ಕೋರ್ಟ್ನಲ್ಲಿ ಖುದ್ದು ಸರಕಾರಿ ಅಧಿಕಾರಿ ಹಾಜರಾತಿಗೆ ಮಾರ್ಗಸೂಚಿ
ನವದೆಹಲಿ : ಸರಕಾರಿ ಅಧಿಕಾರಿಗಳಿಗೆ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಿರಬೇಕೆಂದು ಸೂಚಿಸುವ ಸಂಬಂಧ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಸುಪ್ರೀಂಕೋರ್ಟ್ ಪ್ರಕಟಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದಿವಾಲಾ, ಮನೋಜ್ ಮಿಶ್ರ ಅವರನ್ನು ಒಳಗೊಂಡ ಪೀಠವು ಈ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ನ್ಯಾಯಾಲಯವು ಅಸಾಮಾನ್ಯ ಸಂದಭ ಗಳಲ್ಲಿ ಮಾತ್ರ ಸರಕಾರಿ ಅಧಿಕಾರಿಯ ಖುದ್ದು ಹಾಜರಾತಿಗೆ ಸೂಚಿಸಬೇಕು. ಆದರೆ, ಇದಕ್ಕೂ ಮೊದಲು ಈ ಅಧಿಕಾರಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅವಕಾಶ ಕಲ್ಪಿಸಬೇಕು. ಸರಕಾರಿ ಅಧಿಕಾರಿಯ ದಿರಿಸು, ವಿದ್ಯಾಹ ತೆ ಆಧರಿಸಿ ಅವರನ್ನು ಅವಮಾನಿಸುವ ರೀತಿ ನ್ಯಾಯಾಲಯಗಳು ಮಾತಾಡಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ