23/12/2024

Law Guide Kannada

Online Guide

ತಲೆಮರೆಸಿಕೊಂಡ ಆರೋಪಿಗಳ ಆಸ್ತಿ ಅವರಿಗೆ ಸೇರದೆ ಇದ್ದರೇ ಮುಟ್ಟುಗೋಲಿಗೆ ಆದೇಶಿಸುವಂತಿಲ್ – ಹೈಕೋರ್ಟ್

ಅಲಹಾಬಾದ್: ತಲೆಮರೆಸಿಕೊಂಡ ಆರೋಪಿಗಳ ಆಸ್ತಿ ಅವರಿಗೆ ಸೇರದೆ ಇದ್ದರೇ ಆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶಿಸುವಂತಿಲ್ಲ ಎಂದು ಅಲಹಾಬಾದ್ ಹೈಕರ‍್ಟ್ ತರ‍್ಪು ನೀಡಿದೆ.

ತಲೆಮರೆಸಿಕೊಂಡಿದ್ದ ಎಂದು ಘೋಷಿಸಲಾದ ಆರೋಪಿ ವ್ಯಕ್ತಿ ವಾಸಿಸುತ್ತಿದ್ದ ಎರಡು ಕೊಠಡಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಅಲಹಾಬಾದ್‌ ಹೈಕರ‍್ಟ್‌ನ ಅಬ್ದುಲ್ ಮೊಯಿನ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ತಲೆಮರೆಸಿಕೊಂಡ ಆರೋಪಿಗಳ ಆಸ್ತಿ ಆತನಿಗೆ ಸೇರದೇ ಇದ್ದರೆ ಆತ ಅಲ್ಲಿ ಕೇವಲ ವಾಸಿಸುತ್ತಿದ್ದ ಎಂದ ಮಾತ್ರಕ್ಕೆ ಆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನ್ಯಾಯಾಲಯ ಆದೇಶಿಸುವಂತಿಲ್ಲ ಎಂದು ತರ‍್ಪು ನೀಡಿದೆ.

ಮೇಲ್ಮನವಿಯನ್ನು ಪುರಸ್ಕರಿಸಿ ಮುಟ್ಟುಗೋಲು ಆದೇಶವನ್ನು ರದ್ದುಗೊಳಿಸಿದ ನ್ಯಾಯಪೀಠವು, ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಯ ಸೆಕ್ಷನ್‌ 83ರ ಪ್ರಕಾರ ಮುಟ್ಟುಗೋಲು (ಪ್ರೊಕ್ಲಮೇಶನ್) ಆದೇಶ ಕೇವಲ ಆತನ ಮಾಲಕತ್ವದ ಆಸ್ತಿಗೆ ಮಾತ್ರ ಸೀಮಿತವಾಗಿದೆ.

ಆರೋಪಿ ವಾಸವಿದ್ದ ಎರಡು ಕೊಠಡಿಗಳನ್ನಷ್ಟೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬ ವಿಚಾರಣಾ ನ್ಯಾಯಾಲಯದ ತರ‍್ಪು ರ‍್ಥಹೀನವಾಗಿದೆ ಎಂದು ಹೈಕರ‍್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ವಿಚಾರಣಾ ನ್ಯಾಯಾಲಯದ ಆದೇಶವನ್ನು ವಿರೋಧಿಸಿದ ಮೇಲ್ಮನವಿದಾರರು, ಮುಟ್ಟುಗೋಲು ಹಾಕಲು ಆದೇಶಿಸಲಾದ ಆಸ್ತಿಯ ಏಕಮಾತ್ರ ಮಾಲಕ ತಾನಾಗಿದ್ದು, ಈ ಆಸ್ತಿಗೂ ತನ್ನ ಮಗ ಫೈಜ್‌ಗೂ ಸಂಬಂಧ ಇಲ್ಲ ಎಂದು ವಾದಿಸಿದ್ದರು. ಆದರೆ, ವಿಚಾರಣಾ ನ್ಯಾಯಾಲಯ ರ‍್ಜಿದಾರರ ವಾದವನ್ನು ತಿರಸ್ಕರಿಸಿತ್ತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.