ಹೆರಿಗೆ ಸವಲತ್ತು ನೀಡದ ಕಾನೂನು ಸೇವೆಗಳ ಪ್ರಾಧಿಕಾರದ ವಿರುದ್ದ ಮೇಲ್ಮನವಿ: ರ‍್ಜಿ ತಿರಸ್ಕರಿಸಿದ ಸುಪ್ರೀಂಕರ‍್ಟ್
ನವದೆಹಲಿ: ಹೆರಿಗೆ ಸೌಲಭ್ಯ ಕಾಯ್ದೆಯು ಉದ್ಯೋಗದ ಸ್ವರೂಪವನ್ನು ಆಧರಿಸಿ ತಾರತಮ್ಮ ಮಾಡುವಂತಿಲ್ಲ ಎ೦ದು ದೆಹಲಿ ಹೈಕರ‍್ಟ್ ಏಕಸದಸ್ಯ ನೀಡಿದ್ದ ಆದೇಶವನ್ನು ದೆಹಲಿ ಹೈಕರ‍್ಟ್ನ ವಿಭಾಗೀಯ ನ್ಯಾಯಪೀಠ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕರ‍್ಟ್ ಮೊರೆ ಹೋಗಿದ್ದ ಬಾಧಿತೆ ವಕೀಲರೊಬ್ಬರಿಗೆ ಸುಪ್ರೀಂನಲ್ಲಿಯೋ ಕೂಡ ಹಿನ್ನಡೆಯಾಗಿದೆ.
ಹೌದು, ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಕಾನೂನು ನೆರವು ವಕೀಲರಿಗೆ ಹೆರಿಗೆ ಸವಲತ್ತು ನೀಡದ ನರ‍್ಧಾರವನ್ನು ಪಶ್ನಿಸಿ ವಕೀಲರಾದ ಅನ್ವೇಷಾ ದೇಬ್ ಸಲ್ಲಿಸಿದ್ದ ರ‍್ಜಿಯನ್ನು ಸುಪ್ರೀಂ ಕರ‍್ಟ್ ತಿರಸ್ಕರಿಸಿದೆ.
ಸುಪ್ರೀಂ ಕರ‍್ಟ್ನ ನ್ಯಾ. ಬೇಲಾ ಎಂ. ತ್ರಿವೇದಿ ಮತ್ತು ನ್ಯಾ. ಸತೀಶ್ ಚ೦ದ್ರ ರ‍್ಮಾ ಅವರಿದ್ದ ವಿಭಾಗೀಯ ನ್ಯಾಯಪೀಠ ರ‍್ಜಿಯನ್ನು ತಿರಸ್ಕರಿಸಿ ದೆಹಲಿ ಹೈಕರ‍್ಟ್ ವಿಭಾಗೀಯ ನ್ಯಾಯಪೀಠದ ತರ‍್ಪನ್ನು ಎತ್ತಿಹಿಡಿದಿದೆ.
ಹೆರಿಗೆ ಸೌಲಭ್ಯ ಕಾಯ್ದೆಯು ಉದ್ಯೋಗದ ಸ್ವರೂಪವನ್ನು ಆಧರಿಸಿ ತಾರತಮ್ಮ ಮಾಡುವಂತಿಲ್ಲ ಎ೦ದು ದೆಹಲಿ ಹೈಕರ‍್ಟ್ ಏಕಸದಸ್ಯ ನೀಡಿದ್ದ ಆದೇಶವನ್ನು ದೆಹಲಿ ಹೈಕರ‍್ಟ್ನ ವಿಭಾಗೀಯ ನ್ಯಾಯಪೀಠ ರದ್ದುಪಡಿಸಿತ್ತು. ಈ ಆದೇಶದ ವಿರುದ್ದ ಬಾಧಿತೆ ವಕೀಲರಾದ ಅನ್ವೇಷಾ ದೇಬ್ ಸುಪ್ರೀಂ. ಕರ‍್ಟ್ ಮೆಟ್ಟಿಲೇರಿದ್ದರು.
ಕಾನೂನು ಸೇವಾ ಪ್ರಾಧಿಕಾರದೊ೦ದಿಗೆ ತೊಡಗಿಕೊಂಡಿರುವ ವಕೀಲರು ಉದ್ಯೋಗಿ ಅಲ್ಲ. ಹಾಗಾಗಿ ಅವರು ಹೆರಿಗೆ ಸೌಲಭ್ಯಗಳ ಕಾಯ್ದೆ ೧೯೬೧ರ ಅಡಿಯಲ್ಲಿ ಹೆರಿಗೆ ಸವಲತ್ತು ಪಡೆಯಲು ರ‍್ಹರಲ್ಲ ಎಂದು ದೆಹಲಿ ಹೈಕರ‍್ಟ್ ವಿಭಾಗೀಯ ನ್ಯಾಯಪೀಠ ಕಳೆದ ಎಪ್ರಿಲ್ನಲ್ಲಿ ತರ‍್ಪು ನೀಡಿತ್ತು. ಅಲ್ಲದೆ ವಕೀಲರಾದ ಅನ್ವೇಷಾ ದೇಬ್ ಅವರಿಗೆ ವೈದ್ಯಕೀಯ, ಹಣಕಾಸು ನೆರವು ಹಾಗೂ ಇತರ ಸೌಲಭ್ಯಗಳನ್ನು ಒದಗಿಸುವಂತೆ ದೆಹಲಿ ಹೈಕರ‍್ಟ್ ಏಕಸದಸ್ಯ ನ್ಯಾಯಪೀಠ ನೀಡಿದ್ದ ತರ‍್ಪನ್ನು ಅದು ರದ್ದುಪಡಿಸಿತ್ತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ