ಹಳಸಿದ ಸಂಬಂಧ: ಪ್ರಿಯಕರನ ವಿರುದ್ದ ಯುವತಿ ದಾಖಲಿಸಿದ್ದ ಅತ್ಯಾಚಾರ ಕೇಸ್ ರದ್ದು
ಬೆಂಗಳೂರು: ಈ ಹಿಂದೆ ಸಂಬಂಧಗಳಿಗೆ ಇದ್ದಂತಹ ಬೆಲೆ ಇತ್ತೀಚಿನ ದಿನಗಳಲ್ಲಿ ಯಾಕೋ ಕಾಣುತ್ತಿಲ್ಲ. ಮದುವೆಯಾದ ವರ್ಷಕ್ಕೆ ವಿಚ್ಛೇದನವಾಗುವಂತಹ ಪ್ರಕರಣಗಳು, ಹಲವಾರು ವರ್ಷಗಳ ಕಾಲ ಪ್ರೀತಿಯಲ್ಲಿ ಬಿದ್ದಿದ್ದರೂ ಸಹ ಪರಸ್ಪರ ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳಲಾಗದೇ ಬ್ರೇಕ್ ಅಪ್ ಮಾಡಿಕೊಳ್ಳುವಂತಹದ್ದೇ ಹೆಚ್ಚಾಗುತ್ತಿದೆ. ಅಂತೆಯೇ ಇಲ್ಲೊಂದು ಜೋಡಿ ಸುದೀರ್ಘ ಆರು ವರ್ಷಗಳ ಕಾಲ ಪ್ರೀತಿಸಿದ್ದು ಸಂಬಂಧ ಹಳಸಿದ ಬಳಿಕ ಯುವತಿಯೇ ಪ್ರಿಯಕರನ ವಿರುದ್ದ ಅತ್ಯಾಚಾರದ ದೂರು ದಾಖಲಿಸಿದ್ದಳು. ಆದರೆ ಕರ್ನಾಟಕ ಹೈಕೋರ್ಟ್ ಪ್ರಿಯಕರನ ವಿರುದ್ಧ ಯುವತಿ ದಾಖಲಿಸಿದ್ದ ಅತ್ಯಾಚಾರ ಕೇಸನ್ನು ರದ್ದುಗೊಳಿಸಿದೆ.
ಮಾಜಿ ಪ್ರೇಯಸಿ ತನ್ನ ವಿರುದ್ದ ಬೆ0ಗಳೂರಿನ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಬೇಕು ಎ0ದು ಕೋರಿ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊ0ಡ ನ್ಯಾಯಪೀಠ, ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರಕರಣವನ್ನ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಆರು ವರ್ಷಗಳ ಕಾಲ ಪ್ರೀತಿಸಿದ ವಯಸ್ಕರ ನಡುವೆ ನಡೆದಿರುವ ಸಮ್ಮತಿ ಪೂರ್ವಕ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎ0ದು ಪರಿಗಣಿಸಲಾಗದು. ಅರ್ಜಿದಾರರು ಮತ್ತು ದೂರುದಾರರ ನಡುವಿನ ಸ0ಬ0ಧ ಆರು ವರ್ಷಗಳಾಗಿದ್ದು. ಪ್ರೀತಿ ಕ್ಷೀಣಿಸಿದ ಕಾರಣಕ್ಕೆ ಸಮ್ಮತಿಯಿ0ದ ನಡೆಸಲಾದ ದೈಹಿಕ ಸ0ಬ0ಧವನ್ನು ಅತ್ಯಾಚಾರ ಎ0ಬ ಪದದ ವ್ಯಾಪ್ತಿಯಲ್ಲಿ ಪರಿಗಣಿಸಲಾಗದು ಎ0ದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ