ಪಾರದರ್ಶಕ ಆಡಳಿತಕ್ಕೆ ಒತ್ತು: ಸರ್ಕಾರಿ ಕಚೇರಿಗಳಲ್ಲಿ ‘ನಗದು ಘೋಷಣೆ ರಿಜಿಸ್ಟರ್’ ನಿರ್ವಹಣೆಗೆ ಸುತ್ತೋಲೆ: ಏನಿದು ಗೊತ್ತೆ…?
ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲಿ ಲಂಚ, ಭ್ರಷ್ಟಾಚಾರದ ಆರೋಪ ಕೇಳಿ ಬರುತ್ತಲೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಆಡಳಿತದಲ್ಲಿ ಪಾರದರ್ಶಕತೆ ತರಲು ಸರ್ಕಾರಿ ಕಚೇರಿಗಳಲ್ಲಿ ಹೈಕೋರ್ಟ್ ಆದೇಶದನ್ವಯ ನಗದು ಘೋಷಣೆ ರಿಜಿಸ್ಟರ್’ ನಿರ್ವಹಣೆ ಮಾಡಬೇಕೆಂದು ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.
ಎಲ್ಲಾ ರಾಜ್ಯ ಸರಕಾರಿ ಕಚೇರಿಗಳಲ್ಲಿ ನಗದು ಘೋಷಣೆ ರಿಜಿಸ್ಟರ್ ಅನ್ನು ನಿರ್ವಹಿಬೇಕು ಸುತ್ತೋಲೆ ಹೊರಡಿಸಿದೆ. ಸರಕಾರಿ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರು ತಮ್ಮ ಬಳಿ ಇರುವ ನಗದು ಹಣವನ್ನು ಪ್ರತಿದಿನ ಬೆಳಿಗ್ಗೆ, ರಿಜಿಸ್ಟರ್ ನಲ್ಲಿ ಸ್ವಯಂ ಘೋಷಣೆ ಮಾಡಬೇಕು ಎಲ್ಲಾ ಸರಕಾರಿ ಕಚೇರಿಗಳಲ್ಲಿ, ನಿಗಮ ಮಂಡಳಿಗಳಲ್ಲಿ ನಗದು ಘೋಷಣಾ ವಹಿಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಈ ಮಧ್ಯೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ದಿಢೀರ್ ತಪಾಸಣೆ ನಡೆಸಿದಾಗ ನೌಕರರು ನಗದು ಘೋಷಣಾ ರಿಜಿಸ್ಟರ್ ನಲ್ಲಿ ನಗದನ್ನು ದಾಖಲಿಸದೆ ಇರುವ ಪ್ರಸಂಗ ಬೆಳಕಿಗೆ ಬಂದಿತ್ತು. ವಿಚಾರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ತಪ್ಪಿತಸ್ಥ ನೌಕರರ ವಿರುದ್ಧ ಎಫ್ಐಆರ್ ದಾಖಲಿಸಿ ಮೈಸೂರಿನ ವಿಶೇಷ ಸೆಷನ್ಸ್ ನ್ಯಾಯಾಲಯದಲ್ಲಿ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಲೋಕಾಯುಕ್ತ ಅಧಿಕಾರಿಗಳು ದೋಷಾರೋಪಣ ಪತ್ರ ಸಲ್ಲಿಸಿದ ಬೆಳಕಿನಲ್ಲಿ ತಪ್ಪಿತಸ್ಥ ನೌಕರರ ವಿರುದ್ಧ ಇಲಾಖಾ ವಿಚಾರಣೆಯನ್ನು, ಕೂಡ ಕೈಗೊಳ್ಳಲಾಯಿತು.
ಮೈಸೂರು ಮಹಾನಗರ ಪಾಲಿಕೆಯಲ್ಲಿ ನಗದು ಘೋಷಣ ವಹಿಯನ್ನು ನಿರ್ವಹಿಸದೇ ಇರುವುದರಿಂದ ತಾವು ನಗದು ಫೋಷಣೆ ಮಾಡಿಲ್ಲವೆಂಬ ಆರೋಪಿಗಳ ವಾದವನ್ನು ಪುರಸ್ಕರಿಸಿದ ವಿಶೇಷ ನ್ಯಾಯಾಲಯ ಅವರನು, ದೋಷ ಮುಕ್ತರನ್ನಾಗಿ ಮಾಡಿತ್ತು. ವಿಶೇಷ ನ್ಯಾಯಾಲಯದಲ್ಲಿ ಆರೋಪಿಗಳು ದೋಷ ಮುಕ್ತರಾದರೂ ಇಲಾಖಾ ವಿಚಾರಣೆ ಮುಂದುವರೆಯಿತು.
ಈ ನಡುವೆ ವಿಶೇಷ ನ್ಯಾಯಾಲಯವು ನೀಡಿದ ತೀರ್ಪಿನ ಬೆಳಕಿನಲ್ಲಿ ತನ್ನ ವಿರುದ್ಧ ನಡೆಸಲಾಗುವ ಇಲಾಖಾ ವಿಚಾರಣೆಯನ್ನು ರದ್ದುಪಡಿಸಬೇಕೆಂದು ಕೋರಿ ತಪ್ಪಿತಸ್ತ ನೌಕರರಾದ ಶಿವ ಎಂಬವರು ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಪಿಟಿಷನ್ ಸಂಖೆ, 79/2021 ದಾಖಲಿಸಿದರು.
ಹೈಕೋರ್ಟ್ ನಲ್ಲಿ ರಿಟ್ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಮೈಸೂರು ಮಹಾನಗರ ಪಾಲಿಕೆಯ ಕಚೇರಿಯಲ್ಲಿ ನಗದು ಘೋಷಣಾ ವಹಿಯನ್ನು ನಿರ್ವಹಿಸಿರುವುದಿಲ್ಲ, ಆದುದರಿಂದ ತಾವು ನಗದು ಘೋಷಣೆ ಮಾಡುವ ಪ್ರಸಂಗ ಉದ್ಭವಿಸುವುದಿಲ್ಲ ಎಂದರು. ಈ ಬಗ್ಗೆ ಎದುರುದಾರ ಪರ ಸರಕಾರಿ ವಕೀಲರನ್ನು ಪುಶ್ನಿಸಿದಾಗ ಸದರಿ ಕಚೇರಿಯಲ್ಲಿ ನಗದು ನಿರ್ವಹಣಾ ವಹಿಯನ್ನು ವರದಿಯನ್ನು ನಿರ್ವಹಿಸಿಲ್ಲ ಎಂಬ ಸಂಗತಿಯನ್ನು, ಒಪ್ಪಿಕೊಂಡರು.
ಉಭಯ ಪಕ್ಷಕಾರದ ವಾದವನ್ನು ಆಲಿಸಿದ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಪಿ.ಎಸ್ ದಿನೇಶ್ ಕುಮಾರ್ ಮತ್ತು ಕೃಷ್ಣ ಭಟ್ ಇವರನ್ನು ಒಳಗೊ0ಡ ವಿಭಾಗೀಯ ಪೀಠವು, ರಿಟ್ ಅರ್ಜಿದಾರರ ವಿರುದ್ಧ ನಡೆಸಲಾಗುವ ಇಲಾಖಾ ವಿಚಾರಣೆಯನ್ನು ರದ್ದುಪಡಿಸಿತು ಹಾಗೂ ಎಲ್ಲಾ ಸರಕಾರಿ ಕಚೇರಿಗಳಲ್ಲಿ ರಾಜ್ಯ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟಿ ನಿಗಮ ಮತ್ತು ಮಂಡಳಿಗಳಲ್ಲಿ ನಗದು ಘೋಷಣಾ ವಹಿಯನ್ನು ನಿರ್ವಹಿಸುವಂತೆ ಸೂಕ್ತ ಕ್ರಮ ಕೈಗೊಳ್ಳಲು ಸರಕಾರಕ್ಕೆ ನಿರ್ದೇಶಿಸಿತು.
ಹೈಕೋರ್ಟ್ ನೀಡಿದ ಆದೇಶದನ್ವಯ ಸರಕಾರವು ದಿನಾ0ಕ 4.2, 2022 ರಂದು DPAR(AR) 21 KTV 2022 ಪ್ರಕಾರ ಪರಿಷ್ಕೃತ ಸುತ್ತೋಲೆಯನ್ನು ಹೊರಡಿಸಿತು. ಸರಕಾರಿ ಕಚೇರಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ನೌಕರರು ತಮ್ಮ ಬಳಿ ಇರುವ ನಗದು ಹಣವನ್ನು ಪ್ರತಿದಿನ ಬೆಳಿಗ್ಗೆ, ರಿಜಿಸ್ಟರ್ ನಲ್ಲಿ ಸ್ವಯಂ ಘೋಷಣೆ ಮಾಡಬೇಕು ಎಲ್ಲಾ ಸರಕಾರಿ ಕಚೇರಿಗಳಲ್ಲಿ, ನಿಗಮ ಮಂಡಳಿಗಳಲ್ಲಿ ನಗದು ಘೋಷಣಾ ವಹಿಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು.
ಸರಕಾರಿ ಇಲಾಖೆ ಆಥವಾ ಮಂಡಳಿ ಅಥವಾ ನಿಗಮದ ಒಂದು ವಿಭಾಗದ ಗ್ರೂಪ್ ಬಿ ಅಧಿಕಾರಿಯ ಮೇಲ್ವೀಚಾರಣೆ ಮಾಡುತ್ತಾರೆ. ಯಾವುದೇ ಉದ್ಯೋಗಿ ಮಾಡಿದ ಘೋಷಣೆ ನಿಜವೇ ಅಲ್ಲವೇ ಎಂಬುದನ್ನು ಪರಿಶೀಲಿಸಲು ಅವರಿಗೆ ಅಧಿಕಾರವಿದೆ. ರಿಜಿಸ್ಟರ್ ನಲ್ಲಿ ಘೋಷಿಸಲಾದ ಮೊತ್ತಕ್ಕಿಂತ ಹೆಚ್ಚಿನ ನಗದು ಯಾವುದೇ ಉದ್ಯೋಗಿಯ ಬಳಿ ಕ0ಡುಬಂದರೆ ಅದನ್ನು ಅಕ್ರಮ ಗಳಿಕೆ ಎಂದು ಪರಿಗಣಿಸಲಾಗುತ್ತದೆ ಮತ್ತು ಹೆಚ್ಚುವರಿ ಹಣವನ್ನು ಕಾನೂನು ಬದ್ಧವಾಗಿದೆ ಎಂದು ಸಾಬೀತುಪಡಿಸುವುದು ಉದ್ಯೋಗಿಯ ಜವಾಬ್ದಾರಿಯಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ನಗೆದು ಘೋಷಣಾ ವಹಿಯನ್ನು ಯಾವುದೇ ಸಂದರ್ಭದಲ್ಲಿ ತಪಾಸಣೆ ನಡೆಸುವ ಅಧಿಕಾರ ಕಚೇರಿ ಮುಖ್ಯಸ್ಥರು, ಘಟಿಕದ ಮುಖ್ಯಸ್ಥರು ಹಾಗೂ ಇಲಾಖಾ ಮುಖ್ಯಸ್ಥರಿಗೆ ಇದೆ.
ನ್ಯಾಯಾಂಗ ಇಲಾಖೆಯಲ್ಲಿ ಗ್ರೂಪ್ ಬಿ ಅಧಿಕಾರಿ ಇರುವ ಕಚೇರಿಯಲ್ಲಿ ನಗದು ಘೋಷಣಾ ವಹಿಯನ್ನು, ಪರಿಶೀಲಿಸುವ ಕಾರ್ಯ ಗ್ರೂಪ್ ಬಿ ಅಧಿಕಾರಿಯದ್ದಾಗಿರುತ್ತದೆ. ಕಚೇರಿ ಮುಖ್ಯಸ್ಥರಾದ ನ್ಯಾಯಾಧೀಶರು, ಜಿಲ್ಲಾ ಫಟಕದ ಮುಖ್ಯಸ್ಥರಾದ ಪ್ರಧಾನ ಜಿಲ್ಲಾ ನ್ಯಾಯಾಧೀಶರು ಹಾಗೂ ಇಲಾಖಾ ಮುಖ್ಯಸ್ಥರ ಪರವಾಗಿ ಸಕ್ಷಮ ಅಧಿಕಾರಿಗಳು ಸದರಿ ವಹಿಯನ್ನು, ಯಾವುದೇ ಸಮಯದಲ್ಲಿ ತಪಾಸಣೆ ನಡೆಸುವ ಅಧಿಕಾರ ಹೊಂದಿರುತ್ತಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ