AIBE ಪರೀಕ್ಷೆ ಪಾಸ್ ಆಗದೇ ವಕೀಲಿಕೆ ಮಾಡಲು ಅವಕಾಶ ಇಲ್ಲ: ವಕಾಲತ್ತಿಗೆ ಸಹಿ ಹಾಕಿದ್ರೆ ಸನದು ರದ್ದು
ಬೆಂಗಳೂರು: ರಾಜ್ಯದಲ್ಲಿ ವಕೀಲರಾಗಿ ನೋಂದಾಯಿಸಿಕೊಂಡ ಎಲ್ಎಲ್ಬಿ ಪದವೀಧರರಿಗೆ ಒ0ದು ಮಹತ್ವದ ಸೂಚನೆ ನೀಡಲಾಗಿದ್ದು, AIBE ಪರೀಕ್ಷೆ ಪಾಸ್ ಆಗದೇ ವಕೀಲಿಕೆ ಮಾಡಲು ಅವಕಾಶ ಇಲ್ಲ. ಒಂದು ವೇಳೆ ವಕಾಲತ್ತಿಗೆ ಸಹಿ ಹಾಕಿದರೇ ವಕೀಲರ ಸನದು ರದ್ದಾಗಲಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ವಿಶಾಲ್ ರಘು ಎಚ್ಚರಿಕೆ ನೀಡಿದ್ದಾರೆ.
ಇ0ತಹ ಕೃತ್ಯ ನಡೆಸುತ್ತಿದ್ದ ಯಲಬುರ್ಗಾದ ವಕೀಲ ಆನ0ದ ಎ. ಉಳ್ಳಾಗಡ್ಡಿ ಅವರ ಸನದನ್ನು ಅಮಾನತು ಮಾಡಲಾಗಿದೆ ಎ0ಬುದನ್ನು ನೆನಪಿಸಿರುವ ವಿಶಾಲ್ ರಘು ಅವರು, ಎನ್ ರೋಲ್ ಆಗಿ AIBE ಪರೀಕ್ಷೆ ಪಾಸ್ ಆಗದೇ ಇದ್ದವರು ತಮ್ಮ ಸಹವರ್ತಿಗಳ ಜೊತೆಗೆ ಆಗಲೀ, ವೈಯಕ್ತಿಕ ನೆಲೆಯಲ್ಲಿ ಆಗಲೀ ವಕಾಲತ್ತಿಗೆ ಸಹಿ ಹಾಕುವ ಹಾಗಿಲ್ಲ. ಒ0ದು ವೇಳೆ, ವಕಾಲತ್ತಿಗೆ ಸಹಿ ಹಾಕಿದ್ರೆ ಅಂಥ ವಕೀಲರ ಸನದು ರದ್ದು ಆಗಲಿದೆ ಎ0ದು ಎಚ್ಚರಿಕೆ ನೀಡಿದ್ದಾರೆ.
2010ರ ಜುಲೈ ಹಾಗೂ ನ0ತರದಲ್ಲಿ ಕಾನೂನು ಪದವಿ ಪಡೆದವರು ಎರಡು ವರ್ಷಗಳ ತನಕ ಕೋಟು ಧರಿಸಿ ನ್ಯಾಯಾಲಯಕ್ಕೆ ಬರಬಹುದು. ಆದರೆ, ವಕಾಲತ್ತಿಗೆ ಸಹಿ ಹಾಕುವಂತಿಲ್ಲ. ಅಷ್ಟೇ ಅಲ್ಲ, ವಕೀಲರ ಡ್ರೆಸ್(ಧಿರಸು)ನಲ್ಲಿ ವಕೀಲಿಕೆ ನಡೆಸಲು ಅವಕಾಶ ಇಲ್ಲ ಎ0ದು ಅವರು ಹೇಳಿದ್ದಾರೆ.
ಈ ಎರಡು ವರ್ಷಗಳ ಅವಧಿಯಲ್ಲಿ ಅವರು AIBE ಪರೀಕ್ಷೆ ಪಾಸ್ ಮಾಡಬೇಕು. ಇಲ್ಲದಿದ್ದರೆ, ವಕೀಲರ ಡ್ರೆಸ್ ಹಾಕಿ ವಕೀಲಿಕೆ ಮಾಡಲೂ ಅವಕಾಶ ಇಲ್ಲ ಎಂದಿದ್ದಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ