23/12/2024

Law Guide Kannada

Online Guide

ಕೋರ್ಟ್ ಫೀ ಪಾವತಿ ಮಾಡಿಲ್ಲ ಅಂತಾ ದಾವೆ ವಜಾಗೊಳಿಸಬಹುದೇ…? ಹೈಕೋರ್ಟ್ ಮಹತ್ವದ ತೀರ್ಪೇನು..?

ಬೆಂಗಳೂರು: ದಾವೆ ಸಲ್ಲಿಸುವ ವೇಳೆ ಕೋರ್ಟ್ ಫೀ(ನ್ಯಾಯಾಲಯ ಶುಲ್ಕ) ಪಾವತಿ ಮಾಡಿಲ್ಲ ಎಂಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯವು ಆ ದಾವೆಯನ್ನು ವಜಾ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ದಾವೆಯನ್ನು ಸಲ್ಲಿಸುವ ವೇಳೆ ಕೋರ್ಟ್ ಫೀ ಪಾವತಿ ಆಗದೇ ಇದ್ದರೆ, ಈ ಬಗ್ಗೆ ವಾದಿಯವರಿಗೆ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಬೇಕು ಎಂದು ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಹಾಗೆಯೇ ಒಂದು ವೇಳೆ, ಕೋರ್ಟ್ ನಿರ್ದೇಶನವನ್ನು ವಾದಿ ಪಾಲಿಸಲು ತಪ್ಪಿದ್ದರೆ ವಾದಪತ್ರವನ್ನು ಸಿವಿಲ್‌ ಪ್ರಕ್ರಿಯಾ ಸಂಹಿತೆಯ ಆದೇಶ ಗಿII ನಿಯಮ 11(b) ಅಡಿ ತಿರಸ್ಕರಿಸಬಹುದು ಎಂದು ನ್ಯಾಯಪೀಠ ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.