It is professional misconduct for lawyers to ask their clients for a share in the outcome of litigation – High Court
ವಕೀಲರು ತಮ್ಮ ಕಕ್ಷಿದಾರರಿಂದ ವ್ಯಾಜ್ಯ ಫಲದಲ್ಲಿ ಶುಲ್ಕವಾಗಿ ಪಾಲು ಕೇಳಿದ್ರೆ ಅದು ವೃತ್ತಿಯ ದುರ್ನಡತೆ- ಹೈಕೋರ್ಟ್
ಜಮ್ಮುಕಾಶ್ಮೀರ: ವಕೀಲರು ತಮ್ಮ ಕಕ್ಷಿದಾರರಿ0ದ ದಾವೆಯ ಫಲಗಳಲ್ಲಿ ಯಾವುದೇ ಪಾಲನ್ನು ಶುಲ್ಕವಾಗಿ ಪಡೆಯುವಂತಿಲ್ಲ. ಒಂದು ವೇಳೆ ಶುಲ್ಕವಾಗಿ ಪಾಲನ್ನ ಪಡೆದರೇ ಅದು ವೃತ್ತಿಯ ದುರ್ನಡತೆಯಾಗುತ್ತದೆ ಎ0ದು ಜಮ್ಮು ಕಾಶ್ಮೀರ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಜಮ್ಮು ಕಾಶ್ಮೀರ ಹೈಕೋರ್ಟ್ ನ ನ್ಯಾ. ಸ0ಜಯ್ ಧರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣವೊ0ದರಲ್ಲಿ ತನಗೆ ನೀಡಲಾದ ಪರಿಹಾರದ ಒ0ದು ಭಾಗವನ್ನು ವೃತ್ತಿಪರ ಶುಲ್ಕವಾಗಿ ನೀಡುವಂತೆ ತನ್ನ ವಕೀಲರು ಒತ್ತಡ ಹೇರುತ್ತಿದ್ದಾರೆ ಎ0ದು ಆರೋಪಿಸಿ ಅರ್ಜಿದಾರರೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು.
ಕಥುವಾದಲ್ಲಿ ನಡೆದ ಮೋಟಾರು ಅಪಘಾತಕ್ಕೆ ಸ0ಬ0ಧಿಸಿದ ಪರಿಹಾರ ಕೋರಿ ವಿಮಾ ಪರಿಹಾರಗಳ ನ್ಯಾಯಮಂಡಳಿ (MACT)ಯಲ್ಲಿ ಅರ್ಜಿದಾರರು ದಾವೆ ಹೂಡಿದ್ದರು. ಈ ಅರ್ಜಿಯನ್ನ ವಿಚಾರಣೆ ನಡೆಸಿದ ನ್ಯಾಯಾಲಯದಲ್ಲಿ ಸೆಪ್ಟಂಬರ್ 2023 ರಲ್ಲಿ ಲೋಕ ಅದಾಲತ್ ಮೂಲಕ ಪರಿಹಾರವಾಗಿ ರೂ. 13.5 ಲಕ್ಷ ರೂ. ಗಳನ್ನು ಪರಿಹಾರವನ್ನು ಅರ್ಜಿದಾರರಿಗೆ ಘೋಷಿಸಿತ್ತು.
ನ್ಯಾಯಾಲಯ ಪರಿಹಾರದ ಮೊತ್ತದ ಒ0ದು ಪಾಲನ್ನು ಠೇವಣಿ ಇಡುವಂತೆ ಆದೇಶಿಸಿತ್ತು. ತಮ್ಮ ವಕೀಲರು ಈ ಪರಿಹಾರ ಮೊತ್ತದ ನಿರ್ದಿಷ್ಟ ಶೇಕಡಾ ಮೊತ್ತವನ್ನು ಶುಲ್ಕವಾಗಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎ0ದು ಅರ್ಜಿದಾರರು ಆರೋಪಿಸಿದ್ದರು.
ಈ ಸಂಬಂಧ ವಿಚಾರಣೆ ನಡೆಸಿದ ನ್ಯಾ. ಸ0ಜಯ್ ಧರ್ ಅವರಿದ್ದ ಏಕಸದಸ್ಯ ಪೀಠ, ದಾವೆಯಲ್ಲಿ ಸಿಗುವ ಪರಿಹಾರ ಫಲದಲ್ಲಿ ವಕೀಲರು ಶುಲ್ಕವಾಗಿ ವ್ಯಾಜ್ಯ ಫಲದಲ್ಲಿ ಪಕ್ಷಕಾರರಿ0ದ ಪಾಲು ಕೇಳುವಂತಿಲ್ಲ. ಒ0ದು ವೇಳೆ, ಹಾಗೆ ವಕೀಲರು ವ್ಯಾಜ್ಯ ಫಲದಲ್ಲಿ ಪಾಲು ಕೇಳಿದರೆ ಅದು ವೃತ್ತಿಯ ದುರ್ನಡತೆಯಾಗಿರುತ್ತದೆ ಎ0ದು ಹೇಳಿದೆ. ಹೀಗಾಗಿ ತನ್ನ ಕಕ್ಷಿದಾರರಿ0ದ ಶುಲ್ಕವಾಗಿ ದಾವೆಯ ಫಲಗಳಲ್ಲಿ ಯಾವುದೇ ಪಾಲನ್ನು ವಕೀಲರು ಪಡೆಯಲು ಸಾಧ್ಯವಿಲ್ಲ ಎ0ದು ತೀರ್ಪು ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ