23/12/2024

Law Guide Kannada

Online Guide

ಹರೆಯದ ಪ್ರೇಮಿಗಳಲ್ಲಿ ಚುಂಬನ, ಆಲಿಂಗನ ಸಾಮಾನ್ಯ: ಅದು ಅಪರಾಧ ಅಲ್ಲ ಎಂದ ಹೈಕೋರ್ಟ್

ಮದ್ರಾಸ್: ಹರೆಯದ ಪ್ರೇಮಿಗಳಲ್ಲಿ ಚುಂಬಿಸುವುದು ಮತ್ತು ಆಲಿಂಗನ ಮಾಡುವುದು ಚುಂಬನ ಸಾಮಾನ್ಯವಾಗಿದೆ. ಇದು ಅಪರಾಧವಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ

ಮದ್ರಾಸ್ ಹೈಕೋರ್ಟ್ ನ್ಯಾ. ಆನಂದ್ ವೆಂಕಟೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಯುವಕನ ವಿರುದ್ಧ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ರದ್ದು ಮಾಡಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಅರ್ಜಿಯ ವಿಚಾರಣೆ ವೇಳೆ, ಮದ್ರಾಸ್ ಹೈಕೋರ್ಟ್, ಪ್ರೇಮಿಗಳ ನಡುವೆ ಅಪ್ಪಿಕೊಳ್ಳುವುದು ಮತ್ತು ಚುಂಬಿಸುವುದು ಸಹಜ. ಅದು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.

19 ವರ್ಷದ ಯುವತಿಯೊಬ್ಬಳು ತನ್ನ ಬಾಯ್ ಫ್ರೆಂಡ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಆತ ತನ್ನ ಪ್ರೇಮಿಯಾಗಿದ್ದು, ತಬ್ಬಿಕೊಂಡಿದ್ದಲ್ಲದೆ ಆತ ನನಗೆ ಮುತ್ತು ಕೂಡ ಕೊಟ್ಟಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಳು.

ಆದರೆ, ಪ್ರೇಮಿ ಯುವಕ ಈಗ ನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಯುವತಿ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ತಿಳಿಸಿದ್ದಳು. ಈ ಮಧ್ಯೆ ತನ್ನ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದುಗೊಳಿಸುವಂತೆ ಕೋರಿ ಆರೋಪಿ ಯುವಕ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ವೆಂಕಟೇಶ್ ಎಫ್ಐಆರ್ ರದ್ದುಪಡಿಸಿ ಆದೇಶಿಸಿದರು.

ದೂರುದಾರೆ ಮತ್ತು ಆರೋಪಿ ಇಬ್ಬರೂ ಸಹ ಹದಿಹರೆಯಕ್ಕೆ ಸೇರಿದವರಾಗಿದ್ದಾರೆ. ಪರಸ್ಪರ ಪ್ರೀತಿಯಲ್ಲಿ ಇದ್ದಾಗ, ಹಗ್ ಮಾಡುವುದು ಅಥವಾ ಕಿಸ್ ಕೊಡುವುದು ಇವೆಲ್ಲ ಸಾಮಾನ್ಯ ಪ್ರಕ್ರಿಯೆಗಳು ಎಂದು ನ್ಯಾಯಪೀಠ ತಿಳಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.