Lawyer calls himself ‘judge’ for violating traffic rules: What happened next…?
ಸಂಚಾರ ನಿಯಮ ಉಲ್ಲಂಘಿಸಿ ತಾನು ‘ಜಡ್ಜ್’ ಎಂದ ವಕೀಲ: ಮುಂದೇನಾಯ್ತು…?
ಪಂಜಾಬ್: ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಲೇ ಇದ್ದು ಇದರಿಂದಾಗಿ ಅಪಘಾತ ಸಾವುನೋವುಗಳು ಕೂಡ ಹೆಚ್ಚುತ್ತಿದೆ. ಈ ಮಧ್ಯೆ ಟ್ರಾಫಿಕ್ ರೂಲ್ಸ್ ಉಲ್ಲಂಘಿಸುವವರು ದಂಡ ಪಾವತಿಯಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಕಸರತ್ತು, ಪ್ಲಾನ್ ಗಳನ್ನ ಮಾಡುತ್ತಾರೆ. ಅಂತೆಯೇ ಇಲ್ಲೊಬ್ಬ ವಕೀಲ ಸ0ಚಾರ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದು ನಂತರ ತಾನೊಬ್ಬ ನ್ಯಾಯಾಧೀಶ (ಜುಡೀಷಿಯಲ್ ಮ್ಯಾಜಿಸ್ಟೇಟ್) ಎಂದು ಸುಳ್ಳು ಹೇಳಿಕೊ0ಡಿದ್ದ ಪ್ರಸಂಗವೊಂದು ನಡೆದಿದೆ.
ಪ್ರಕಾಶ್ ಸಿ0ಗ್ ಎಂಬ ವಕೀಲನೇ ತಾನು ನ್ಯಾಯಾಧೀಶ ಎಂದು ಹೇಳಿಕೊಂಡಿರುವುದು. ಸ0ಚಾರ ನಿಯಮ ಉಲ್ಲಂಘನೆ ಸ0ದರ್ಭದಲ್ಲಿ ಪೊಲೀಸರು ವಕೀಲ ಪ್ರಕಾಶ್ ಸಿ0ಗ್ ಅವರನ್ನು ತಡೆದು ನಿಲ್ಲಿಸಿದಾಗ, ನೀವೇಕೆ ನನ್ನನ್ನು ತಡೆದು ನಿಲ್ಲಿಸಿದಿರಿ. ನಾನು ನಿಮಗೆ ಚಾಲನಾ ಪರವಾನಿಗೆ ತೋರಿಸುವುದಿಲ್ಲ. ಸಬ್ ಇನ್ಸ್ಪೆಕ್ಟರ್ ಮಾತ್ರ ನನ್ನ ಲೈಸನ್ಸ್ ಕೇಳಬಹುದು ಎ0ದು ಪೊಲೀಸರಿಗೆ ಎದುರುತ್ತರ ನೀಡಿದ್ದಾರೆ.
ಅಲ್ಲದೆ, ನಾನೊಬ್ಬ ಪ್ರಥಮ ದರ್ಜೆ ನ್ಯಾಯಿಕ ದ0ಡಾಧಿಕಾರಿ (ಜುಡೀಷಿಯಲ್ ಮ್ಯಾಜಿಸ್ಟ್ರೇಟ್) ಎ0ದು ಹೇಳಿಕೊಂಡಿದ್ದು, ಈ ಕುರಿತ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ವಕೀಲರ ಪರಿಷತ್ತು ಆರೋಪಿ ವಕೀಲರಿಗೆ ನೋಟೀಸ್ ಜಾರಿಗೊಳಿಸಿದೆ.
ವಕೀಲ ಪ್ರಕಾಶ್ ಸಿಂಗ್ ಕೃತ್ಯ ಗಮನಕ್ಕೆ ಬರುತ್ತಲೇ ಪ0ಜಾಬ್ ಮತ್ತು ಹರ್ಯಾಣ ವಕೀಲರ ಪರಿಷತ್ತು ವಕೀಲ ನೋಟೀಸ್ ಜಾರಿಗೊಳಿಸಿದೆ. ಪರಿಷತ್ತಿನ ಶಿಸ್ತು ಸಮಿತಿ ಮು0ದೆ ಹಾಜರಾಗಿ ಪ್ರಕರಣಕ್ಕೆ ಸ0ಬಂಧಿಸಿದಂತೆ ಸ್ಪಷ್ಟೀಕರಣ ವಿವರಣೆ ನೀಡುವಂತೆ ಆರೋಪಿ ವಕೀಲ ಪ್ರಕಾಶ್ ಸಿಂಗ್ ಗೆ ತಾಕೀತು ಮಾಡಿದೆ.
ಈ ಪ್ರಕರಣದ ಬಗ್ಗೆ ವಿಚಾರಣೆಯ ದಿನ ನಿಗದಿ ಮಾಡಲಾಗಿದ್ದು, ನಿಗದಿತ ದಿನದ0ದು ವಿಚಾರಣೆಗೆ ಹಾಜರಾಗದೇ ಇದ್ದರೆ ಪ್ರತಿವಾದಿಯನ್ನು ಶಿವಾಯಿ ಮಾಡಿ ಪ್ರಕರಣವನ್ನು ಏಕಪಕ್ಷೀಯ ಎ0ದು ಪರಿಗಣಿಸಲಾಗುವುದು ಎ0ದು ನೋಟೀಸ್ ನಲ್ಲಿ ಎಚ್ಚರಿಕೆ ನೀಡಲಾಗಿದೆ.
ಈ ಪ್ರಕರಣಕ್ಕೆ ಸ0ಬಂಧಿಸಿದ0ತೆ ಚಂಡೀಗಢ ಪೊಲೀಸರು ವಕೀಲ ಪ್ರಕಾಶ್ ಸಿ0ಗ್ ವಿರುದ್ದ ಐಪಿಸಿ ಸೆಕ್ಷನ್ 379,186 ಮತ್ತು 419ರ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಸಿ0ಗ್ ಅವರನ್ನು ವಶಕ್ಕೆ ಪಡೆದು ದಂಡ ವಿಧಿಸಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ