Extension of compassionate employment to all family members: What are the new rules of the revised amendment..? Here is the information
ಅನುಕಂಪದ ನೌಕರಿ ಕುಟುಂಬ ಸದಸ್ಯರೆಲ್ಲರಿಗೂ ವಿಸ್ತರಣೆ: ಪರಿಷ್ಕೃತ ತಿದ್ದುಪಡಿಯ ಹೊಸ ನಿಯಮಗಳೇನು..? ಇಲ್ಲಿದೆ ಮಾಹಿತಿ…
ಬೆಂಗಳೂರು: ಕರ್ನಾಟಕ ರಾಜ್ಯ ನಾಗರಿಕ ಸೇವಾ (ಅನುಕ0ಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು -1996ಗೆ ತಿದ್ದುಪಡಿ ತರಲಾಗಿದ್ದು, ಪರಿಷ್ಕೃತ ತಿದ್ದುಪಡಿಯ ಪ್ರಕಾರ ಅನುಕ0ಪದ ಉದ್ಯೋಗವನ್ನು ಕುಟುಂಬದ ಸದಸ್ಯರೆಲ್ಲರಿಗೂ ವಿಸ್ತರಿಸಬಹುದಾಗಿದೆ.
ಹೌದು ಈ ಬಗ್ಗೆ ಪರಿಷ್ಕೃತ ತಿದ್ದುಪಡಿ ನಿಯಮಗಳನ್ನು ಹೊ0ದಿರುವ ಅಧಿಸೂಚನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಅಧೀನ ಕಾರ್ಯದರ್ಶಿ ಪ್ರಕಟಿಸಿದ್ದಾರೆ. ಅನುಕ0ಪದ ಉದ್ಯೋಗದ ಸೌಲಭ್ಯವನ್ನು ಕುಟು0ಬದ ಅವಲಂಬಿತರಿಗೆ ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರ 2021ರ ಫೆಬ್ರವರಿ 2ರಂದು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ಆಹ್ವಾನಿಸಿತ್ತು.
ಆಕ್ಷೇಪಣೆಗಳು ಮತ್ತು ತಕರಾರುಗಳನ್ನು ಪರಿಶೀಲಿಸಿದ ಸರ್ಕಾರ ಬಳಿಕ 2021ರ ಎಪ್ರಿಲ್ 9ರ0ದು ನಿಯಮಗಳಿಗೆ ತಿದ್ದುಪಡಿ ತ0ದು ಕರ್ನಾಟಕ ರಾಜ್ಯ ನಾಗರಿಕ ಸೇವಾ (ಅನುಕ0ಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು -2021ನ್ನು ಜಾರಿಗೆ ತಂದಿದೆ. ಈ ಹೊಸ ತಿದ್ದುಪಡಿಯ ಪ್ರಕಾರ, ಅನುಕ0ಪದ ನೌಕರಿಯನ್ನು ಮೃತನ ಪತ್ನಿ, ಮಗ ಅಥವಾ ಅವಿವಾಹಿತ ಮಗಳಿಗಷ್ಟೇ ಸೀಮಿತಗೊಳಿಸದೆ ಕುಟು0ಬ ಸದಸ್ಯರೆಲ್ಲರಿಗೂ ವಿಸ್ತರಿಸಲಾಗಿದೆ.
ತಿದ್ದುಪಡಿಯಲ್ಲಿನ ಹೊಸ ನಿಯಮಗಳೇನು ಇಲ್ಲಿದೆ ನೋಡಿ ಮಾಹಿತಿ…
ನಿಯಮ 2(ಬಿ) ಪ್ರಕಾರ ಕುಟು0ಬದ ಸದಸ್ಯರಿಗೆ ಅನುಕ0ಪದ ಉದ್ಯೋಗ. ಸರ್ಕಾರಿ ಉದ್ಯೋಗಿಯಾಗಿದ್ದ ಪುರುಷ ಸಾವನ್ನಪ್ಪಿದ್ದಲ್ಲಿ ಆತನ ಮೇಲೆ ಅವಲಂಬಿತರಾಗಿದ್ದ ಪತ್ನಿ, ಮಗ ಮತ್ತು ಮಗಳಿಗೆ ಅನುಕ0ಪದ ಉದ್ಯೋಗ ಸಿಗಲಿದೆ. ಇದರಲ್ಲಿ ಮಗಳು ಅವಿವಾಹಿತೆ, ವಿವಾಹಿತೆ, ವಿಚ್ಛೇದಿತೆ ಅಥವಾ ವಿಧವೆ ಎಂಬುದು ಹೊಸ ನಿಯಮಗಳಲ್ಲಿ ಪರಿಗಣನೆಯಾಗುವುದಿಲ್ಲ.
ಒಂದು ವೇಳೆ ಮೃತನ ಪತ್ನಿ ನೇಮಕಾತಿಗೆ ಅರ್ಹಳಿಲ್ಲದಿದ್ದರೆ ಅಥವಾ ಆಕೆ ಇಚ್ಚಿಸದಿದ್ದರೆ ಆಕೆ ಸೂಚಿಸುವ ಮಗ ಅಥವಾ ಮಗಳು ಉದ್ಯೋಗಕ್ಕೆ ಅರ್ಹತೆ ಪಡೆಯುತ್ತಾರೆ.
ಒಂದು ವೇಳೆ ಪತ್ನಿ ಮೃತ ನೌಕರನಿಗಿಂತ ಮೊದಲೇ ಮೃತಪಟ್ಟಿದ್ದರೆ ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ಆದ್ಯತೆ ನೀಡಲಾಗುತ್ತದೆ. ಸರ್ಕಾರಿ ಉದ್ಯೋಗಿಯಾಗಿದ್ದ ಮಹಿಳೆ ಸಾವನ್ನಪ್ಪಿದ್ದಲ್ಲಿ ಆಕೆಯ ಮೇಲೆ ಅವಲಂಬಿತರಾಗಿದ್ದ ಪತಿ, ಮಗ ಮತ್ತು ಮಗಳಿಗೆ ಅನುಕ0ಪದ ಆಧಾರದಲ್ಲಿ ಉದ್ಯೋಗ ಪಡೆಯುವ ಅರ್ಹತೆ ಪಡೆಯುತ್ತಾರೆ. ಮೊದಲಿಗೆ ಮಕ್ಕಳು ಉದ್ಯೋಗಕ್ಕೆ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಈ ಪೈಕಿ ಯಾವ ಮಕ್ಕಳಿಗೆ ಉದ್ಯೋಗ ಎ0ಬುದನ್ನು ವಿಧುರ ಪತಿ ನಿರ್ಧರಿಸಲಿದ್ದಾರೆ.
ಒಂದು ವೇಳೆ, ಮೃತರ ಮಕ್ಕಳು ಅರ್ಹರಿಲ್ಲದೆ ಇದ್ದರೆ ಅಥವಾ ನೇಮಕಾತಿಗೆ ಇಚ್ಚಿಸದೇ ಇದ್ದರೆ ವಿದುರ ಪತಿ ನೌಕರಿಗೆ ಅರ್ಜಿ ಹಾಕಲು ಅರ್ಹತೆ ಪಡೆಯುತ್ತಾರೆ. ಇನ್ನು, ಮೃತ ಮಹಿಳಾ ಉದ್ಯೋಗಿಗಿ0ತ ಮೊದಲೇ ಪತಿ ಮೃತಪಟ್ಟಿದ್ದರೆ ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ಆದ್ಯತೆ ನೀಡಲಾಗುತ್ತದೆ.
ಸರ್ಕಾರಿ ಉದ್ಯೋಗಿಯಾಗಿದ್ದ ಮಹಿಳೆ ಸಾವನ್ನಪ್ಪಿದ್ದಲ್ಲಿ ಆಕೆ ಅವಿವಾಹಿತಳಾಗಿದ್ದರೆ, ಆಕೆಯ ಮೇಲೆ ಅವಲಂಬಿತರಾಗಿದ್ದ ಸಹೋದರಿ ಅಥವಾ ಸಹೋದರ ಉದ್ಯೋಗ ಕೋರಬಹುದಾಗಿದೆ. ಯಾವ ಸಹೋದರ/ಸಹೋದರಿಗೆ ಉದ್ಯೋಗ ಎ0ಬುದನ್ನು ಮೃತ ನೌಕರನ ತಂದೆ ತಾಯಿ ಆಯ್ಕೆ ಮಾಡಬಹುದಾಗಿದೆ. ಒ0ದು ವೇಳ, ಆಕೆಯ ತಂದೆ, ತಾಯಿ ನಡುವೆ ಭಿನ್ನಾಭಿಪ್ರಾಯ ಉಂಟಾದರೆ, ತಾಯಿಯ ನಿರ್ಧಾರವನ್ನು ಪರಿಗಣಿಸುವುದಾಗಿದೆ.
ಒ0ದು ವೇಳೆ, ಮೃತ ಮಹಿಳಾ ಉದ್ಯೋಗಿಗಿ0ತ ಮೊದಲೇ ಅವರ ತಂದೆ/ತಾಯಿ ಮೃತಪಟ್ಟಿದ್ದರೆ ಸಹೋದರ/ಸಹೋದರಿಯರಿಗೆ ತಮ್ಮ ವಯಸ್ಸಿಗೆ ಅನುಗುಣವಾಗಿ ಆದ್ಯತೆ ನೀಡಲಾಗುತ್ತದೆ.
ಸರ್ಕಾರಿ ಉದ್ಯೋಗಿಯಾಗಿದ್ದ ಪುರುಷ ಸಾವನ್ನಪ್ಪಿದ್ದಲ್ಲಿ ಆತ ಅವಿವಾಹಿತನಾಗಿದ್ದರೆ, ಆತನ ಮೇಲೆ ಅವಲಂಬಿತರಾಗಿದ್ದ ಸಹೋದರಿ ಅಥವಾ ಸಹೋದರ ಉದ್ಯೋಗ ಕೋರಬಹುದಾಗಿದೆ.
ಯಾವ ಸಹೋದರ/ಸಹೋದರಿಗೆ ಉದ್ಯೋಗ ಎ0ಬುದನ್ನು ಮೃತ ನೌಕರನ ತಂದೆ ತಾಯಿ ಆಯ್ಕೆ ಮಾಡಬಹುದಾಗಿದೆ. ಒ0ದು ವೇಳೆ, ಈತನ ತಂದೆ, ತಾಯಿ ನಡುವೆ ಭಿನ್ನಾಭಿಪ್ರಾಯ ಉಂಟಾದರೆ, ತಾಯಿಯ ನಿರ್ಧಾರವನ್ನು ಪರಿಗಣಿಸುವುದಾಗಿದೆ.
ಒಂದು ವೇಳೆ, ಮೃತ ಪುರುಷ ಉದ್ಯೋಗಿಗಿ0ತ ಮೂದಲೇ ಅವರ ತಂದೆ/ತಾಯಿ ಮೃತಪಟ್ಟಿದ್ದರೆ. ಸಹೋದರ/ಸಹೋದರಿಯರಿಗೆ ತಮ್ಮ ವಯಸ್ಸಿಗೆ ಅನುಗುಣವಾಗಿ ಆದ್ಯತೆ ನೀಡಲಾಗುತ್ತದೆ.
ಅನುಕ0ಪದ ನೌಕರಿಗೆ ಅರ್ಜಿ ಸಲ್ಲಿಸುವ ವೇಳೆ ಅರ್ಜಿದಾರರ ವಯೋಮಿತಿ 55 ದಾಟಿರಬಾರದು. ಸರ್ಕಾರಿ ನೌಕರರು ಮೃತಪಟ್ಟ ಒಂದು ವರ್ಷದ ಒಳಗೆ ಅವಲಂಬಿತರು ಅನುಕ0ಪದ ಉದ್ಯೋಗ ಕೋರಿ ಮೃತ ವ್ಯಕ್ತಿ ಕೆಲಸ ಮಾಡುತ್ತಿದ್ದ ಇಲಾಖೆಯ ಮುಖ್ಯಸ್ಥರಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.
ಒಂದು ವೇಳೆ, ಅನುಕ0ಪದ ಉದ್ಯೋಗಕ್ಕೆ ಅರ್ಹರಿದ್ದವರು ಅಪ್ರಾಪ್ತರಾಗಿದ್ದಲ್ಲಿ ನೌಕರ ಮೃತಪಟ್ಟ 2 ವರ್ಷಗಳಲ್ಲಿ 18 ವರ್ಷ ವಯಸ್ಸು ಪೂರೈಸಬೇಕು. ನಂತರದ ಎರಡು ವರ್ಷಗಳ ಒಳಗೆ ಅರ್ಜಿ ಸಲ್ಲಿಸಬೇಕು ಎಂಬ ನಿಯಮಗಳನ್ನ ಜಾರಿಗೆ ತರಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ