23/12/2024

Law Guide Kannada

Online Guide

ಅಧಿಕಾರಿ ವ್ಯಾಪ್ತಿ ಮೀರಿ ಕ್ರಮ ಕೈಗೊಂಡ ಎಸಿ ವಿರುದ್ದ ಹೈಕೋರ್ಟ್ ಗರಂ: 25 ಸಾವಿರ ರೂ. ದಂಡ

ಬೆಂಗಳೂರು: ಸರ್ಕಾರದ ಯಾವುದೇ ಅಧಿಕಾರಿಯಾಗಲೀ ಅವರಿಗೆ ಅಧಿಕಾರ ವ್ಯಾಪ್ತಿ ಎಂಬುದು ಇರುತ್ತದೆ. ಆ ವ್ಯಾಪ್ತಿ ಮೀರಿ ಯಾವುದೇ ಕ್ರಮ, ನಿರ್ಧಾರಗಳನ್ನ ತೆಗೆದುಕೊಳ್ಳುವಂತಿಲ್ಲ. ಆದರೆ ಇಲ್ಲೊಬ್ಬರು ಅಧಿಕಾರಿ ಕಾನೂನನ್ನು ತಪ್ಪಾಗಿ ಅರ್ಥ ಮಾಡಿಕೊ0ಡು, ತನ್ನ ಅಧಿಕಾರ ವ್ಯಾಪ್ತಿ ಮೀರಿ ಕ್ರಮ ಕೈಗೊಂಡಿದ್ದಕ್ಕೆ ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ 25 ಸಾವಿರ ರೂ. ದಂಡ ವಿಧಿಸಿದೆ.
ಹೌದು, ಕಾನೂನನ್ನು ತಪ್ಪಾಗಿ ಅರ್ಥ ಮಾಡಿಕೊ0ಡು, ತನ್ನ ಅಧಿಕಾರ ವ್ಯಾಪ್ತಿ ಮೀರಿ ಆಸ್ತಿ ಖರೀದಿಯ ಕ್ರಯಪತ್ರವನ್ನು ರದ್ದುಪಡಿಸಿದ್ದ ಉಪವಿಭಾಗಾಧಿಕಾರಿಯವರ ಕ್ರಮಕ್ಕೆ ಗರಂ ಆದ ಹೈಕೋರ್ಟ್ನ ಸಚಿನ್ ಶ0ಕರ್ ಮಗ್ಡೂಮ್ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ ಪೀಠ) ತಪ್ಪಿತಸ್ಥ ಅಧಿಕಾರಿಗೆ 25 ಸಾವಿರ ರೂ. ದ0ಡ ವಿಧಿಸಿ ತೀರ್ಪು ನೀಡಿದೆ.

ಹಾವೇರಿಯ ಸವಣೂರು ಉಪ ವಿಭಾಗಾಧಿಕಾರಿ ಅವರ ಕ್ರಮದ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಹಿರಿಯ ನಾಗರಿಕರ ಕಾಯ್ದೆಯ ಸೆಕ್ಷನ್ 23ನ್ನು ಉಪ ವಿಭಾಗಾಧಿಕಾರಿಯವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದರಿಂದಾಗಿ ಸೂಕ್ತ ಬೆಲೆ ನೀಡಿ ಆಸ್ತಿ ಖರೀದಿ ಮಾಡಿದ ವ್ಯಕ್ತಿಯ ಕಾನೂನಾತ್ಮಕ ಹಕ್ಕಿಗೂ ಧಕ್ಕೆ ಉ0ಟು ಮಾಡಿದ್ದಾರೆ ಎ0ದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.

ಸರಿಯಾದ ನ್ಯಾಯವ್ಯಾಪ್ತಿ ಇಲ್ಲದಿದ್ದರೂ ನೋ0ದಾಯಿತ ಕ್ರಯಪತ್ರವನ್ನು ಉಪ ವಿಭಾಗಾಧಿಕಾರಿಯವರು ರದ್ದುಗೊಳಿಸಿದ್ದಾರೆ. ಈ ಮೂಲಕ ಆಸ್ತಿ ವಹಿವಾಟಿನ ಕಾನೂನಾತ್ಮಕ ಸ್ಥಿರತೆಯನ್ನು ದುರ್ಬಲಗೊಳಿಸಿದ್ದಾರೆ. ಜೊತೆಗೆ ಆಸ್ತಿ ಖರೀದಿಸಿದ ಅರ್ಜಿದಾರರಿಗೆ ಅನಗತ್ಯವಾಗಿ ದಾವೆ ಹೂಡುವ ಮತ್ತು ಹೆಚ್ಚುವರಿ ಹಣ ನೀಡಿ ವಿವಾದ ಬಗೆಹರಿಸಿಕೊಳ್ಳಬೇಕಾದ ಆರ್ಥಿಕ ಸಂಕಷ್ಟವನ್ನು ತಂದಿದ್ದಾರೆ ಎ0ದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಹಿರಿಯ ನಾಗರಿಕ ಕಾಯ್ದೆಯ ಸೆಕ್ಷನ್ 23 ಹೇಳೋದೇನು…?
ಹಿರಿಯ ನಾಗರಿಕ ಕಾಯ್ದೆಯು ವಯೋವೃದ್ಧರ ಹಿತಾಸಕ್ತಿಯನ್ನು ಕಾಪಾಡುತ್ತದೆ. ಈ ಕಾಯ್ದೆಯ ಸೆಕ್ಷನ್ 23ರಡಿಯಲ್ಲಿ ಪರಿಹಾರ ಕೋರುವಾಗ ವರ್ಗಾವಣೆಗೊ0ಡ ಆಸ್ತಿಯು ನಾಗರಿಕರ ಮೂಲಭೂತ ಅಗತ್ಯಗಳನ್ನು ಮತ್ತು ಭೌತಿಕ ಅಗತ್ಯಗಳನ್ನು ಪೂರೈಸುವ ಷರತ್ತುಗಳನ್ನು ಒಳಗೊಂಡಿರಬೇಕು. ಆದರೆ, ಈ ಪ್ರಕರಣದ ಆಸ್ತಿಯು ವಿಭಜನೆ ಮೂಲಕ ಹಂಚಿಕೆಯಾಗಿದ್ದು, ಈ ಮೇಲೆ ತಿಳಿಸಿದ ಯಾವ ಷರತ್ತುಗಳನ್ನು ಒಳಗೊಂಡಿರಲಿಲ್ಲ. ನಂತರ ಆಸ್ತಿಯನ್ನು ಅದರ ವಾರಸುದಾರರು ಮಾರಾಟ ಮಾಡಿದ್ದಾರೆ. ಖರೀದಿದಾರರು ಸೂಕ್ತ ಪ್ರತಿಫಲ ನೀಡಿ ಖರೀದಿ ಮಾಡಿದ್ದಾರೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.