23/12/2024

Law Guide Kannada

Online Guide

ಸುಪ್ರೀಂ ಕೋರ್ಟ್‌ನ ಬೇಸಿಗೆ ರಜೆ ರದ್ದು

ನವದೆಹಲಿ: ನಿವೃತ್ತಿಗೆ ಎರಡು ದಿನ ಬಾಕಿ ಇರುವಾಗಲೇ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನಲ್ಲಿ ಬೇಸಿಗೆ ರಜೆಯನ್ನು ರದ್ದುಗೊಳಿಸಿ ಆದೇಶಿಸಿದ್ದಾರೆ.

ಸುಪ್ರೀಂ ಕೋರ್ಟ್ ತನ್ನ 2025 ರ ಕ್ಯಾಲೆಂಡರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ, ಮುಂಬರುವ ವರ್ಷಕ್ಕೆ ರಜಾದಿನಗಳು ಮತ್ತು ಕೆಲಸದ ದಿನಗಳ ವೇಳಾಪಟ್ಟಿಯನ್ನು ವಿವರಿಸುತ್ತದೆ.

2025ರ ನ್ಯಾಯಾಲಯದ ಕ್ಯಾಲೆಂಡರ್ ಬೇಸಿಗೆ ರಜಾದಿನಗಳನ್ನು ಭಾಗಶಃ ಕೆಲಸದ ದಿನಗಳು ಎಂದು ಬದಲಾವಣೆ ಮಾಡಲಾಗಿದ್ದು, ಈ ತಿದ್ದುಪಡಿ ನಿಯಮಗಳನ್ನು ತಕ್ಷಣವೇ ಜಾರಿಗೆ ತಂದಿದೆ. ತಿದ್ದುಪಡಿ ನಿಯಮಗಳ ಪ್ರಕಾರ, 2025ರ ಮೇ 26 ರಿಂದ ಭಾಗಶಃ ಕೆಲಸದ ದಿನಗಳು ಎಂದು ಮಾಡಲಾಗಿದೆ. ಅದಾದ ಬಳಿಕ 2025 ಜುಲೈ 14 ರಿಂದ ಪೂರ್ಣ ಕೆಲಸದ ದಿನಗಳು ಪುನಾರಂಭಗೊಳ್ಳುತ್ತವೆ.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ನವೆಂಬರ್ 10 ರಂದು ನಿವೃತ್ತಿಯಾಗಲಿದ್ದಾರೆ. ಮುಂದಿನ ಸಿಜೆಐ ಆಗಿ ಹಿರಿಯ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನೇಮಕವಾಗಿದ್ದು ನವೆಂಬರ್ 11 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಚಂದ್ರಚೂಡ್ ಅವರು ನವೆಂಬರ್ 9, 2022 ರಂದು ಅಧಿಕಾರ ವಹಿಸಿಕೊಂಡಿದ್ದರು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.