ಮನುಷ್ಯರಿಂದ ಮಲಗುಂಡಿ ಸ್ವಚ್ಛತೆ – ಪ್ರಕರಣ ದಾಖಲಿಸಲು ಹೈಕೋರ್ಟ್ ಸೂಚನೆ
ಬೆಂಗಳೂರು : ಮಲಗುಂಡಿಗಳ ಸ್ವಚ್ಛತೆಗೆ ಯಂತ್ರದ ಬದಲು ಮನುಷ್ಯರನ್ನು ಬಳಸುತ್ತಿರುವುದಕ್ಕೆ ರಾಜ್ಯ ಹೈಕೋರ್ಟ್ ಆತಂಕ ವ್ಯಕ್ತಪಡಿಸಿ ಇದು ಮಾನವೀಯತೆಗೆ ನಾಚಿಕೆಯಾಗುವ ಸಂಗತಿಯಲ್ಲವೇ? ಎಂದು ಪ್ರಶ್ನಿಸಿದೆ.
ಮಲ ಹೊರುವ ಪದ್ಥತಿ ಜೀವಂತವಾಗಿರುವ ಕುರಿತು ಮಾಧ್ಯಮದಲ್ಲಿ ಬಂದ ವರದಿ ಆಧರಿಸಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರನ್ನು ಒಳಗೊಂಡ ನ್ಯಾಯಪೀಠವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲು ಬುಧವಾರ ಸೂಚಿಸಿದರು.
ಘಟನೆ ಕುರಿತು ನ್ಯಾಯಾಲಯಕ್ಕೆ ಸಲಹೆ ನೀಡಲು ಅಮಿಕಸ್ ಕ್ಯೂರಿಯಾಗಿ ವಕೀಲ ಶ್ರೀಧರ್ ಪ್ರಭು ಅವರನ್ನು ನೇಮಿಸಿತು. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಿದ್ದಪಡಿಸಿ ಶುಕ್ರವಾರದ ಒಳಗಾಗಿ ಸಲ್ಲಿಸಬೇಕು. ಅರ್ಜಿ ವಿಚಾರಣೆಗೆ ಸೋಮವಾರಕ್ಕೆ ಪಟ್ಟಿ ಮಾಡಬೇಕೆಂದು ನ್ಯಾಯಾಲಯ ಸೂಚಿಸಿತು.
ನಾವು ಚಂದ್ರಯಾನದ ಮೂಲಕ ಸಾಧನೆ ಮಾಡಿದ್ದೇವೆ. ಮನುಷ್ಯರನ್ನು ಸಹೋದರಂತೆ ಕಾಣುತ್ತಿಲ್ಲ. ಹಾಗಾದರೆ ತಂತ್ರಜ್ಞಾನದ ಅಭಿವೃದ್ಧಿ ವ್ಯಥ ವಲ್ಲವೇ? ಇದು ತಂತ್ರಜ್ಞಾನದ ಸಮಸ್ಯೆ ಅಲ್ಲ, ಮನಸ್ಥಿತಿ ಬದಲಾಗಬೇಕಿದೆ ಎಂದು ನ್ಯಾಯಾಲಯ ಹೇಳಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ