23/12/2024

Law Guide Kannada

Online Guide

ಅಮಾನ್ಯ ವಿವಾಹ, ಅಕ್ರಮ ದಾಂಪತ್ಯದಿಂದ ಜನಿಸಿದ ಮಗುವಿನ ಜನನ ನೋಂದಣಿ ನಿರಾಕರಿಸುವಂತಿಲ್ಲ- ಹೈಕೋರ್ಟ್

ಹಿಮಾಚಲ ಪ್ರದೇಶ: ಅಸಿಂಧು, ಅಮಾನ್ಯ ವಿವಾಹ, ಅಕ್ರಮ ದಾಂಪತ್ಯದಿಂದ ಜನಿಸಿದ ಮಗುವಿನ ಜನನ ನೋಂದಣಿ ನಿರಾಕರಿಸುವಂತಿಲ್ಲ ಎಂದು ಹಿಮಾಚಲ ಪ್ರದೇಶದ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ.

ಹಿಮಾಚಲ ಪ್ರದೇಶ ಹೈಕೋರ್ಟ್ ನ್ಯಾ. ಜೋತ್ಸ್ನಾ ರೇವಲ್ ದುವಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ. ಕಾನೂನಾತ್ಮಕವಾಗಿ ಸಿಂಧುತ್ವ ಹೊಂದಿರದ, ಅಕ್ರಮ ಅಥವಾ ಅನೂರ್ಜಿತ ವಿವಾಹದಿಂದ ಜನಿಸಿದ ಮಕ್ಕಳ ಜನನ ನೋಂದಣಿಯನ್ನು ನಿರಾಕರಿಸುವಂತಿಲ್ಲ. ಅಸಿಂಧು, ಅಕ್ರಮ ದಾಂಪತ್ಯದ ಫಲವಾಗಿ ಜನಿಸಿದ ಮಕ್ಕಳು ಜೀವಂತ ಇರುವವರಾಗಿದ್ದು, ಅವರನ್ನು ಕಾನೂನಿನ ಅಡಿಯಲ್ಲಿ ಸ್ವೀಕರಿಸಬೇಕಾಗಿದೆ. ಹಾಗಾಗಿ, ಅಮಾನ್ಯವಾದ ಮದುವೆಯಿಂದ ಜನಿಸಿದ ಮಕ್ಕಳು ಎಂಬ ಕಾರಣಕ್ಕೆ ಅಂತಹ ಮಕ್ಕಳ ಜನನ ನೋಂದಣಿ ನಿರಾಕರಿಸುವಂತಿಲ್ಲ ಎಂದು ಸೂಚಿಸಿದೆ.

ಕಾನೂನಿನ ಮಾನ್ಯತೆ ಇರದ ದಾಂಪತ್ಯ ಸಂಬಂಧದಿಂದ ಜನಿಸಿದ ಮಕ್ಕಳ ಜನನವನ್ನು ಸ್ವತಂತ್ರವಾಗಿ ಪರಿಗಣಿಸಬೇಕು. ಹಾಗೆ ಜನಿಸಿದ ಮಗು ಉಳಿದ ಮಕ್ಕಳಿಗೆ ದೊರೆಯುವ ಎಲ್ಲ ಹಕ್ಕುಗಳನ್ನು ಪಡೆಯಲು ಅರ್ಹವಾಗಿದೆ. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 16(3)ರ ತಿದ್ದುಪಡಿ ಇದರ ಪ್ರಮುಖ ತಿರುಳಾಗಿದೆ ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.