Background of not taking ‘cognizance’ within the time limit: High Court annulled the sentence given by the district court
ಕಾಲಮಿತಿಯಲ್ಲಿ ‘ಕಾಗ್ನಿಜೆನ್ಸ್’ ತೆಗೆದುಕೊಳ್ಳದ ಹಿನ್ನೆಲೆ: ಜಿಲ್ಲಾ ನ್ಯಾಯಾಲಯ ನೀಡಿದ್ದ ಶಿಕ್ಷೆಯ ತೀರ್ಪು ರದ್ದುಗೊಳಿಸಿದ ಹೈಕೋರ್ಟ್.
ಬೆಂಗಳೂರು: ಮಾನಹಾನಿ ಪ್ರಕರಣದ ಸ0ಜ್ಞೆಯತೆಯನ್ನು (ಕಾಗ್ನಿಜೆನ್ಸ್) ಪಡೆದುಕೊಳ್ಳಲು ಏಳು ವರ್ಷಗಳಿಗೂ ಹೆಚ್ಚಿನ ಸಮಯವನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯವು ಹೊರಡಿಸಲಾದ ಶಿಕ್ಷೆಯ ತೀರ್ಪು ಹಾಗೂ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಾದ ಮೇಲ್ಮನವಿಯ ತೀರ್ಪನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಕರ್ನಾಟಕ ಹೈಕೋರ್ಟ್ನ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ಪ್ರಕಟಿಸಿತು. ಪತ್ರಕರ್ತರೊಬ್ಬರ ವಿರುದ್ಧದ ದಾಖಲಾಗಿದ್ದ ಮಾನಹಾನಿ ಪ್ರಕರಣದಲ್ಲಿ ಮ0ಗಳೂರಿನ ಎರಡನೇ ಜೆಎಂಎಫ್ಸಿ ನ್ಯಾಯಾಲಯ ಪ್ರಕರಣದ ಸ0ಜ್ಞೆಯತೆಯನ್ನು (ಕಾಗ್ನಿಜೆನ್ಸ್) ಪಡೆದುಕೊಳ್ಳಲು ಏಳು ವರ್ಷಗಳಿಗೂ ಹೆಚ್ಚಿನ ಸಮಯವನ್ನು ತೆಗೆದುಕೊಂಡಿದ್ದು, ಆ ಬಳಿಕ ವಿಚಾರಣೆ ನಡೆಸಿ ಶಿಕ್ಷೆ ವಿಧಿಸಲಾಗಿದೆ ಎ0ಬುದನ್ನು ಗಮನಿಸಿದ ನ್ಯಾಯಪೀಠ, ಕಾಲಮಿತಿ ಮೀರಿದೆ ಎ0ಬ ಕಾರಣಕ್ಕೆ ವಿಚಾರಣಾ ನ್ಯಾಯಾಲಯ ಮತ್ತು ಆ ಬಳಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.
ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಕಲ0 468ರ ಪ್ರಕಾರ, ಘಟಿಸಿದೆ ಎನ್ನಲಾದ ಅಪರಾಧವು ಒ0ದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆ ವಿಧಿಸುವ0ತಿದ್ದರೆ ಮತ್ತು ಮೂರು ವರ್ಷಗಳ ಶಿಕ್ಷೆಯನ್ನು ಮೀರದಂತಿದ್ದರೆ, ಆಗ ನ್ಯಾಯಾಲಯವು ಮೂರು ವರ್ಷಗಳ ಒಳಗೆ ಕಾಗ್ನಿಜೆನ್ಸ್(ಸ0ಜ್ಞಯತೆ) ತೆಗೆದುಕೊಳ್ಳಬೇಕು.
ಆದರೆ ವಿಚಾರಣಾ ನ್ಯಾಯಾಲಯವು ಈ ಮಾನಹಾನಿ ಪ್ರಕರಣದಲ್ಲಿ ನಿಯಮ ಪಾಲಿಸದೆ ಆರೋಪಿಗೆ ಶಿಕ್ಷೆ ವಿಧಿಸಿತ್ತು. ಅದ್ದರಿಂದ ಕಾನೂನಿನ ಪರಿಭಾಷೆಯಲ್ಲಿ ಇದು ಕೆಟ್ಟದ್ದಾಗಿದೆ ( ಖಿhe oಡಿಜeಡಿ is ಣಚಿಞiಟಿg ಛಿogಟಿizಚಿಟಿಛಿe is bಚಿಜ ಟಚಿತಿ). ಹಾಗಾಗಿ, ಇತರ ವಿಷಯಗಳ ಬಗ್ಗೆ ಎತ್ತಲಾದ ಪ್ರಶ್ನೆಗಳನ್ನು ಉತ್ತರಿಸುವ ಪ್ರಮೇಯವೇ ಇಲ್ಲ. ಈ ಕಾರಣದಿ0ದ ಮೇಲ್ಮನವಿದಾರರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲಾಗಿದೆ ಎ0ದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ