23/12/2024

Law Guide Kannada

Online Guide

ಐದು ರ‍್ಷಗಳಿಂದ ವಕೀಲಿಕೆ ನಡೆಸದ ವಕೀಲರಿಗೊಂದು ಬ್ಯಾಡ್ ನ್ಯೂಸ್: ಏನದು…?

ಬೆಂಗಳೂರು: ವೃತ್ತಿಪರ ವಕೀಲರಾಗಿ ವಕೀಲರ ಪರಿಷತ್ತಿನಲ್ಲಿ ಹೆಸರು ನೋ೦ದಾಯಿಸಿ ವಕೀಲ ವೃತ್ತಿಯಿ೦ದ ಐದು ರ‍್ಷಗಳಿಗಿಂತ ಹೆಚ್ಚು ಕಾಲ ದೂರು ಉಳಿದಿರುವ ವಕೀಲರಿಗೆ BCI ಕಹಿ ಸುದ್ದಿ ನೀಡಿದೆ.

ನಿರಂತರ ಐದು ರ‍್ಷಗಳಿಗಿಂತ ಹೆಚ್ಚು ಕಾಲ ವಕೀಲಿಕೆ ನಡೆಸದಿದ್ದರೆ, ಅಂಥವರು ಭಾರತೀಯ ವಕೀಲರ ಪರಿಷತ್ತು ನಡೆಸುವ AIBE ಪರೀಕ್ಷೆ ಎದುರಿಸುವುದು ಕಡ್ಡಾಯ. ಈ ವಿಷಯವನ್ನು ಸ್ವತಃ ಭಾರತೀಯ ವಕೀಲರ ಪರಿಷತ್ತು ಸುಪ್ರೀಂ ಕರ‍್ಟ್ ಗೆ ಲಿಖಿತವಾಗಿ ತಿಳಿಸಿದೆ.

ವಕೀಲರಾದ ದರ‍್ಗಾ ದತ್ ಸುಪ್ರೀಂಕರ‍್ಟ್ ಗೆ ರ‍್ಜಿ ಸಲ್ಲಿಸಿ, ವಕೀಲ ವೃತ್ತಿ ಮತ್ತು ಕಾನೂನು ಶಿಕ್ಷಣದ ಮಾನದ೦ಡಗಳನ್ನು ಮೇಲ್ರ‍್ಜೆಗೆ ಏರಿಸುವಂತೆ ಮನವಿ ಮಾಡಿದ್ದರು. ಈ ರ‍್ಜಿ ಕುರಿತು ಅಫಿಡವಿಟ್ ಸಲ್ಲಿಸಿದ ಐಬಿಸಿ, ಸುಪ್ರೀಂ ಕರ‍್ಟಿಗೆ ಈ ಮಾಹಿತಿ ನೀಡಿದೆ.

ಸತತವಾಗಿ ಐದು ೫ ರ‍್ಷಕ್ಕಿಂತ ಅಧಿಕ ಅವಧಿ ವಕೀಲ ವೃತ್ತಿಯಿಂದ ಹೊರಗಿದ್ದರೆ ಅಂತವರು ಪುನರಪಿ ವಕೀಲರಾಗಿ ಪ್ರಾಕ್ಟೀಸ್ ಮಾಡಲು ಐಬಿಸಿ “ಆಲ್ ಇ೦ಡಿಯಾ ಬಾರ್ ಎಕ್ಸಾಮ್” ಪರೀಕ್ಷೆ ಬರೆಯಬೇಕು ಎ೦ದು BCI ಹೇಳಿದೆ. ಯಾವುದೇ ವ್ಯಕ್ತಿ ಕಾನೂನು ಪದವಿ ಪಡೆದ ಬಳಿಕ ವಕೀಲರಾಗಿ ಪ್ರಾಕ್ಟೀಸ್ ಮಾಡಲು IBC ನಡೆಸುವ AIBE ಪರೀಕ್ಷೆ ಪಾಸ್ ಆಗಬೇಕು. ಅಂಥವರಿಗೆ ಮಾತ್ರ ವಕೀಲರಾಗಿ ವೃತ್ತಿ ನಡೆಸಲು “ಪ್ರಾಕ್ಟೀಸ್ ರ‍್ಟಿಫಿಕೇಟ್” ನೀಡಲಾಗುತ್ತದೆ.

ಪ್ರಾಕ್ಟೀಸ್ ರ‍್ಟಿಫಿಕೇಟ್ ಪಡೆದ ಬಳಿಕ, ವಕೀಲರಾಗಿ ಸೇವೆ ಸಲ್ಲಿಸದೆ ಇತರ ವೃತ್ತಿಗೆ ತೆರಳಿ ವೃತ್ತಿಯಿ೦ದ ಐದು ರ‍್ಷಕ್ಕೂ ಅಧಿಕ ಕಾಲ ದೂರ ಇದ್ದರೆ ಅಂತಹವರು ಮತ್ತೆ AIBE ಪರೀಕ್ಷೆ ಪಾಸು ಮಾಡುವುದು ಕಡ್ಡಾಯ ಎ೦ದು ಸುಪ್ರೀಂಕರ‍್ಟ್ ಗೆ ಸಲ್ಲಿರುವ ಪ್ರಮಾಣ ಪತ್ರದಲ್ಲಿ ಐಬಿಸಿ ತಿಳಿಸಿದೆ. ಆದರೆ, ಈ ನಿಯಮದಲ್ಲಿ ಕೆಲವರಿಗೆ ವಿನಾಯಿತಿ ನೀಡಲಾಗಿದ್ದು, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕವಾದವರು, ನ್ಯಾಯಾ೦ಗ ಸೇವೆಗಳಲ್ಲಿ ತೊಡಗಿಸಿಕೊ೦ಡವರು, ಕಂಪೆನಿಗಳ ವಕೀಲರಾಗಿ ಸೇವೆ ಸಲ್ಲಿಸುವವರಿಗೆ ಈ ನಿಯಮ ಅನ್ವಯಿಸುವುದಿಲ್ಲ ಎ೦ಬುದನ್ನು ಐಬಿಸಿ ಸ್ಪಷ್ಟಪಡಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.