23/12/2024

Law Guide Kannada

Online Guide

ಹೈಕೋರ್ಟ್ ನ್ಯಾಯಾಧೀಶರಾಗಿದ್ದ ಮೈಕೆಲ್ ಸಲ್ಡಾನ್ಹಾ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ರದ್

ಮುಂಬೈ ಹಾಗೂ ಕರ್ನಾಟಕದ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ನ್ಯಾಯಮೂರ್ತಿ ಎಂ ಎಫ್ ಸಲ್ಡಾನ್ಹಾ ಅವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ನ್ಯಾಯಮೂರ್ತಿ ಸಲ್ಡಾನ್ಹಾ ಅವರು ಬೇಷರತ್ ಕ್ಷಮೆ ಯಾಚಿಸಿದ ನಂತರ ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರು ಪ್ರಕರಣವನ್ನು ರದ್ದುಗೊಳಿಸಿದರು.

ಬೆಂಗಳೂರಿನ ವಕೀಲ ಎಂ.ಪಿ.ನೊರೊನ್ಹಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಿಸಲಾಗಿತ್ತು. ಸಲ್ಡಾನ್ಹಾ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 499 (ಮಾನನಷ್ಟ) ಮತ್ತು 500 (ಮಾನನಷ್ಟಕ್ಕೆ ಶಿಕ್ಷೆ) ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳು). ಸೆಕ್ಷನ್ 66 (ಕಂಪ್ಯೂಟರ್ ಸಂಬಂಧಿತ ಅಪರಾಧಗಳು) ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು.

ಪ್ರಕರಣದ ವಿವರ

ಮಂಗಳೂರಿನ ಸೇಂಟ್ ಅಲೋಶಿಯಸ್ ಕಾಲೇಜಿನ ಜೆಸ್ಯೂಟ್ ಪಾದ್ರಿಗಳಿಂದ ಬ್ಯಾಪಿಸ್ಟ್ ಡಿಸೋಜಾ ಅವರ ಮನೆ ಕೆಡವಿದ ಆರೋಪವಿತ್ತು. ಈ ಸಂಬಂಧ ಬ್ಯಾಪ್ಟಿಸ್ಟ್ ಡಿಸೋಜಾ ಅವರಿಗೆ ಆಗಿರುವ ಅನ್ಯಾಯದ ಕುರಿತು ನ್ಯಾಯಮೂರ್ತಿ ಸಲ್ಡಾನ್ಹಾ ಅವರು ಪತ್ರಿಕಾಗೋಷ್ಠಿ ನಡೆಸಿದ್ದರು ಈ ಹಿನ್ನೆಲೆ ಈ ಪ್ರಕರಣ ದಾಖಲಿಸಲಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ಸಲ್ಡಾನ್ಹಾ ಅವರು ಪೊಲೀಸರ ನಿರ್ಲಕ್ಷ್ಯದ ಬಗ್ಗೆ  ಆರೋಪಿಸಿದ್ದರು. ಈ ಪತ್ರಿಕಾಗೋಷ್ಠಿಯಿಂದ ನೊರೊನ್ಹಾ ಅವರ ಪ್ರತಿಷ್ಠೆಗೆ ಹಾನಿಯಾಗಿದೆ ಅಂತಾ ದೂರಿನಲ್ಲಿ ಆರೋಪಿಸಲಾಗಿತ್ತು. ಆರಂಭದಲ್ಲಿ ಖಾಸಗಿ ದೂರನ್ನು ದಾಖಲಿಸಿ ತನಿಖೆಗಾಗಿ ಪೊಲೀಸರಿಗೆ ಒಪ್ಪಿಸಲಾಗಿತ್ತು. ಆದರೆ ತನಿಖೆ ವೇಳೆ ಪ್ರಕರಣದ ಸಂಬಂಧ ಯಾವುದೇ ಮಹತ್ವದ ಸಾಕ್ಷ್ಯಾಧಾರಗಳು ಸಿಗದ ಕಾರಣ ಪೊಲೀಸರು ಈ ಸಂಬಂಧ ಮುಕ್ತಾಯದ ವರದಿಯನ್ನು ಸಲ್ಲಿಸಿದ್ದರು. ನಂತರ ದೂರುದಾರ ನೊರೊನ್ಹಾ ಅವರು ಪೊಲೀದರ ವರದಿಯನ್ನು ಪ್ರಶ್ನಿಸಿ ಸಂಬಂಧಿತ ದಾಖಲೆಗಳನ್ನು ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿದರು. ಈ ಮಧ್ಯೆ ನ್ಯಾಯಮೂರ್ತಿ ಸಲ್ಡಾನ್ಹಾ ಮತ್ತು ಇತರರ ವಿರುದ್ದ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಢಾನ ಹೈಕೋರ್ಟ್ ಮೊರೆ ಹೋಗಿದ್ದರು. 

ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದ ಸಲ್ಡಾನ್ಹಾ ಪರ ವಾದ ಮಂಡಿಸಿದ ವಕೀಲ ದಿಲ್ ರಾಜ್ ರೋಹಿತ್ ಸಿಕ್ವೇರಾ ಅವರು, ಸಮನ್ಸ್ ಜಾರಿ ಮಾಡಿರುವುದು ಕಾನೂನಿನ ಪ್ರಕಾರವಿಲ್ಲ. ಜೊತೆಗೆ ಅಪರಾಧಗಳ ವಿಚಾರಣೆಗೆ ಅಗತ್ಯವಾದ ಅಂಶಗಳು ಇಲ್ಲದಿರುವುದರಿಂದ ಮತ್ತು ಆರೋಪಗಳನ್ನು  ಅನುಮಾನದಿಂದ ಸಾಬೀತುಪಡಿಸುವ ಸಾಧ್ಯತೆಯಿಲ್ಲ ಎಂದು ವಾದಿಸಿದರು. ಜೊತೆಗೆ ಇದರಲ್ಲಿ ನೊರೊನ್ಹಾ ಅವರ ಪ್ರತಿಷ್ಠೆಗೆ ಮಾನಹಾನಿ ಅಥವಾ ಹಾನಿ ಮಾಡುವ ಉದ್ದೇಶವಿಲ್ಲ ಎಂದು ಅವರು ವಾದಿಸಿದರು. ಪತ್ರಿಕಾಗೋಷ್ಠಿಯು ಕೇವಲ ಪೋಲೀಸರ ಅಕ್ರಮಗಳನ್ನು ಎತ್ತಿ ತೋರಿಸುವುದು ಮತ್ತು ಜೆಸ್ಯೂಟ್ ಪಾದ್ರಿಗಳ ಜೊತೆಗಿನ ಅವರ ಆಪಾದಿತ ಕುತಂತ್ರವನ್ನು ಎತ್ತಿ ಹಿಡಿಯುವ ಉದ್ದೇಶ ಇತ್ತೇ ಹೊರತು ನೊರೊನ್ಹಾ ಅವರನ್ನು ಮಾನಹಾನಿ ಮಾಡುವುದಲ್ಲ ಎಂದು ವಾದಿಸಿದರು. ಇದರ ಜೊತೆಗೆ ನ್ಯಾಯಮೂರ್ತಿ ಸಲ್ಡಾನ್ಹಾ ಅವರು ಬೇಷರತ್ ಕ್ಷಮೆಯಾಚಿಸುವ ಮೂಲಕ ಅಫಿಡವಿಟ್ ಸಲ್ಲಿಸಿದರು ಮತ್ತು ಅವರು ಈ ವಿಷಯವನ್ನು ಮುಂದುವರಿಸುವುದಿಲ್ಲ ಎಂದು ಹೇಳಿದ್ದರು.

ನ್ಯಾಯಾಲಯವು ನ್ಯಾಯಮೂರ್ತಿ ಸಲ್ಡಾನ್ಹಾ ಅವರ ಅಫಿಡವಿಟ್ ಅನ್ನು ಅಂಗೀಕರಿಸಿತು ಮತ್ತು ಅವರ ವಿರುದ್ಧದ ವಿಚಾರಣೆಯನ್ನು ರದ್ದುಗೊಳಿಸಿತು. ಸಹ ಆರೋಪಿ ಪಿಬಿ ಡಿಸಾ ಅವರು ಈ ವಿಷಯದಲ್ಲಿ ಕ್ಷಮೆಯಾಚನೆಯನ್ನು ಸಲ್ಲಿಸಿದ್ದರಿಂದ ನ್ಯಾಯಾಲಯವು ಅದೇ ಪ್ರಕರಣದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಿತು. ಆದರೆ, ಅದೇ ಪ್ರಕರಣದಲ್ಲಿ ಇಬ್ಬರು ಆರೋಪಿಗಳು ಅಂತಹ ಯಾವುದೇ ಕ್ಷಮೆಯಾಚನೆಯನ್ನು ಸಲ್ಲಿಸದ ಕಾರಣ ಅವರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ನ್ಯಾಯಾಲಯ ನಿರಾಕರಿಸಿತು. ಅರ್ಜಿದಾರರ ಪರ ವಕೀಲ ದಿಲ್ರಾಜ್ ರೋಹಿತ್ ಸಿಕ್ವೇರಿಯಾ ವಾದ ಮಂಡಿಸಿದರೆ, ರಾಜ್ಯದ ಪರ ಹೈಕೋರ್ಟ್ ಸರ್ಕಾರಿ ಪ್ಲೀಡರ್ ರಶ್ಮಿ ಪಟೇಲ್ ಹಾಗೂ ಖಾಸಗಿ ಪ್ರತಿವಾದಿ ಪರ ವಕೀಲ ಸಿರಿಲ್ ಪ್ರಸಾದ್ ಪೈಸ್ ವಾದ ಮಂಡಿಸಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.