ಸುಪ್ರೀಂಕೋರ್ಟ್ ನಿಂದ ನೂತನ ವೆಬ್ ಪೇಜ್ ಆರಂಭ: ಏನಿದರ ಮಹತ್ವ ಗೊತ್ತೆ…?
ನವದೆಹಲಿ: ಸಾರ್ವಜನಿಕರಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿನ ಚಾರಿತ್ರಿಕವಾದ ಹಾಗೂ ಮಹತ್ವದ ತೀರ್ಪುಗಳ ಒದಗಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್ ನೂತನ ವೆಬ್‌ಪೇಜ್ ಪ್ರಾರಂಭಿಸಿದೆ.
‘ಲ್ಯಾಂಡ್‌ಮಾರ್ಕ್ ಜಡ್ಜಮೆಂಟ್ ಸಮ್ಬರೀಸ್’ (Landmark Judgment Summaries) ವೆಬ್‌ಪುಟದಲ್ಲಿ ಮಹತ್ವದ ತೀರ್ಪುಗಳಿದ್ದು ಜನರು ಸುಲಭವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಅನುಕೂಲ ಕಲ್ಪಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಪ್ರಕಟಣೆ ತಿಳಿಸಿದೆ.
ಸುಪ್ರೀಂ ಕೋರ್ಟ್ ಸಂಶೋಧನೆ ಮತ್ತು ಯೋಜನಾ ಕೇಂದ್ರವು ತೀರ್ಪುಗಳ ಸಾರಾಂಶ ಸಿದ್ಧಪಡಿಸುತ್ತದೆ.
ಪ್ರಜೆಗಳಿಗೆ ತೀರ್ಪುಗಳ ಮಾಹಿತಿ ಇರಬೇಕು, ಕಾನೂನು ಕುರಿತು ಜಾಗೃತಿ ಮೂಡಿಸುವುದು ಹಾಗೂ ಕಾನೂನು ಅನುಷ್ಠಾನ ಪ್ರಕ್ರಿಯೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಬೇಕು ಎಂಬ ಸುಪ್ರೀಂಕೋರ್ಟ್‌ನ ಆಶಯದಂತೆ ಈ ವೆಬ್‌ಪೇಜ್ ರೂಪಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ಸುಪ್ರೀಂ ಕೋರ್ಟ್ ತೀರ್ಪುಗಳು ಎಲ್ಲರಿಗೂ ಸಿಗುವಂತಾಗಬೇಕು. ತೀರ್ಪುಗಳು ಸಾಮಾನ್ಯವಾಗಿ ದೀರ್ಘವಾಗಿರುತ್ತವೆ. ಸಂಕೀರ್ಣವಾದ ಭಾಷೆ ಬಳಸಲಾಗಿರುತ್ತದೆ. ಇದರಿಂದ ಜನರು ತೀರ್ಪುಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ತೊಂದರೆ ಎದುರಿಸುತ್ತಾರೆ. ಕೆಲವೊಮ್ಮೆ ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಈ ಎಲ್ಲ ಸಮಸ್ಯೆಗಳ ನಿವಾರಣೆಗಾಗಿ ಈ ವೆಬ್‌ಪೇಜ್ ಆರಂಭಿಸಲಾಗಿದೆ’ ಎಂದೂ ತಿಳಿಸಲಾಗಿದೆ.
ದೇಶದ ಪ್ರಜೆಗಳಿಗೆ ನ್ಯಾಯಾಂಗಸಾಗಿಬಂದ ದಾರಿಯಲ್ಲಿನ ಮೈಲುಗಲ್ಲು ತೀರ್ಪುಗಳ ಮಾಹಿತಿ ಇರಬೇಕು. ಕಾನೂನು ಕುರಿತು ಜಾಗೃತಿ ಮೂಡಿಸುವುದು ಹಾಗೂ ಕಾನೂನು ಅನುಷ್ಠಾನ ಪ್ರಕ್ರಿಯೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸಬೇಕು ಎಂಬ ಸುಪ್ರೀಂಕೋರ್ಟ್ ಆಶಯದಂತೆ ವೆಬ್ ಪುಟವನ್ನು ರೂಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವೆಬ್‌ಪೇಜ್ ವಿಶೇಷತೆಗಳೇನು..
ವರ್ಷವಾರು ಮಹತ್ವದ ತೀರ್ಪುಗಳ ಪಟ್ಟಿ ಇರಲಿದೆ.
ಸಾರ್ವಜನಿಕ ಹಿತಾಸಕ್ತಿಯ ತೀರ್ಪುಗಳ ಅಳವಡಿಕೆ
ಪ್ರಕರಣ ಕುರಿತು ಒಂದು ಸಾಲಿನ ವಿವರಣೆ.
ತೀರ್ಪಿನ ಪೂರ್ಣಪಾಠ ಮತ್ತು ವಿಚಾರಣೆಯ ವಿಡಿಯೊಗೆ ಲಿಂಕ್ ನೀಡಲಾಗಿರುತ್ತದೆ
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ