ನಿಷೇಧಿತ ವಸ್ತುಗಳ ಪ್ರಾಯೋಗಿಕ ಪರೀಕ್ಷೆಗೂ ಮುನ್ನ ಮ್ಯಾಜಿಸ್ಟ್ರೇಟ್ ಮುಂದೆ ಪ್ರಮಾಣೀಕರಿಸುವುದು ಕಡ್ಡಾಯ – ಹೈಕೋರ್ಟ್
ಬೆಂಗಳೂರು: ಗಾಂಜಾ ಪ್ರಕರಣದಲ್ಲಿ ವಿಧಿಸಿದ್ದ ಜೈಲು ಶಿಕ್ಷೆ ಆದೇಶವನ್ನ ಪ್ರಶ್ನಿಸಿ ಆರೋಪಿ ಸಲ್ಲಿಸಿದ್ದ ಮೇಲ್ಮನವಿಯನ್ನ ಪುರಸ್ಕರಿಸಿದ ರ‍್ನಾಟಕ ಹೈಕರ‍್ಟ್ ಆರೋಪಿಗಳನ್ನ ಖುಲಾಸೆಗೊಳಿಸಿ ಆದೇಶ ನೀಡಿದೆ.
ಅಲ್ಲದೇ ಇದೇ ವೇಳೆ ನಿಷೇಧಿತ ವಸ್ತುಗಳನ್ನು ರಾಸಾಯನಿಕ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಮೊದಲು ಅಧಿಕಾರಿಗಳು ತಾವು ವಶಪಡಿಸಿಕೊಂಡ ನಿಷೇಧಿತ ದಾಸ್ತಾನುಗಳ ತಖ್ತೆಯನ್ನು ಸಿದ್ಧಪಡಿಸಬೇಕು ಮತ್ತು ಅದನ್ನು ನ್ಯಾಯವ್ಯಾಪ್ತಿಯ ಮ್ಯಾಜಿಸ್ಟ್ರೇಟ್ ಮುಂದೆ ಪ್ರಮಾಣೀಕರಿಸುವುದು ಕಡ್ಡಾಯವಾಗಿದೆ ಎಂದು ಹೈಕರ‍್ಟ್ ತರ‍್ಪು ನೀಡಿದೆ.
ರ‍್ನಾಟಕ ಹೈಕರ‍್ಟ್ ನ ನ್ಯಾ. ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತರ‍್ಪು ನೀಡಿದೆ.
ಬೀದರ್ ನ ಹುಮ್ನಾಬಾದ್ ಪೊಲೀಸ್ ಠಾಣೆಯ ಪೊಲೀಸರು ಹುಮ್ನಾಬಾದ್ ಬಸ್ ನಿಲ್ದಾಣದಲ್ಲಿ ಮುಂಬೈ ನಿವಾಸಿ ಶಾರೂಖ್ ಮತ್ತು, ಉತ್ತರ ಪ್ರದೇಶದ ಶುಭಂ ಅವರಿಂದ ಒಟ್ಟು 39 ಕೆ.ಜಿ. ಗಾಂಜಾ ವಶಪಡಿಸಿಕೊಂಡು ಅವರ ವಿರುದ್ಧ ಗಾಂಜಾ ಪ್ರಕರಣವನ್ನು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಬೀದರ್ ನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಿನಾಂಕ 29-09-2022 ರಂದು ಆರೋಪಿಗಳಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತರ‍್ಪು ನೀಡಿತ್ತು.
ಈ ತರ‍್ಪನ್ನು ಪ್ರಶ್ನಿಸಿ ಬಾಧಿತ ರ‍್ಜಿದಾರರು ಹೈಕರ‍್ಟ್ ಮೆಟ್ಟಿಲೇರಿದ್ದರು. ಮೇಲ್ಮನವಿದಾರರ ಪರ ವಾದ ಮಂಡಿಸಿದ ವಕೀಲರು, ಪ್ರಕರಣದ ವಿಚಾರಣೆಯ ವೇಳೆ, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಯನ್ನು ಪ್ರಾಸಿಕ್ಯೂಷನ್ ಪರ ಸಾಕ್ಷ್ಯ ವಿಚಾರಣೆ ನಡೆಸಿರಲಿಲ್ಲ. ಅದೇ ರೀತಿ, NDPS ಕಾಯ್ದೆಯ ಸೆಕ್ಷನ್ 52A ಪ್ರಕಾರ, ಪ್ರಯೋಗಾಲಯಕ್ಕೆ ಕಳುಹಿಸುವ ಮುನ್ನ ಅಗತ್ಯ ಕಾನೂನು ಕ್ರಮವನ್ನು ಕೈಗೊಂಡಿಲ್ಲ ಎಂಬುದನ್ನು ನ್ಯಾಯಪೀಠದ ಮುಂದೆ ನಿವೇದಿಸಿಕೊಂಡರು.
NDPS ಕಾಯ್ದೆಯ ಸೆಕ್ಷನ್ 52A ಪ್ರಕಾರ, ತನಿಖಾಧಿಕಾರಿಯು ವಶಪಡಿಸಿಕೊಂಡ ನಿಷೇಧಿತ ವಸ್ತುಗಳನ್ನು. ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಮೊದಲು, ಆ ದಾಸ್ತಾನುಗಳ ತಖ್ತೆಯನ್ನು ತಯಾರಿಸಿ. ಮ್ಯಾಜಿಸ್ಟ್ರೇಟ್ ಮುಂದೆ ಪ್ರಮಾಣೀಕರಿಸುವುದು ಕಡ್ಡಾಯವಾಗಿದೆ.
ಆದರೆ, ಈ ಪ್ರಕರಣದಲ್ಲಿ ಗೆಜೆಟೆಡ್ ಅಧಿಕಾರಿಯ ಮುಂದೆ ಈ ವಸ್ತುಗಳನ್ನು ಪ್ರಮಾಣೀಕರಿಸಲಾಗಿತ್ತು. ಹಾಗಾಗಿ, ಈ ನಿಶಾನೆಗಳನ್ನು ಪ್ರಾಥಮಿಕ ಸಾಕ್ಷ್ಯವನ್ನಾಗಿ ಪರಿಗಣಿಸಲು ಬರುವುದಿಲ್ಲ. ಆದುದರಿಂದ ಸಾಕ್ಷ್ಯದ ಕೊರತೆಯಿಂದ ನ್ಯಾಯಿಕ ವಿಚಾರಣೆಯಲ್ಲೂ ವ್ಯತ್ಯಾಸ ಉಂಟಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಮತ್ತು ಮೇಲ್ಮನವಿದಾರರು ಸಲ್ಲಿಸಿದ್ದ ರ‍್ಜಿಯನ್ನು ಪುರಸ್ಕರಿಸಿ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ