23/12/2024

Law Guide Kannada

Online Guide

ED officials interrogated the accused 64-year-old businessman Ram Israni throughout the night and arrested him early in the morning. Ram Israni was arrested last year in connection with a bank fraud case.

ರಾತ್ರಿಯಿಡಿ ವೃದ್ಧ ಉದ್ಯಮಿಗೆ ಫುಲ್ ಡ್ರಿಲ್: ‘ಇಡಿ’ ನಡೆಗೆ ಸುಪ್ರೀಂಕೋರ್ಟ್ ತೀವ್ರ ತರಾಟೆ.

ನವದೆಹಲಿ: ವಯೋವೃದ್ಧ ಉದ್ಯಮಿಯೊಬ್ಬರನ್ನ ಮು0ಜಾನೆ 3 ಗಂಟೆಯವರೆಗೂ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ದ ಗರಂ ಆದ ಸುಪ್ರೀಂಕೋರ್ಟ್ ತೀವ್ರ ತರಾಟೆ ತೆಗೆದುಕೊಂಡಿದೆ.

ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಆರೋಪಿ 64 ವರ್ಷದ ಉದ್ಯಮಿ ರಾಮ್ ಇಸ್ರಾನಿ ಅವರನ್ನ ರಾತ್ರಿ ಇಡೀ ವಿಚಾರಣೆ ನಡೆಸಿ ಬೆಳಿಗ್ಗಿನ ಜಾವ ಬಂಧಿಸಲಾಗಿತ್ತು. ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸ0ಬಂಧಿಸಿದ0ತೆ ಕಳೆದ ವರ್ಷ ರಾಮ್ ಇಸ್ರಾನಿ ಅವರನ್ನು ಬಂಧಿಸಲಾಗಿತ್ತು.

ಉದ್ಯಮಿ ರಾಮ್ ಇಸ್ರಾನಿ ಅವರು ತಮ್ಮ ಬ0ಧನ ಪುಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಬಾ0ಬೆ ಹೈಕೋರ್ಟ್ ತಿರಸ್ಕರಿಸಿತ್ತು. ಈ ಆದೇಶ ಪ್ರಶ್ನಿಸಿ ಪರಿಹಾರಕ್ಕಾಗಿ ಉದ್ಯಮಿ ಇಸ್ರಾನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಉದ್ಯಮಿ ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ನ ನ್ಯಾ. ಪ್ರಶಾ0ತ್ ಕುಮಾರ್ ಮಿಶ್ರಾ ಮತ್ತು ನ್ಯಾ. ಕೆ.ವಿ. ವಿಶ್ವನಾಥನ್ ಅವರಿದ್ದ ನ್ಯಾಯಪೀಠವು ಇಡಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದೆ.

ಮು0ಜಾನೆವರೆಗೂ ವಿಚಾರಣೆ ಮಾಡಿದ ಕ್ರಮ ಸರಿಯಲ್ಲ. ನಾವು ಆರೋಪಿಯ ವಿರುದ್ದ ಮಾಡಲಾದ ಆರೋಪಗಳ ವಿಶ್ವಾಸಾರ್ಹತೆ ಮತ್ತು ವಿಚಾರಣಾರ್ಹತೆ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ವಿಸ್ತೃತವಾದ ಕಾಳಜಿಯೊಂದಿಗೆ ಈ ವಿಚಾರ ಪ್ರಸ್ತಾಪಿಸುತ್ತಿದ್ದೇವೆ ಎ0ದು ಇಡಿ ಅಧಿಕಾರಿಗಳಿಗೆ ನ್ಯಾಯಪೀಠ ಪಾಠ ಮಾಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.