ನಿಗದಿತ ಬೆಲೆಗಿಂತ ಹೆಚ್ಚು ಹಣ ಪಡೆದು ಗ್ರಾಹಕರಿಗೆ ವಂಚನೆ: ಮೋರ್ ರಿಟೈಲ್ ಪ್ರೈವೇಟ್ ಲಿಮಿಟೆಡ್ ಗೆ ಬಿತ್ತು 25 ಸಾವಿರ ರೂ. ದಂಡ
ಮೈಸೂರು,ಅಕ್ಟೋಬರ್,7, 2024 (www.justkannada.in): ಎಂ.ಆರ್.ಪಿ. ನಿಗದಿತ ಬೆಲೆಗಿಂತ ಹೆಚ್ಚು ಹಣ ಪಡೆದು ಅನುಚಿತ ವ್ಯಾಪಾರ ಎಸಗಿ ಗ್ರಾಹಕರಿಗೆ ವಂಚನೆ ಮಾಡಿದ ಆರೋಪದ ಮೇಲೆ ಮೈಸೂರಿನ ಮೋರ್ ರಿಟೈಲ್ ಪ್ರೈವೇಟ್ ಲಿಮಿಟೆಡ್ ಗೆ ಮೈಸೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.
ಮೈಸೂರಿನ ಚಾಮುಂಡಿಪುರಂನ ರಮೇಶ್ ಎಂ.ಕೆ ಎಂಬುವವರು ಮೈಸೂರಿನ ಜೆ.ಪಿನಗರ ನಂ.299/ಎ, ಬ್ಲಾಕ್, ಮೊದಲನೆ ಹಂತ ಜೆ.ಪಿ ನಗರ ಮುಖ್ಯ ರಸ್ತೆ, ಶನಿ ದೇವರ ದೇವಸ್ಥಾನದ ಹತ್ತಿರವಿರುವ ಮೋರ್ ರೀಟೈಲ್ ಪ್ರವೈಟ್ ಲಿಮಿಟೆಡ್ ಮತ್ತು ಮೋರ್ ರಿಟೈಲ್ ಪ್ರೈವೇಟ್ ಲಿಮಿಟೆಡ್, ಮುಖ್ಯ ಕಛೇರಿ, ನಂ.92,/1, ಮೊದಲ ಮಹಡಿ ಮೋರ್ ಸೂಪರ್ ಮಾರ್ಕೇಟ್ ಮೇಲೆ, ಫೇಜರ್ ಟೌನ್, ಮಸೀದಿ ರಸ್ತೆ, ಪುಲಿಕೇಶಿ ನಗರ, ಬೆಂಗಳೂರು- 560005 ಇವರ ವಿರುದ್ದ ಮೈಸೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ದೂರುದಾರ ರಮೇಶ್ ಎಂ.ಕೆ. 1ನೇ ಎದುರುದಾರರ ಬಳಿ ದಿನಾಂಕ 30.08.2023ರಂದು ಕೆಲವು ಸಾಮಾಗ್ರಿಗಳನ್ನು ಖರೀದಿಸಿದ್ದರು, ಅದರಲ್ಲಿ ನಾಲ್ಕು (4) Surf Excel detergent bar ಅನ್ನು ಒಳಗೊಂಡಿದ್ದು, C.M ನಂ.231155013008114149, ಸಮಯ 11:41:49. ರಲ್ಲಿ ಖರೀದಿಸಿ ಒಂದು Surf Excel detergent bar ಅನ್ನು ಎಂ.ಆರ್.ಪಿ.ಬೆಲೆಯ 35/-ರೂ.ಗಳಾಗಿದ್ದು, ಕವರ್ ಮೇಲೆ ಮುದ್ರಿತವಾಗಿದೆ. 4 ಸೋಪಿನ ಬೆಲೆ 140/-ರೂ.ಗಳಾಗುತ್ತದೆ. ಆದರೆ ಬಿಲ್ ನಲ್ಲಿ 38 ರೂ ಗಳಂತೆ 4 ಸೋಪಿನ ಬೆಲೆಯನ್ನು 152 ರೂ ಎಂದು ಬಿಲ್ ನಲ್ಲಿ ನಮೂದಿಸಿ ಇತರೆ ವಸ್ತುಗಳ ಜೊತೆ ನೀಡಿರುತ್ತಾರೆ . ದೂರುದಾರರು ಮನೆಗೆ ಬಂದು ನೋಡಿದಾಗ ಸೋಪನ್ನು ಎಂಆರ್ ಪಿ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಪಡೆದಿರುವುದು ತಿಳಿದು ಬರುತ್ತದೆ
ಹೀಗಾಗಿ ರಮೇಶ್ ಎಂ.ಕೆ ಈ ವಂಚನೆ ಕುರಿತು ಮೈಸೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೆಟ್ಟಿಲೇರಿ ಪರಿಹಾರಕ್ಕೆ ಮನವಿ ಮಾಡಿದ್ದರು.
ಇದೀಗ ವಾದ ಆಲಿಸಿದಮೈಸೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ನಿಗಧಿತ ಮೌಲ್ಯಕ್ಕಿಂತ ಹೆಚ್ಚು ಮೊತ್ತ 12/-ರೂ.ಗಳನ್ನು ಮರುಪಾವತಿಸತಕ್ಕದ್ದು, ಹಾಗೂ ಅನುಚಿತ ವ್ಯಾಪಾರಕ್ಕೆ ಪರಿಹಾರವಾಗಿ 20,000/-ರೂ.ಗಳನ್ನು ಹಾಗೂ ಪ್ರಕರಣದ ಖರ್ಚು 5000/-ರೂ.ಗಳನ್ನು ಈ ಆದೇಶದ 2 ತಿಂಗಳ ಒಳಗಾಗಿ ಪಾವತಿಸಬೇಕು.
ತಪ್ಪಿದಲ್ಲಿ ಸದರಿ ಮೊತ್ತ 25,012/-ರೂ.ಗಳಿಗೆ ಸಾಲಿಯಾನ ಶೇಕಡ 12ರಂತೆ ಪಾವತಿಸಬೇಕಾಗುತ್ತದೆ, ಸದರಿ ಹಣ ಸಂದಾಯವಾಗುವವರೆಗೂ ಈ ಮೇಲ್ಕಂಡ ಆದೇಶದ ಉಲ್ಲಂಘನೆಗಾಗಿ ಎದುರುದಾರರ ವಿರುದ್ಧ ಗ್ರಾಹಕ ಸಂರಕ್ಷಾಣಾ ಕಾಯ್ದೆ ಕಲಂ 72ರನ್ವಯ ಶಿಕ್ಷಾರ್ಹವಾದ ಜೈಲು ಶಿಕ್ಷೆ ಹಾಗೂ ದ್ರವ್ಯ ದಂಡ ಶಿಕ್ಷೆಗೆ ಗುರಿಪಡಿಸಲು ಕ್ರಿಮಿನಲ್ ಪ್ರಕರಣವನ್ನು ಸಹ ಹೂಡಲು ಫಿರ್ಯಾದುದಾರರು ಅರ್ಹರಾಗಿರುತ್ತಾರೆ ಎಂದು ಆದೇಶಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ