ರಾಜ್ಯ ಹೈಕೋರ್ಟ್ ಹಿರಿಯ ವಕೀಲರ ಪದನಾಮಕ್ಕೆ 97 ಮಂದಿ ಅರ್ಜಿ : ಪಟ್ಟಿಯಲ್ಲಿರುವವರ ಹೆಸರು ಹೀಗಿದೆ ನೋಡಿ.
ಬೆಂಗಳೂರು: ರಾಜ್ಯ ಹೈಕೋರ್ಟ್ ಹಿರಿಯ ವಕೀಲರ ಪದನಾಮಕ್ಕೆ 97 ಮಂದಿ ವಕೀಲರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಕರ್ನಾಟಕದ ವಿವಿಧ ಜಿಲ್ಲೆಗಳ 97 ಮಂದಿ ವಕೀಲರು ಹೈಕೋರ್ಟ್ ನಲ್ಲಿ ಹಿರಿಯ ವಕೀಲರ ಪದನಾಮ ಬಯಸಿ ಲಿಖಿತ ಪ್ರಸ್ತಾಪ ಅಥವಾ ಅರ್ಜಿಯನ್ನು ಸಲ್ಲಿಗೆ ಮಾಡಿದ್ದು, ಈ ಬಗ್ಗೆ, ಸಂಬಂಧಪಟ್ಟವರು 2024ರ ನವೆಂಬರ್ 28ರ ಒಳಗೆ ಸಲಹೆ ಸೂಚನೆ ಅಥವಾ ಅಭಿಪ್ರಾಯ ಸಲ್ಲಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಕರ್ನಾಟಕ ಹೈಕೋರ್ಟ್ (ಹಿರಿಯ ವಕೀಲರ ಪದನಾಮ) ನಿಯಮಗಳ ಅಡಿ ನಿಯಮ 6 ಉಪ ನಿಯಮ 3ರ ಮತ್ತು ತಿದ್ದುಪಡಿ ನಿಯಮಗಳು 2024ರ ಪ್ರಕಾರ ಪ್ರಸ್ತಾವಿತ ಪದನಾಮಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟವರು ಹೈಕೋರ್ಟ್ ನ ಶಾಶ್ವತ ಸೆಕ್ರೆಟರಿಯೇಟ್ ವಿಭಾಗದ ರಿಜಿಸ್ಟ್ರಾರ್ ಗೆ (ನೇಮಕಾತಿ) ಅಭಿಪ್ರಾಯ/ಸಲಹೆಗಳನ್ನು ಸಲ್ಲಿಸಬಹುದು ಎಂದು ರಿಜಿಸ್ಟ್ರಾರ್ ಜನರಲ್ ಕೆ ಎಸ್ ಭರತ್ ಕುಮಾರ್ ತಿಳಿಸಿದ್ದಾರೆ. ಎಲ್ಲಾ 98 ವಕೀಲರ ಅರ್ಜಿ/ ಲಿಖಿತ ಪ್ರಸ್ತಾವಗಳನ್ನು ಹೈಕೋರ್ಟ್ ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ಹಿರಿಯ ವಕೀಲರ ಪದನಾಮಕ್ಕೆ ಅರ್ಜಿ ಸಲ್ಲಿಸಿರುವವರ ಪಟ್ಟಿ ಈ ಕೆಳಕಂಡಂತಿದೆ.
- SR ಕಮಲಾಚರಣ್,
- ಮೊಹಮ್ಮದ್ ನಾಸಿರುದ್ದೀನ್,
- ಶ್ರೇಯಸ್ ಜಯಸಿಂಹ.
- ಜಗದೀಶ್ ಬಾಳಿಗಾ N
- ಜೆ ಪ್ರದೀಪ್ ಕುಮಾರ್
- S ಶಂಕರಪ್ಪ,
- SS ಮಹೇಂದ್ರ,
- D ಅಶ್ವತ್ತಪ್ಪ,
- D ಕೃಷ್ಣ ಮೂರ್ತಿ,
- K ಕೇಶವ ಭಟ್,
- A ನಾಗರಾಜಪ್ಪ,
- ಸಂಕೇತ್ ಏಣಗಿ
- D ರವಿಕುಮಾರ್ ಗೋಕಾಕರ್.
- ಗುರುರಾಜ ಜೋಶಿ,
- ಶ್ರೀಧರ್ ಪ್ರಭು,
- ರವೀಂದ್ರ ಗಜನಾನ ಕೊಳ್ಳೆ,
- ವಿ.ಜಿ. ಭಾನುಪ್ರಕಾಶ್,
- ಡಾ. ಎಂ. ಸುನಿಲ್ ಶಾಸ್ತ್ರಿ
- ಅಜೇಶ್ ಕುಮಾರ್ ಶಂಕರ್,
- ಸಾಜಿ P ಜಾನ್,
- B. A. ಬೆಳ್ಳಿಯಪ್ಪ..
- ವೈಶಾಲಿ ಹೆಗ್ಡೆ,
- P.N. ಮನಮೋಹನ್.
- ಹಾಲೇಶ್ ಆರ್.ಜಿ.
- ಎಸ್ ನಾಗರಾಜ್ (ಪ್ರೊ. ಡಾ. 5 ನಾಗರಾಜ್),
- ಎನ್ ಡಿ ಬ್ರಹ್ಮ ರಾಜು (NDB ರಾಜು),
- ಗೌತಮ್ ಶ್ರೀಧರ್ ಭಾರದ್ವಾಜ್,
- ಎ ಎನ್ ಗಂಗಾಧರಯ್ಯ,
- ವಿ ಎಸ್ ಹೆಗ್ಡೆ,
- ಬಿ ಆರ್ ದೀಪಕ್,
- ಎಚ್.ಪಿ.ಲೀಲಾಧರ್,
- ತಾಜುದ್ದೀನ್,
- XM ಜೋಸೆಫ್ (ಕೇವಿಯರ್ ಮರಿಯಾ ಜೋಸೆಫ್),
- ಪಿ ಕೆ ಶ್ರೀಕಾರ,
- ಮಧುಕರ್ ಎಂ. ದೇಶಪಾಂಡೆ.
- ಬಿ ಪರಸ್ಮಾಲ್ ಅಲಿಯಾಸ್ ಪರಸ್ ಜೈನ್,
- ಕೆ ಕಲ್ಯಾಣ್ ಬಸವರಾಜ್,
- ಜಿ ಶ್ರೀಧರ್,
- ಆರ್ ಸುಬ್ರಮಣ್ಯ, ಎ ಮುರಳಿ,
- ವಿದ್ಯಾವತಿ ಎಂ. ಕೊಟ್ಟೂರ ಶೆಟ್ಟರ್.
- ಗಣಪತಿ ನಾರಾಯಣ ಭಟ್ (ವಜ್ರಾಲಿ).
- ಕೆ.ಎಸ್ ನವೀನ್ ಕುಮಾರ್,
- ವಿವೇಕ್ ಹೊಳ್ಳ,
- ಬಿ.ಜಿ ಚಿದಾನಂದ ಅರಸ್,
- ಸೊಹಾನಿ ಹೊಳ್ಳ
- ವೀರಣ್ಣ ಗದಿಗೆಪ್ಪ ತಿಗಡಿ, ಶ್ವೇತಾ ಆನಂದ್,
- ಅಜಯ್ ಜೆ ನಂದಾಲಿಕೆ,
- ಮನು ಪ್ರಭಾಕರ ಕುಲಕರ್ಣಿ
- ಎಂ.ಆರ್ ಚಿನ್ನಾಸ್ವಾಮಿ ಮನೋಹರ್ (MRC ಮನೋಹರ್)
- ರಹಮತುಲ್ಲಾ ಕೊತ್ಯಾಲ್,
- ಎಸ್ ವಿವೇಕಾನಂದ.
- ಕೆ ರಮಾ ಭಟ್,
- ಮಿಥುನ್ ಜಿಎ (ಮಿಥುನ್ ಗಿರಹಳ್ಳಿ ಅಶ್ವತ್ಥನಾರಾಯಣ),
- ಹಿದಾಯತುಲ್ಲಾ,ಎಂ ಎಚ್
- ಎ ಅಭಿನವ್ ರಮಾನಂದ್,
- ಲಕಂಪುರ ಮಠ ಚಿದಾನಂದಯ್ಯ.
- ವೆಂಕಟೇಶ್ ಎಸ್ ಅರಬಟ್ಟಿ
- ಎ ರವಿಶಂಕರ್.
- ಎಂಪಿ ಶ್ರೀಕಾಂತ್
- ಜಿ ಮಲ್ಲಿಕಾರ್ಜುನಪ್ಪ,
- ಎಂ ವಿನೋದ್ ಕುಮಾರ್.
- ಸಿ ಎಸ್ ಪುದೀಪ್
- ಸಂತೋಷ್ ಎಸ್ ಗೋಗಿ,
- ಜಿ ಬಾಲಕೃಷ್ಣ ಶಾಸ್ತ್ರಿ
- ಪಿ.ಎನ್.ರಾಜೇಶ್ವರ್
- ಜುಲ್ಫಿಕರ್ ಕುಮಾರ್ ಶಫಿ,
- ಸಂದೀಪ್ ಎಸ್ ಪಾಟೀಲ್,
- ಶೇಖ್ ಸೂದ್,
- ಟಿ ಶೇಷಗಿರಿ ರಾವ್.
- ಕೆ ಬಿ ಎಸ್ ಮಣಿಯನ್,
- ಎಂ ವಿ ವಿ ರಮಣ,
- ಮಲ್ಮಾರ ರಾವ್ ಕೆ.,
- ನಿತ್ಯಾನಂದ ವಿ ನಾಯಕ್,
- ನೂರುದ್ದೀನ್ ಶೆಟ್ಟಿ.
- ಎನ್ ರಾಜಶೇಖರ್ ,
- ಕೆ.ಹನುಮಂತರಾಯಪ್ಪ.
- ಬಿಪಿನ್ ಹೆಗ್ಡೆ
- ಎಸ್ ಮಹೇಶ್.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ