ಮಾವನ ಆಸ್ತಿಯಲ್ಲಿ ಅಳಿಯನಿಗೂ ಹಕ್ಕುಂಟೆ…? ಹೈಕೊರ್ಟ್ ಕೊಟ್ಟ ತೀರ್ಪೇನು?
ನವದೆಹಲಿ : ಮಾವನ ಆಸ್ತಿಯಲ್ಲಿ ಅಳಿಯನೂ ಹಕ್ಕು ಸಾಧಿಸಬಹುದೇ? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಕೇರಳ ಹೈಕೊರ್ಟ್ ಮಹತ್ವದ ತೀರ್ಪೊಂದನ್ನ ನೀಡಿದೆ.
ಮಾವನ ಆಸ್ತಿಯ ಮೇಲಿನ ಹಕ್ಕನ್ನು ಕಸಿದುಕೊಂಡಿರುವ ಕೇರಳದ ಪಯ್ಯನೂರು ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಡೇವಿಸ್ ರಾಫೆಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಆಸ್ತಿ ಸೃಷ್ಟಿಸಲು ಕೊಡುಗೆ ನೀಡಿದರೂ ಮಾವನ ಆಸ್ತಿಯ ಮೇಲೆ ಅಳಿಯನಿಗೆ ಯಾವುದೇ ಕಾನೂನು ಹಕ್ಕು ಇಲ್ಲ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದೆ.
ಡೇವಿಸ್ ತನ್ನ ಹೆಂಡತಿಯ ತಂದೆಯ ಆಸ್ತಿಗೆ ಕೊಡುಗೆ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಆದ್ದರಿಂದ ಅವರು ಅದಕ್ಕೆ ಅರ್ಹನಾಗಿರುತ್ತಾರೆ. ಆದರೆ ಮಾವನ ಆಸ್ತಿಯಲ್ಲಿ ಅಳಿಯನಿಗೆ ಯಾವುದೇ ಹಕ್ಕಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಹಾಗೆಯೇ ಆಸ್ತಿ ವರ್ಗಾವಣೆಯನ್ನು ಬಲವಂತದಿಂದ ಅಥವಾ ವಂಚನೆಯಿಂದ ಮಾಡಿದ್ದರೆ ಅದನ್ನು ಪ್ರಶ್ನಿಸಬಹುದು. ಆದರೆ ಅಳಿಯ ವಿಲ್ ಅಥವಾ ಆಸ್ತಿಯ ಕಾನೂನು ವರ್ಗಾವಣೆಯ ಅಡಿಯಲ್ಲಿ ಮಾತ್ರ ಆಸ್ತಿಯನ್ನು ಪಡೆಯಬಹುದು ಎಂದು ಹೈಕೋರ್ಟ್ ತಿಳಿಸಿದೆ.
ಇನ್ನು ಅತ್ತೆಯ ಆಸ್ತಿಯ ಮೇಲೆ ಮಗಳಿಗೂ ನೇರ ಹಕ್ಕು ಇಲ್ಲ ಎಂದಿರುವ ಹೈಕೋರ್ಟ್, ಗಂಡ ಸತ್ತರೆ ಗಂಡನಷ್ಟೇ ಪಾಲು ಹೆಂಡತಿಗೂ ಸಿಗುತ್ತದೆ. ಅತ್ತೆಯ ಮರಣದ ನಂತರ, ಅವರು ತಮ್ಮ ಆಸ್ತಿಯನ್ನು ಬೇರೆಯವರಿಗೆ ಬಿಟ್ಟುಕೊಡದಿದ್ದರೆ, ಆ ಆಸ್ತಿಗೆ ಹೆಂಡತಿ ಉತ್ತರಾಧಿಕಾರಿಯಾಗಬಹುದು. ಆದರೆ, ಆಸ್ತಿಯನ್ನು ಬೇರೆಯವರಿಗೆ ಬಿಟ್ಟುಕೊಟ್ಟಿದ್ದರೆ, ಅದರ ಮೇಲೆ ಹೆಂಡತಿಗೆ ಯಾವುದೇ ಹಕ್ಕಿಲ್ಲ ಎಂದು ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ