ಆಸ್ತಿ ನೋಂದಣಿಯಲ್ಲಿ ಹೊಸ ಹೆಜ್ಜೆ ಇಟ್ಟ ಸರ್ಕಾರ: ಇನ್ಮುಂದೆ ಜಿಲ್ಲಾ ವ್ಯಾಪ್ತಿಯಲ್ಲೂ ‘Any Where Registration’
ಬೆಂಗಳೂರು: ಜಮೀನು, ನಿವೇಶನ, ಮನೆ-ವಾಣಿಜ್ಯ ಕಟ್ಟಡಗಳನ್ನು ನೋಂದಣಿ ಮಾಡಿಸುವವರೆಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, Any Where Registration ಎಂಬ ಪರಿಕಲ್ಪನೆಯನ್ನು ಜಿಲ್ಲಾ ವ್ಯಾಪ್ತಿಯವರೆಗೂ ವಿಸ್ತರಿಸಿದೆ.
ಈ ಮೂಲಕ ಆಸ್ತಿ ನೋಂದಣಿ ವಿಚಾರದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹೊಸ ಹೆಜ್ಜೆಯನ್ನಿಟ್ಟಿದ್ದು, ಸೆಪ್ಟೆಂಬರ್ 2ರಿಂದ ಆಸ್ತಿ ನೋಂದಣಿಗೆ ಜಿಲ್ಲೆಯ ಯಾವುದೇ ನೋಂದಾವಣಾಧಿಕಾರಿಗಳ ಕಚೇರಿಯನ್ನು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಈ ಹಿಂದೆ ಇದುವರೆಗೆ ಜಮೀನು, ನಿವೇಶನ, ಮನೆ-ವಾಣಿಜ್ಯ ಕಟ್ಟಡಗಳು ಸೇರಿದಂತೆ ಯಾವುದೇ ಆಸ್ತಿಯನ್ನ ಆಯಾ ತಾಲೂಕು ವ್ಯಾಪ್ತಿಯ ನೋಂದಣಾಧಿಕಾರಿ ಕಚೇರಿಯಲ್ಲಿ ಮಾತ್ರ ಮಾಡಿಸಲು ಅವಕಾಶವಿತ್ತು.
ಇದೀಗ ಇನ್ಮುಂದೆ ಜಿಲ್ಲಾ ವ್ಯಾಪ್ತಿಗೆ ಅವಕಾಶ ಕಲ್ಪಿಸಲಾಗಿದ್ದು, ಮುಂದಿನ ಹಂತದಲ್ಲಿ ರಾಜ್ಯದ ಯಾವುದೇ ಭಾಗದ ಕಚೇರಿಗೆ ತೆರಳಿ ನೋಂದಣಿ ಮಾಡಿಸುವ ವ್ಯವಸ್ಥೆ ರೂಪಿಸಲಾಗುವುದು ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಹೇಳಿದೆ.
ಆಸ್ತಿ ನೋಂದಣಿಗೆ ಅರ್ಜಿ ಸಲ್ಲಿಸಲು ಈ ದಾಖಲೆ ಕಡ್ಡಾಯ
ಇನ್ನು ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡುವ ಕೃತ್ಯಕ್ಕೆ ಕಡಿವಾಣ ಹಾಕಲು ನೋಂದಣಿ ಮತ್ತು ಮುದ್ರಾಂಕ ಇಲಾಖೆ ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಆಸ್ತಿ ದಾಖಲೆಗಳ ಜೊತೆಗೆ ಆಸ್ತಿಯ ಮಾಲಕತ್ವ ಹೊಂದಿರುವವರ ಆಧಾರ್, ಪಾನ್ ಕಾರ್ಡ್ ಅಥವಾ ಪಾಸ್ಪೋರ್ಟ್ ಸಲ್ಲಿಸುವುದು ಕಡ್ಡಾಯವಾಗಿದೆ.
ಯಾವುದೇ ಭಾರತೀಯ ಅಥವಾ ಅನಿವಾಸಿ ಭಾರತೀಯ ಪ್ರಜೆ ಈ ಮೂರು ದಾಖಲೆಗಳಲ್ಲಿ ಒಂದು ದಾಖಲೆ ಹೊಂದಿರುತ್ತಾರೆ. ಹಾಗಾಗಿ, ಈ ಮೂರು ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದ ನಂತರವೇ ಆಸ್ತಿ ನೋಂದಣಿ ಮಾಡಲಾಗುತ್ತದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ತಿಳಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ