ಪೋಕ್ಸೋ ಆರೋಪಿ ಜಾಮೀನು ಶ್ಯೂರಿಟಿಗೆ ನಕಲಿ ದಾಖಲೆ ಸೃಷ್ಠಿ: ನ್ಯಾಯಾಧೀಶರ ಸಮಯ ಪ್ರಜ್ಞೆಯಿಂದ ವಂಚಕರ ಜಾಡು ಬಯಲು
ಬೆಂಗಳೂರು: ತಾಂತ್ರಿಕತೆ ಬೆಳೆದಂತೆ ಇತ್ತೀಚಿನ ದಿನಗಳಲ್ಲಿ ವಂಚನೆ, ಅಪರಾಧ ಪ್ರಕರಣಗಳು ಮಿತಿಮೀರುತ್ತಿದ್ದು ಈ ಮಧ್ಯೆ ಪೋಕ್ಸೋ ಪ್ರಕರಣದ ಆರೋಪಿಯ ಜಾಮೀನಿಗೆ ಶ್ಯೂರಿಟಿ ನೀಡಲು ನಕಲಿ ದಾಖಲೆ ಸೃಷ್ಠಿದ ವಂಚಕರ ಜಾಲ ನ್ಯಾಯಾಧೀಶರ ಸಮಯ ಪ್ರಜ್ಞೆಯಿಂದ ಬಯಲಾಗಿದೆ.
ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ ನವೀದ್ ಪಾಶಾ ಎ೦ಬಾತನಿಗೆ ಜಾಮೀನು ಕೊಡಿಸಲು ನ್ಯಾಯಾಲಯದ ಜಾಮೀನು ಶ್ಯೂರಿಟಿಗೆ ನಕಲಿ ದಾಖಲೆಗಳನ್ನು ಸೃಷ್ಠಿಸಿ ಸಲ್ಲಿಸಿ ವಂಚಿಸಲು ಯತ್ನಿಸಿದ ಘಟನೆ ನಡೆದಿದೆ. ವಂಚಕರು ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (ಎಎಸ್ಐ) ಹೆಸರಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಫೋಕ್ಸೋ ಆರೋಪಿಯೊಬ್ಬನ ಜಾಮೀನಿಗೆ ಪ್ರಯತ್ನಿಸಿ ವಂಚನೆಗೆ ಯತ್ನಿಸಿದ್ದು ನ್ಯಾಯಾಧೀಶರ ಸಮಯ ಪ್ರಜ್ಞೆಯಿ೦ದಾಗಿ ಎಎಸ್ ಐ ಕಾನೂನು ಸ೦ಕಷ್ಟದಿ೦ದ ಪಾರಾಗಿ ನೆಮ್ಮದಿಯಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ಸಿದ್ಧಾಪುರ ಠಾಣೆಯಲ್ಲಿ ದಾಖಲಾಗಿದ್ದ ಫೋಕ್ಸೋ ಪ್ರಕರಣದ ಆರೋಪಿ ನವೀದ್ ಪಾಶಾ ಎ೦ಬಾತನ ಜಾಮೀನಿಗೆ ಎಸ್.ವಿ. ಗೌಡಯ್ಯ(32) ತಮ್ಮ ಜಮೀನು ಭದ್ರತೆಯಾಗಿ ನೀಡಿ ಶ್ಯೂರಿಟಿ ನೀಡಿದ್ದರು. ಈ ದಾಖಲೆಗಳನ್ನು ನಗರದ 3ನೇ ಫೋಕ್ಲೋ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ನ್ಯಾಯಾಲಯ ಶ್ಯೂರಿಟಿ ದಾಖಲೆಗಳ ನೈಜತೆಯನ್ನು ಪರಿಶೀಲಿಸಲು ಪೊಲೀಸರಿಗೆ ಸೂಚನೆ ನೀಡಿತ್ತು.
ಶ್ಯೂರಿಟಿ ನೀಡಿದ್ದ ಎಸ್.ವಿ. ಗೌಡಯ್ಯ ಹೆಸರಿನ ಆಧಾರ್ ಕಾರ್ಡ್ ವಿಳಾಸದ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಪೊಲೀಸರಿಗೆ ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದ್ದು, ಗೌಡಯ್ಯ ಅವರ ಆಧಾರ್ ಕಾರ್ಡ್ ಮತ್ತು ಜಮೀನು ದಾಖಲೆಯನ್ನ ಸೃಷ್ಟಿಸಿ ನಕಲಿ ಶ್ಯೂರಿಟಿ ನೀಡಿರುವುದು ಪೊಲೀಸರ ತನಿಖೆಯಿ೦ದ ಬೆಳಕಿಗೆ ಬಂದಿದೆ.
ಎಸ್.ವಿ. ಗೌಡಯ್ಯ 2015ರಲ್ಲಿ ನಿವೃತ್ತರಾಗಿದ್ದು, ತಮ್ಮ ಸ್ವ೦ತ ಊರು ಸೂಲುಕು೦ಟೆಯಲ್ಲಿ ಪತ್ನಿ ಜೊತೆಗೆ ನೆಲೆಸಿದ್ದಾರೆ. ಅವರ ಹೆಸರಿನಲ್ಲಿ 17 ಗು೦ಟೆ ಜಮೀನು ಹೊಂದಿದ್ದು. ಈ ದಾಖಲೆಗಳನ್ನು ಕಾವೇರಿ ತಂತ್ರಾಂಶದಲ್ಲಿ ಪಡೆದಿರುವ ವಂಚಕರು ಎಸ್.ವಿ. ಗೌಡಯ್ಯ ಎ೦ಬ ಹೆಸರಿನ ಆಧಾರ್ ಕಾರ್ಡ್ ಸೃಷ್ಟಿಸಿ ಬೇರೊಬ್ಬ ವ್ಯಕ್ತಿಯ ಫೋಟೋ ಹಾಕಿದ್ದರಂತೆ.
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ