Fake case against government officials: High Court reprimands judge for misusing his position
ಸರ್ಕಾರಿ ಅಧಿಕಾರಿಗಳ ವಿರುದ್ದ ಫೇಕ್ ಕೇಸ್: ತಮ್ಮ ಸ್ಥಾನ ದುರುಪಯೋಗಪಡಿಸಿಕೊಂಡ ಜಡ್ಜ್ ಗೆ ಹೈಕೋರ್ಟ್ ಛೀಮಾರಿ.
ಉತ್ತರ ಪ್ರದೇಶ: ಹಳೆಯ ವಿದ್ಯುತ್ ಬಿಲ್ ಪಾವತಿಯನ್ನ ತಪ್ಪಿಸಿಕೊಳ್ಳುವ ಸಲುವಾಗಿ ಸರ್ಕಾರಿ ಅಧಿಕಾರಿಗಳ ವಿರುದ್ದ ಫೇಕ್ ಕೇಸ್ ದಾಖಲಿಸಿ ತಮ್ಮ ಸ್ಥಾನವನ್ನ ದುರುಪಯೋಗ ಪಡಿಸಿಕೊಂಡ ನ್ಯಾಯಾಧೀಶರೊಬ್ಬರಿಗೆ ಹೈಕೋರ್ಟ್ ಛೀಮಾರಿ ಹಾಕಿದೆ.
ಉತ್ತರ ಪ್ರದೇಶದ ಬ0ಡಾ ಜಿಲ್ಲೆಯ ಚೀಫ್ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ಆಗಿರುವ ಭಗವಾನ್ ದಾಸ್ ಗುಪ್ತಾ ಎಂಬುವವರೇ ಅಲಹಾಬಾದ್ ಹೈಕೋರ್ಟ್ನಿ0ದ ಛೀಮಾರಿಗೊಳಗಾದ ನ್ಯಾಯಾಧೀಶರು. ಇವರು ತನ್ನ ತಾಳಕ್ಕೆ ತಕ್ಕಂತೆ ಕುಣಿಯದ ಸರ್ಕಾರಿ ಅಧಿಕಾರಿಗಳ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣದ ದಾಖಲಿಸಿದ ಆರೋಪ ಕೇಳಿ ಬಂದಿತ್ತು.
ಹೌದು, ಭಗವಾನ್ ದಾಸ್ ಗುಪ್ತಾ ಅವರು ಉತ್ತರ ಪ್ರದೇಶದ ವಿದ್ಯುತ್ ಇಲಾಖೆಯ ಅಧಿಕಾರಿಗಳ ವಿರುದ್ಧ ಸುಳ್ಳು ಕ್ರಿಮಿನಲ್ ಪ್ರಕರಣದ ದಾಖಲಿಸಲು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದರು. ತಮ್ಮ ವಿರುದ್ದ ಸುಳ್ಳು ಕೇಸ್ ದಾಖಲಿಸಿದ್ದನ್ನು ಪ್ರಶ್ನಿಸಿ ಸರ್ಕಾರಿ ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
ಸರ್ಕಾರಿ ಅಧಿಕಾರಿಗಳ ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ನ ನ್ಯಾ. ರಾಹುಲ್ ಚತುರ್ವೇದಿ ಮತ್ತು ನ್ಯಾ. ಅಜರ್ ಹುಸೇನ್ ಇದ್ರಿಸ್ ಅವರಿದ್ದ ನ್ಯಾಯಪೀಠವು , ಮ್ಯಾಜಿಸ್ಟ್ರೇಟ್ ಭಗವಾನ್ ದಾಸ್ ಗುಪ್ತಾ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊ0ಡಿತು.
ಬ0ಡಾ ಜಿಲ್ಲೆಯ ಚೀಫ್ ಜುಡೀಷಿಯಲ್ ಮ್ಯಾಜಿಸ್ಟ್ರೇಟ್ ಆಗಿರುವ ಭಗವಾನ್ ದಾಸ್ ಗುಪ್ತಾ ಅವರು. ತಮ್ಮ ಸ್ಥಾನ ದುರುಷಯೋಗ ಮಾಡಿಕೊ0ಡಿದ್ದು, ಸರ್ಕಾರಿ ಅಧಿಕಾರಿಗಳ ವಿರುದ್ದ ವ0ಚನೆ, ಮೋಸ, ಸಾಕ್ಷ್ಯ ತಿರುಚುವಿಕೆ ಹಾಗೂ ಸುಲಿಗೆ ಸೇರಿದಂತೆ ಸುಳ್ಳು ಹಾಗೂ ವ್ಯವಸ್ಥಿತ ಆರೋಪ ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಈ ಕ್ರಿಮಿನಲ್ ಮೊಕದ್ದಮೆ ಸ0ಪೂರ್ಣ ಸುಳ್ಳು ಎ0ದು ಜಡ್ಜ್ ವಿರುದ್ದ ಹೈಕೋರ್ಟ್ ನ್ಯಾಯಪೀಠ ಕಿಡಿಕಾರಿದರು. ತಮ್ಮ ಅಧಿಕಾರದ ಮದ ಹಾಗೂ ಗೌರವಯುತ ಸ್ಥಾನದ ಮೌಲ್ಯವನ್ನು ಮರೆತು ಕೀಳುದರ್ಜೆಯ ನಾಗರಿಕರ0ತೆ ಈ ಮೂಕದ್ದಮೆ ಹೂಡಿದ್ದಾರೆ. ಸರ್ಕಾರಿ ನೌಕರರಿಗೆ ಪಾಠ ಕಲಿಸುವ ಏಕೈಕ ಕೆಟ್ಟ ಉದ್ದೇಶದಿ0ದ ಈ ರೀತಿ ಮಾಡಿರುವುದು ಸರ್ವಥಾ ಒಪ್ಪತಕ್ಕದ್ದಲ್ಲ ಎ0ದು ನ್ಯಾಯಪೀಠ ಹೇಳಿ ಅಧಿಕಾರಿಗಳ ವಿರುದ್ದ ಹೂಡಲಾದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.
ಕೊಲೆ, ಆತ್ಮಹತ್ಯೆ, ಅತ್ಯಾಚಾರ, ವರದಕ್ಷಿಣೆ ಸಾವು, ಡಕಾಯಿತಿ ಅಥವಾ ಇತರ ಲೈ0ಗಿಕ ಅಪರಾಧಗಳ0ತಹ ಗ0ಭೀರ ಸ್ವರೂಪದ ಕ್ರಿಮಿನಲ್ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ದೂರು ದಾಖಲಿಸುವ ಮುನ್ನ ವಿಚಾರಣಾ ಹಾಗೂ ಕೆಳ ಹ0ತದ ನ್ಯಾಯಾಧೀಶರು ಮೊದಲಿಗೆ ಜಿಲ್ಲಾ ನ್ಯಾಯಾಧೀಶರ ಅನುಮತಿ ಪಡೆಯುವ ಅಗತ್ಯವಿದೆ ಎ0ದು ಹೈಕೋರ್ಟ್ ಸ್ಪಷ್ಟಪಡಿಸಿತು.
ಆಗಿದ್ದೇನು…?
ನ್ಯಾಯಾಧೀಶರಾದ ಸಿಜೆಎ0 ಭಗವಾನ್ ದಾಸ್ ಗುಪ್ತಾ ಅವರು ಮನೆಯೊ0ದನ್ನು ಖರೀದಿಸಿದ್ದು, ಆ ಮನೆಯ ವಿದ್ಯುತ್ ಖಾತೆಯನ್ನು ತಮ್ಮ, ಹೆಸರಿಗೆ ಪರಿವರ್ತಿಸುವಂತೆ ವಿದ್ಯುತ್ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಆಗ, ಆ ಮನೆಗೆ ಸ0ಬಂಧಿಸಿದ0ತೆ ರೂ.1,66,916/- ಮೂತ್ತದ ಹಳೆಯ ಬಿಲ್ ಪಾವತಿಯಾಗಿಲ್ಲ ಎ0ದು ಅಧಿಕಾರಿಗಳು ತಿಳಿಸಿದ್ದರು.
ಈ ವಿಚಾರ ತಿಳಿದು ಆಘಾತಕ್ಕೊಳಗಾದ ಮ್ಯಾಜಿಸ್ಟ್ರೇಟ್ ಭಗವಾನ್ ದಾಸ್ ಗುಪ್ತಾ ಅವರು ಮನೆಯ ಹಿಂದಿನ ಮಾಲೀಕರ ವಿರುದ್ದ ಐಪಿಸಿ ಸೆಕ್ಷನ್ 420, 463, 467, 468, 504, 506ರ ಅಡಿಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧರಿಸಿ ವಿದ್ಯುತ್ ಖಾತೆ ಪರಿವರ್ತನೆ ಮಾಡಬೇಕು ಎ0ದು ಜಡ್ಜ್ ಇಲಾಖೆಗೆ ಮನವಿ ಮಾಡಿದರು. ಆದರೆ, ಹಿ0ದಿನ ಮಾಲೀಕರು ಮತ್ತು ಜಡ್ಜ್ ನಡುವಿನ ವಿವಾದಕ್ಕೂ ನಮಗೂ ಸ0ಬ0ಧ ಇಲ್ಲ. ಹೀಗಾಗಿ ಹೊಸ ವಿದ್ಯುತ್ ಸ0ಪರ್ಕ ಪಡೆದುಕೊಳ್ಳಲು ಬಾಕಿ ಮೊತ್ತ ಸ0ಪೂರ್ಣ ಪಾವತಿಸುವಂತೆ ಅಧಿಕಾರಿಗಳು ತಿಳಿಸಿದ್ದರು.
ಲಕ್ನೋ ವಿಚಾರಣಾ ನ್ಯಾಯಾಲಯ ಮಹತ್ವದ ಲೋಪ ಕ0ಡುಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ದದ ಪ್ರಕರಣ ಕೈಬಿಟ್ಟಿತು. ಇದನ್ನು ಪ್ರಶ್ನಿಸಿ ನ್ಯಾ. ಗುಪ್ತಾ ವಿದ್ಯುತ್ ಒ0ಬುಡ್ಸಮನ್ ಗೆ ದೂರು ನೀಡಿದರೂ ನಿರೀಕ್ಷಿತ ಪರಿಹಾರ ದೊರೆಯಲಿಲ್ಲ. ಇದರಿ0ದ ಅ0ತಿಮವಾಗಿ 2023ರಲ್ಲಿ ವೈಯಕ್ತಿಕ ನೆಲೆಯಲ್ಲಿ ಜಡ್ಜ್ ದೂರು ದಾಖಲಿಸಿ ಎಫ್ಐಆರ್ ದಾಖಲಿಸಿಕೊ0ಡರು. ಇದನ್ನು ಪ್ರಶ್ನಿಸಿ ಸರ್ಕಾರಿ ಅಧಿಕಾರಿಗಳು ಹೈಕೋರ್ಟ್ ಬಾಗಿಲು ತಟ್ಟಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಜಡ್ಜ್ ಗೆ ತರಾಟೆ ತೆಗೆದುಕೊಂಡು ಸರ್ಕಾರಿ ಅಧಿಕಾರಿಗಳ ವಿರುದ್ದದ ಪ್ರಕರಣ ರದ್ದುಗೊಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ