸಹಜ. ಇಂತಹ ತಪ್ಪುಗಳನ್ನ ನಿಯಮಗಳ ಪ್ರಕಾರ, ಕಾನೂನಿನ ರೀತಿಯಲ್ಲಿ ತಿದ್ದಬಹುದು. ಅಂತೆಯೇ ಜಾತಿ ಕುರಿತು ನಮೂದಾಗಿರುವ ತಪ್ಪುಗಳನ್ನು ಸರಿಪಡಿಸುವಂತೆ ನರ‍್ದೇಶಿಸುವ ಅಧಿಕಾರ ಶಿಕ್ಷಣ ಇಲಾಖೆ, ಕ೦ದಾಯ ಅಧಿಕಾರಿ ಜನನ ಮತ್ತು ಮರಣ ನೋಂದಣಿ ಅಧಿಕಾರಿಗಳಿಗೂ ಇರುವುದಿಲ್ಲ. ಹಾಗಾದರೆ, ಕಾನೂನು ಪ್ರಕಾರ ಈ ಅಧಿಕಾರ ಯಾರಿಗೆ ಇದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹೈಕರ‍್ಟ್ ತರ‍್ಪನ್ನು ಪ್ರಕಟಿಸಿದೆ.

ಶಾಲಾ ಕಾಲೇಜು ದಾಖಲೆಗಳಲ್ಲಿ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿದ ಬೋವಿ ಜಾತಿಗೆ ಬದಲಾಗಿ ಗೌಡ ಎ೦ದು ನಮೂದಾಗಿರುವ ಅಂಶವನ್ನು ಸರಿಪಡಿಸಲು ಕೋರಿ ಸಲ್ಲಿಸಲಾಗಿದ್ದ ದಾವೆಯನ್ನು ವಿಚಾರಣೆಗೆ ಪರಿಗಣಿಸುವ ಅಧಿಕಾರ ತನಗಿಲ್ಲ ಎ೦ದು ಕೊಡಗು ಜಿಲ್ಲೆಯ ಸಿವಿಲ್ ನ್ಯಾಯಾಲಯ ಆದೇಶ ಹೊರಡಿಸಿತ್ತು. ಈ ಆದೇಶದಿ೦ದ ಬಾಧಿತರಾದ ಕೊಡಗಿನ ಇಬ್ಬರು ವಿದ್ಯರ‍್ಥಿನಿಯರು ಹೈಕರ‍್ಟ್ಮೆಟ್ಟಿಟೇರಿದ್ದರು.

ಈ ರ‍್ಜಿ ವಿಚಾರಣೆ ನಡೆಸಿದ ಹೈಕರ‍್ಟ್ ನ್ಯಾ.ಸಚಿನ್ ಶಂಕರ್ ಮಗದಂ ಅವರಿದ್ದ ಏಕಸದಸ್ಯ ನ್ಯಾಯಪೀಠ, ಜಾತಿ ದಾಖಲೆ ತಪ್ಪು ತಿದ್ದುವ ಅಧಿಕಾರ ಸಿವಿಲ್ ನ್ಯಾಯಾಲಯಗಳಿಗೆ ಮಾತ್ರ ಇದೆ ಎ೦ದು ತರ‍್ಪು ನೀಡಿದೆ.

ಜಾತಿ ಪ್ರಮಾಣ ಆಧರಿಸಿ ಶಾಲಾ ಕಾಲೇಜುಗಳ ದಾಖಲೆಗಳಲ್ಲಿ ಉ೦ಟಾಗಿರುವ ದೋಷ ಸರಿಪಡಿಸಲು ಕೋರಿದ ಮನವಿಯನ್ನು ಪರಿಗಣಿಸಿ ಅಗತ್ಯ ಪರಿಹಾರ ಒದಗಿಸಲು ಸಿವಿಲ್ ನ್ಯಾಯಾಲಯ ಅಧಿಕಾರ ವ್ಯಾಪ್ತಿ ಹೊ೦ದಿದೆ ಎ೦ದು ಹೈಕರ‍್ಟ್ ನ್ಯಾಯಪೀಠ ವಿವರವಾಗಿ ಸೃಷ್ಟಪಡಿಸಿದೆ.

ಹಾಜರುಪಡಿಸಿದ ದಾಖಲೆಗಳ ಪ್ರಕಾರ ದಾವೆದಾರ ವಿದ್ಯರ‍್ಥಿನಿಯರು ಭೋವಿ ಸಮುದಾಯಕ್ಕೆ ಸೇರಿದ್ದಾರೆ. ಈ ಕುರಿತು ಅವರಿಗೆ ತಹಶೀಲ್ದಾರ್ ಸಹ ಜಾತಿ ಪ್ರಮಾಣ ಪತ್ರವನ್ನೂ ವಿತರಿಸಿದ್ದಾರೆ. ಜಾತಿ ಪ್ರಮಾಣ ಪತ್ರದ ಮಾನ್ಯತೆಯನ್ನು ಮೌಲ್ಯೀಕರಣಕ್ಕೆ ದಾವೆದಾರರು ಕೋರಿಲ್ಲ. ಮೀಸಲು ಕೆಟಗರಿ ಅಥವಾ ಹಿಂದುಳಿದ ರ‍್ಗಗಡಿ ರ‍್ಕಾರಿ ಉದ್ಯೋಗ ಕೋರಿದ ವೇಳೆ ಜಾತಿ ಪ್ರಮಾಣ ಪತ್ರದ ಮಾನ್ಯತೆಯ ಮೌಲ್ಯೀಕರಣದ ಪುಶ್ನೆ ಉದ್ಭವಿಸುತ್ತದೆ. ಆದ್ದರಿ೦ದ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಮು೦ದೆ ಪರಿಹಾರ ಕೋರುವ ಅಗತ್ಯ ಅವರಿಗಿಲ್ಲ ಎ೦ದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ತಹಶೀಲ್ದಾರ್ ವಿತರಿಸಿದ ಜಾತಿ ಪ್ರಮಾಣ ಪತ್ರವನ್ನು ಆಧರಿಸಿ ಶಾಲಾ ಕಾಲೇಜುಗಳಲ್ಲಿ ದಾಖಲೆಗಳಲ್ಲಿ ಉಂಟಾಗಿರುವ ದೋಷವನ್ನು ಸರಿಪಡಿಸಲು ದಾವೆದಾರರು ಕೋರಿದ್ದು, ಈ ಕುರಿತು ವಿಚಾರಣೆ ನಡೆಸಿ ಪರಿಹಾರ ಕಲ್ಪಿಸುವುದಕ್ಕೆ ಸಿವಿಲ್ ನ್ಯಾಯಾಲಯಗಳಿಗೆ “ರ‍್ನಾಟಕ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿ೦ದುಳಿದ ರ‍್ಗಗಳ (ನೇಮಕಾತಿ ಮೀಸಲು ಇತ್ಯಾದಿ) ಕಾಯ್ದೆ-೧೯೯೦”ಯ. ನಿಯಮಗಳು ಅಡ್ಡ ಬರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.