23/12/2024

Law Guide Kannada

Online Guide

High Court opined that immediate transfer of a government official is not a solution for a serious charge

ಗಂಭೀರ ಆರೋಪಕ್ಕೆ ಸರ್ಕಾರಿ ಅಧಿಕಾರಿಯ ತಕ್ಷಣ ವರ್ಗಾವಣೆಯೇ ಪರಿಹಾರವಲ್ಲ-ಹೈಕೋರ್ಟ್ ಅಭಿಪ್ರಾಯ

ಬೆಂಗಳೂರು: ಸರ್ಕಾರಿ ಅಧಿಕಾರಿಯೊಬ್ಬರ ವಿರುದ್ದ ಗಂಭೀರ ಆರೋಪ ಕೇಳಿ ಬಂದಾಗ ಅವರನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನ ರದ್ದು ಪಡಿಸಿದ್ದ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಏಂಖಿ) ಕ್ರಮವನ್ನು ಎತ್ತಿ ಹಿಡಿದ ಹೈಕೋರ್ಟ್ , ಯಾವುದೇ ಸರ್ಕಾರಿ ಅಧಿಕಾರಿಯ ವಿರುದ್ದ ಗಂಭೀರ ಆರೋಪ ಕೇಳಿ ಬಂದರೇ ಅವರನ್ನ ತಕ್ಷಣ ವರ್ಗಾವಣೆ ಮಾಡುವುದೇ ಪರಿಹಾರವಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಡಾ. ಬಸನಗೌಡ ಅವರು ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟು0ಬ ಕಲ್ಯಾಣ ಇಲಾಖೆ ಅಧಿಕಾರಿಯಾಗಿದ್ದರು. ಅವರ ವಿರುದ್ದ ಆರೋಪ ಕೇಳಿ ಬಂದಾಗ ರಾಜ್ಯ ಸರ್ಕಾರ ಅವರನ್ನು ವರ್ಗಾವಣೆ ಮಾಡಿತ್ತು. ಇದನ್ನು ಪ್ರಶ್ನಿಸಿ ಡಾ. ಬಸನಗೌಡ ಕೆಎಟಿಎಗೆ ಮೇಲ್ಮನವಿ ಸಲ್ಲಸಿದ್ದರು. ಕೆಎಟಿಯು ಸರ್ಕಾರದ ಆದೇಶ ಕ್ರಮವನ್ನು ರದ್ದುಪಡಡಿಸಿತ್ತು.

ಕೆಎಟಿಯ ಆದೇಶವನ್ನು ಪ್ರಶ್ನಿಸಿ ಆ ಸ್ಥಾನಕ್ಕೆ ನಿಯೋಜನೆಗೊಂಡಿದ್ದ ಡಾ. ಶಶಿ ಪಾಟೀಲ್ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಇದನ್ನು ವಿಚಾರಣೆಗೆ ಎತ್ತಿಕೊ0ಡ ನ್ಯಾ ಸೂರಜ್ ಗೋವಿಂದರಾಜು ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ಸರ್ಕಾರಿ ಅಧಿಕಾರಿಯ ವಿರುದ್ಧ ಆರೋಪ ಕೇಳಿ ಬ0ದರೆ ಅದನ್ನು ಸ0ಬ0ಧಪಟ್ಟ ಸಕ್ಷಮ ಪ್ರಾಧಿಕಾರದ ಮೂಲಕ ಆ0ತರಿಕ ವಿಚಾರಣೆ ನಡೆಸಬೇಕು. ಆರೋಪ ಸಾಬೀತಾದರೆ ಶಿಸ್ತುಕ್ರಮ ಕೈಗೊಳ್ಳಬೇಕು. ಒ0ದು ವೇಳೆ, ತನಿಖೆಗೆ ಅಡ್ಡಿ ಆಗುವ ಪರಿಸ್ಥಿತಿ ಇದ್ದರೆ ಅಂತಹ ಸ0ದರ್ಭದಲ್ಲಿ ಆ ಆರೋಪಿತ ಅಧಿಕಾರಿಯನ್ನು ಮಧ್ಯಂತರ ಅವಧಿಗೆ ಸಸ್ಪೆಂಡ್ ಮಾಡಬಹುದು. ಆದರೆ, ಈ ಪ್ರಕ್ರಿಯೆ ನಡೆಸದೆ ಏಕಾಏಕಿ ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.

ಅಧಿಕಾರಿಯ ವರ್ಗಾವಣೆ ಸಮಸ್ಯೆಗೆ ಪರಿಹಾರವಲ್ಲ. ಅಂತಹ ವರ್ಗಾವಣೆ ಆದೇಶವು ತಪ್ಪಿತಸ್ಥರ ವಿರುದ್ಧ ಸಕ್ರಮ ಕೈಗೊಳ್ಳುವ ಸರ್ಕಾರದ ಅಧಿಕಾರದಿಂದ ತಪ್ಪಿಸಿಕೊ0ಡಂತೆ ಆಗುತ್ತದೆ ಎ0ದು ಹೇಳಿದ ಹೈಕೋರ್ಟ್, ಕರ್ನಾಟಕ ಆಡಳಿತಾತ್ಮಕ ಟ್ರಿಬ್ಯೂನಲ್ ಆದೇಶವನ್ನು ಪುರಸ್ಕರಿಸಿದೆ. ಇದೇ ವೇಳೆ, ಡಾ. ಬಸನಗೌಡ ವಿರುದ್ಧದ ಆರೋಪ ಕುರಿತು ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಕ್ತವಾಗಿದೆ ಎ0ದು ಹೇಳಿದೆ.
ಘಟನೆ ಹಿನ್ನೆಲೆ…

2022ರಲ್ಲಿ ಧಾರವಾಡದಲ್ಲಿ ಡಿಎಚ್ಓ ಆಗಿದ್ದ ಡಾ. ಬಸನಗೌಡ ವಿರುದ್ಧ ವ್ಯಾಪಕ ದೂರು ಕೇಳಿಬಂದಿತ್ತು. 188ಕ್ಕೂ ಹೆಚ್ಚು ವೈದ್ಯರು ಡಿಎಚ್ಓ ವಿರುದ್ಧ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಬಸನಗೌಡ ಅವರನ್ನು ಅವಧಿಪೂರ್ವ ವರ್ಗಾವಣೆ ಮಾಡಿ ಆ ಸ್ಥಾನಕ್ಕೆ ಡಾ. ಶಶಿ ಪಾಟೀಲ್ ಅವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಈ ಆದೇಶವನ್ನು ಕೆಎಟಿಯಲ್ಲಿ ಪ್ರಶ್ನಿಸಿದ ಬಸನಗೌಡ, ಗ್ರೂಪ್ ‘ಎ’ ವೃಂದದ ಅಧಿಕಾರಿಗಳನ್ನು ಕನಿಷ್ಠ 2 ವರ್ಷಕ್ಕೂ ಕಡಿಮೆ ಅವಧಿಗೆ ಟ್ರಾನ್ಸ್ ಫರ್ ಮಾಡುವಂತಿಲ್ಲ. ಸದರಿ ಪ್ರಕರಣದಲ್ಲಿ ತಮ್ಮನ್ನು ಒ0ದು ವರ್ಷಕ್ಕಿಂತಲೂ ಕಡಿಮೆ ಅವಧಿಯೊಳಗೆ ವರ್ಗಾವಣೆ ಮಾಡಲಾಗಿದೆ ಎ0ದು ಆರೋಪಿಸಿದ್ದರು. ಬಸನಗೌಡ ಅರ್ಜಿಯನ್ನು ಪುರಸ್ಕರಿಸಿ ಸರ್ಕಾರದ ಆದೇಶವನ್ನು ಕೆಎಟಿ ರದ್ದುಪಡಿಸಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.