23/12/2024

Law Guide Kannada

Online Guide

ವಕೀಲರ ಸ್ಟಿಕ್ಕರ್ ದುರ್ಬಳಕೆ ಮಾಡಿಕೊಂಡ್ರೆ ಇರಲಿ ಎಚ್ಚರ: ನಿರ್ದಾಕ್ಷಿಣ್ಯ ಕ್ರಮಕ್ಕೆ ಖಡಕ್ ಸೂಚನೆ ನೀಡಿದ ಹೈಕೋರ್ಟ್

ಚೆನ್ನೈ: ಖಾಸಗಿ ವಾಹನಗಳ ಮೇಲೆ ವಕೀಲರ ಸ್ಟಿಕ್ಕರ್ ಅಂಟಿಸಿಕೊಂಡು ಓಡಾಡುವವರಿಗೆ ಮದ್ರಾಸ್ ಹೈಕೋರ್ಟ್ ಶಾಕ್ ನೀಡಿದ್ದು, ಹೀಗೆ ಖಾಸಗಿ ವಾಹನಗಳ ಮೇಲೆ ವಕೀಲರ ಸ್ಟಿಕ್ಕರ್” ಹಾಕಿಕೊ0ಡು ಅವುಗಳನ್ನು ದುರ್ಬಳಕೆ ಮಾಡುತ್ತಿರುವವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎ0ದು ಪೊಲೀಸರಿಗೆ ಖಡಕ್ ಸೂಚನೆ ನೀಡಿದೆ.

ಎಸ್. ದೇವದಾಸ್ ಗಾ0ಧಿ ವಿಲ್ಸನ್ ಎಂಬುವವರು ಕೆಲವು ವಕೀಲರು ತಮ್ಮ ಖಾಸಗಿ ವಾಹನಗಳ ಮೇಲೆ ವಕೀಲರ ಸ್ಟಿಕ್ಕರ್ ಅಂಟಿಸಿಕೊಂಡು ದುರ್ಬಳಕೆ, ಮಾಡಿಕೊಳ್ಳುತ್ತಿದ್ದಾರೆ ಎ0ದು ಆರೋಪಿಸಿ ಎಸ್. ದೇವದಾಸ್ ಗಾ0ಧಿ ವಿಲ್ಸನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ನ ಹ0ಗಾಮಿ ಮುಖ್ಯ ನ್ಯಾಯಮೂರ್ತಿ ಆರ್. ಮಹಾದೇವನ್ ಮತ್ತು ನ್ಯಾ. ಮೊಹಮ್ಮದ್ ಶಫೀಕ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.

ಸಂಚಾರಿ ನಿಯಮಗಳನ್ನು ಉಲಂಘಿಸಿದಾಗ ಪೊಲೀಸರ ಕ್ರಮದಿ0ದ ತಪ್ಪಿಸಿಕೊಳ್ಳಲು ಹಾಗೂ ಪೊಲೀಸರನ್ನು ಬೆದರಿಸಲು ವಕೀಲರ ಸ್ಟಿಕ್ಕರ್ ಗಳನ್ನು ಖಾಸಗಿ ವಾಹನಗಳ ಮೇಲೆ ಅಳವಡಿಸಿರುತ್ತಾರೆ. ಈ ಮೂಲಕ ವಕೀಲರ ಸ್ಟಿಕ್ಕರ್ ದುರ್ಬಳಕೆಯಾಗುತ್ತಿದೆ . ವಕೀಲರು ತಮ್ಮ ಖಾಸಗಿ ವಾಹನಗಳಿಗೆ ಅಡ್ವಕೇಟ್ ಸ್ಟಿಕ್ಕರ್ ಅಂಟಿಸಿ ಸಂಚಾರಿ ನಿಯಮಗಳ ಉಲ್ಲಂಘನೆ ವೇಳೆ ವಿನಾಯಿತಿ ಪಡೆಯುತ್ತಾರೆ. ಇದರಿ0ದ ಅವರು ಸಂಚಾರಿ ಅಪರಾಧಗಳಿ0ದ ಪಾರಾಗುತ್ತಾರೆ.

ತುರ್ತು ಸಂದರ್ಭಗಳಲ್ಲಿ ವೈದ್ಯರಿಗೆ ಸ್ಪಿಕ್ಕರ್ ಗಳ ಅಗತ್ಯ ಇರುವುದಿಲ್ಲ. ಅದೇ ರೀತಿ ವಕೀಲರು, ನ್ಯಾಯಾಲಯದಿಂದ ಹೊರಗೆ ಬ0ದ ಮೇಲೆ ಸ್ಟಿಕ್ಕರ್ ಗಳ ಅಗತ್ಯವಿರುವುದಿಲ್ಲ ಎ0ದು ಅರ್ಜಿದಾರರು ವಾದಿಸಿದ್ದರು.

ಈ ವಾದವನ್ನ ಆಲಿಸಿದ ಹೈಕೋರ್ಟ್ ನ್ಯಾಯಪೀಠ, ಸ್ಟಿಕ್ಕರ್ ಗಳ ದುರ್ಬಳಕೆ ನಿಯಂತ್ರಣಕ್ಕೆ ಸ0ಬಂಧಿಸಿದಂತೆ ಸುಪ್ರೀಂ ಕೋರ್ಟ್ ಹಲವು ತೀರ್ಪುಗಳನ್ನು ನೀಡಿದೆ. ಪೊಲೀಸರು ಸರಿಯಾದ ಕ್ರಮ ಕೈಗೊಳ್ಳಬೇಕು. ಪೊಲೀಸರು ಯಾವುದಕ್ಕೂ ಹೆದರುವ ಅಗತ್ಯವಿಲ್ಲ ಎ0ದು ಈ ತೀರ್ಪಿನಲ್ಲಿ ಹೇಳಲಾಗಿದೆ ಎಂದು ಹೇಳಿತು.

ಅಡ್ವಕೇಟ್ ಗಳು ಬಳಸುವ ಸ್ಟಿಕ್ಕರ್ ಗಳ ಕುರಿತು ಮಾಹಿತಿ ನೀಡುವಂತೆ ಸೂಚನೆ ನೀಡಿದ ಹೈಕೋರ್ಟ್, ಪ್ರಕರಣಕ್ಕೆ ಸ0ಬ0ಧಿಸಿದಂತೆ ರಾಜ್ಯ ಸರ್ಕಾರ ಮತ್ತು ವಕೀಲರ ಪರಿಷತ್ತಿಗೆ ನೋಟೀಸ್ ಜಾರಿ ಮಾಡಿ, ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.