ವರದಕ್ಷಿಣೆ ಕಾನೂನು ದುರ್ಬಳಕೆ ತಪ್ಪಿಸಿ: ಅಮಾಯಕ ಕುಟುಂಬ ಸದಸ್ಯರ ರಕ್ಷಣೆಗೆ ಎಚ್ಚರ ವಹಿಸಿ – ಸುಪ್ರೀಂ ಕೋರ್ಟ್
ವರದಕ್ಷಿಣೆ ಕಾನೂನು ದುರ್ಬಳಕೆ ತಪ್ಪಿಸಿ: ಅಮಾಯಕ ಕುಟುಂಬ ಸದಸ್ಯರ ರಕ್ಷಣೆಗೆ ಎಚ್ಚರ ವಹಿಸಿ- ಸುಪ್ರೀಂ ಕೋರ್ಟ್ನವದೆಹಲಿ: ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಕಾನೂನಿನ ದುರುಪಯೋಗವನ್ನು ತಡೆಯಲು ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು. ಮತ್ತು ಪತಿಯ ಸಂಬಂಧಿಕರನ್ನು ಸಿಲುಕಿಸುವ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಅಮಾಯಕ ಕುಟುಂಬ ಸದಸ್ಯರಿಗೆ ಅನಗತ್ಯ ತೊಂದರೆಗಳನ್ನು ತಪ್ಪಿಸಬೇಕು. ಅಮಾಯಕ ಕುಟುಂಬ ಸದಸ್ಯರನ್ನು ಅನಗತ್ಯ ತೊಂದರೆಯಿಂದ ರಕ್ಷಿಸಲು ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಪತಿ, ಆತನ ಪಾಲಕರು ಮತ್ತು ಇತರ ಕುಟುಂಬ ಸದಸ್ಯರ ವಿರುದ್ಧ ಮಹಿಳೆಯೊಬ್ಬರು ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ವಜಾಗೊಳಿಸಲು ನಿರಾಕರಿಸಿದ ತೆಲಂಗಾಣ ಹೈಕೋರ್ಟ್ ಆದೇಶವನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ. ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಎನ್. ಕೋಟೇಶ್ವರ್ ಸಿಂಗ್ ಅವರಿದ್ದ ದ್ವಿಸದಸ್ಯ ಪೀಠವು ಈ ಅಭಿಪ್ರಾಯವನ್ನು ನೀಡಿದೆ.
ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳದಿಂದ ಮಹಿಳೆಯನ್ನು ರಕ್ಷಿಸುವ ಗುರಿ ಹೊಂದಿದ್ದ ಈ ಸೆಕ್ಷನ್ ಅನ್ನು ದುರ್ಬಳಕೆ ಮಾಡಿಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಅಸ¬ಮಂಜಸ ಬೇಡಿಕೆ ಈಡೇರಿಸಿಕೊಳ್ಳುವು¬ದಕ್ಕಾಗಿ ಪತ್ನಿ ಈ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾಳೆ ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ಹೇಳಿದೆ.
ತಿದ್ದುಪಡಿಯ ಮೂಲಕ ಭಾರತೀಯ ದಂಡ ಸಂಹಿತೆ (IPC) ಯಲ್ಲಿ ಸೆಕ್ಷನ್ 498ಂ ಅನ್ನು ಸೇರಿಸುವ ಉದ್ದೇಶವು, ಪತಿ ಮತ್ತು ಅವನ ಕುಟುಂಬ ಸದಸ್ಯರಿಂದ ಮಹಿಳೆಯ ಮೇಲೆ ಆಗುವ ದಬ್ಬಾಳಿಕೆಯನ್ನು ತಡೆಗಟ್ಟಲು ರಾಜ್ಯದಿಂದ ತ್ವರಿತ ಹಸ್ತಕ್ಷೇಪವನ್ನು ಖಚಿತಪಡಿಸುತ್ತದೆ ಎಂದು ಪೀಠವು ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ವೈವಾಹಿಕ ವಿವಾದಗಳಲ್ಲಿ ಗಮನಾರ್ಹ ಹೆಚ್ಚಳ ಕಂಡುಬಂದಿದೆ. ಜತೆಗೆ ವಿವಾಹದಲ್ಲಿ ಅಪಶ್ರುತಿ ಮತ್ತು ಉದ್ವಿಗ್ನತೆ ಹೆಚ್ಚುತ್ತಿದೆ. ಇದರ ಪರಿಣಾಮವಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498A (ಪತಿ ವಿರುದ್ಧ ಅಥವಾ ಸಂಬಂಧಿಕರ ಕ್ರೌರ್ಯದಂತಹ ನಿಬಂಧನೆಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ) ಪತಿ ಮತ್ತು ಅವನ ಕುಟುಂಬದ ವಿರುದ್ಧ ಹೆಂಡತಿಯಿಂದ ವೈಯಕ್ತಿಕ ಸೇಡು ತೀರಿಸಿಕೊಳ್ಳಲು, ವೈವಾಹಿಕ ವಿವಾದಗಳ ಸಂದರ್ಭದಲ್ಲಿ ಅಸ್ಪಷ್ಟ ಮತ್ತು ಸಾಮಾನ್ಯ ಆರೋಪಗಳನ್ನು ತನಿಖೆ ಮಾಡದಿದ್ದರೆ, ಕಾನೂನು ಪ್ರಕ್ರಿಯೆಗಳ ದುರುಪಯೋಗಕ್ಕೆ ಕಾರಣವಾಗಬಹುದು.
ಐಪಿಸಿಯ ಸೆಕ್ಷನ್ 498ಎ ಅಡಿಯಲ್ಲಿ ಕೌರ್ಯಕ್ಕೆ ಒಳಗಾದ ಯಾವುದೇ ಮಹಿಳೆ ದೂರು ನೀಡದಂತೆ ಅಥವಾ ಯಾವುದೇ ಕ್ರಿಮಿನಲ್ ಮೊಕದ್ದಮೆಯನ್ನು ಪ್ರಾರಂಭಿಸದಂತೆ ಮೌನವಾಗಿರಬೇಕು ಎಂದು ನಾವು ಒಂದು ಕ್ಷಣವೂ ಹೇಳುವುದಿಲ್ಲ. (ಹೇಳಬೇಕಾಗಿರುವುದು ಇಷ್ಟೆ) ಅಂತಹ ಪ್ರಕರಣಗಳನ್ನು ಪ್ರಚಾರ ಮಾಡಬಾರದು ಎಂದು ಪೀಠ ಹೇಳಿದೆ.
ವೈವಾಹಿಕ ವಿವಾದದಿಂದ ಉಂಟಾಗುವ ಕ್ರಿಮಿನಲ್ ಪ್ರಕರಣದಲ್ಲಿ ಕುಟುಂಬ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಸೂಚಿಸುವ ನಿರ್ದಿಷ್ಟ ಆರೋಪಗಳಿಲ್ಲದೆ ಕುಟುಂಬದ ಸದಸ್ಯರ ಹೆಸರನ್ನು ನಮೂದಿಸುವುದನ್ನು ನಿರ್ಬಂಧಿಸಬೇಕು ಎಂದು ತಿಳಿಸಿದೆ.
ವೈವಾಹಿಕ ಕಲಹದ ಸಮಯದಲ್ಲಿ ಪತಿ ಕುಟುಂಬದ ಸದಸ್ಯರೆಲ್ಲರನ್ನೂ ಆರೋಪಿಯನ್ನಾಗಿ ಮಾಡುವ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತದೆ ಎಂಬುದು ನ್ಯಾಯಾಂಗದ ಅನುಭವದಿಂದ ಎಲ್ಲರಿಗೂ ತಿಳಿದಿರುವ ಸತ್ಯ. ನಿರ್ದಿಷ್ಟ ಪುರಾವೆಗಳು ಅಥವಾ ನಿರ್ದಿಷ್ಟ ಆರೋಪಗಳಿಲ್ಲದ ಸಾಮಾನ್ಯ ಮತ್ತು ವಿಶಾಲ ಆರೋಪಗಳು ಕ್ರಿಮಿನಲ್ ಮೊಕದ್ದಮೆಗೆ ಆಧಾರವಾಗುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಕಾನೂನು ನಿಬಂಧನೆಗಳು ಮತ್ತು ಕಾನೂನು ಪ್ರಕ್ರಿಯೆಗಳ ದುರುಪಯೋಗವನ್ನು ತಡೆಯಲು ಮತ್ತು ಅಮಾಯಕ ಕುಟುಂಬ ಸದಸ್ಯರನ್ನು ಅನಗತ್ಯ ತೊಂದರೆಯಿಂದ ರಕ್ಷಿಸಲು ನ್ಯಾಯಾಲಯಗಳು ಎಚ್ಚರಿಕೆ ವಹಿಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ