ಪತಿ ಪ್ರೇಯಸಿಯ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಬಹುದೇ…?
ನವದೆಹಲಿ: ಪತ್ನಿಯು ಪತಿಯ ಗೆಳತಿ ಅಥವಾ ಪ್ರೇಯಸಿ ವಿರುದ್ದ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಬಹುದೇ? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪತಿಯ ಗೆಳತಿ ಆಗಿರುವುದಕ್ಕೆ ಅಥವಾ ಆತನ ಜೊತೆ ಪ್ರಣಯ ಸಂಬಂಧ ಹೊಂದಿರುವ ಆರೋಪದ ಮೇಲೆ ಆಕೆಯ ವಿರುದ್ಧ ಆತನ ಪತ್ನಿಯು ಭಾರತೀಯ ದಂಡ ಸಂಹಿತೆ ಐಪಿಸಿ ಸೆಕ್ಷನ್ 498 ಎ ಅಡಿ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿ ಕಾನೂನು ಕ್ರಮಕ್ಕೆ ಮುಂದಾಗಲು ಅವಕಾಶ ಇಲ್ಲ. ಎಂದು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದೆ.
ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ಕೆವಿ ವಿಶ್ವನಾಥನ್ ಅವರು ಇದ್ದ ವಿಭಾಗಿಯ ಪೀಠ ಈ ತೀರ್ಪು ನೀಡಿದೆ. ವಿವಾಹಿತ ಪುರುಷನೊಂದಿಗೆ ಪ್ರಣಯದಲ್ಲಿ ತೊಡಗಿರುವ ಗೆಳತಿ ಅಥವಾ ಮಹಿಳೆಯನ್ನು ಭಾರತೀಯ ದಂಡ ಸಂಹಿತೆಯ (IPಅ) ಸೆಕ್ಷನ್ 498ಂ ಅಡಿಯಲ್ಲಿ “ಸಂಬಂಧಿ” ಎಂದು ವರ್ಗೀಕರಿಸಲಾಗುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಐಪಿಸಿ ಸೆಕ್ಷನ್ 498 ಎ, 504 ಮತ್ತು 109 ಹಾಗೂ ವರದಕ್ಷಿಣೆ ನಿಷೇಧ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅಡಿಯಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಹಾಗೂ ನಂತರದ ದೋಷಾರೋಪ ಪಟ್ಟಿಯನ್ನು ಪ್ರಶ್ನಿಸಿ, ಮಹಿಳೆಯೊಬ್ಬರು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು. 2021ರ ಏಪ್ರಿಲ್ 12ರಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವೊಂದನ್ನು ವಿಭಾಗಿಯ ಪೀಠ ಈ ಮೂಲಕ ರದ್ದುಪಡಿಸಿದೆ.
ವರದಕ್ಷಿಣೆ ಕಿರುಕುಳದ ಆರೋಪದ ಅಡಿಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದಾದರೆ ಪತಿಯ ಜೊತೆ ಆ ವ್ಯಕ್ತಿಯು ರಕ್ತ ಸಂಬಂಧ ವೈವಾಹಿಕ ಸಂಬಂಧ ಅಥವಾ ದತ್ತು ಮೂಲಕ ಬರುವ ಸಂಬಂಧ ಹೊಂದಿರಬೇಕು ಎಂದು ನ್ಯಾಯಪೀಠ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ